ETV Bharat / state

'ನನ್ನ ಪತ್ನಿ ಎಂದೂ ‌ರಾಜಕೀಯಕ್ಕೆ ಬಂದವಳಲ್ಲ, ಅವಳನ್ನು ಸಹ ಬೀದಿಗೆ ತಂದರು': ಸಿದ್ದರಾಮಯ್ಯ ಕಿಡಿ - CM Slams BJP - CM SLAMS BJP

ನನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸುವುದಕ್ಕೆ ಆಗದೇ ಹಣಿಯುವುದಕ್ಕೆ ನೋಡುತ್ತಿದ್ದರಲ್ಲ, ನಾನು ಮಾಡಿದ ತಪ್ಪಾದರೂ ಯಾವುದು ಹೇಳಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದವರನ್ನು ಪ್ರಶ್ನಿಸಿದರು.

CM SLAMS BJP
ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Oct 5, 2024, 5:59 PM IST

ರಾಯಚೂರು: 'ನನ್ನ ಪತ್ನಿ ಎಂದೂ ‌ರಾಜಕೀಯಕ್ಕೆ ಬಂದವಳಲ್ಲ. ಅಂತಹ ನನ್ನ ಪತ್ನಿಯನ್ನು ಬೀದಿಗೆ ತಂದರು. ನಾನು ಮಾಡಿದ ತಪ್ಪಾದರೂ ಏನು' ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ‌ ಇಂದು ಆಯೋಜಿಸಿದ್ದ 'ಸ್ವಾಭಿಮಾನಿ ಬೃಹತ್ ಸಮಾವೇಶ'ದಲ್ಲಿ ಮೊದಲ ಬಾರಿಗೆ ತಮ್ಮ ಪತ್ನಿ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು.

ನಾವು ನಮ್ಮ ರಾಜಕೀಯದಲ್ಲಿ ಯಾವುದೇ ಜಾತಿ, ಧರ್ಮ ಮಾಡಿದವರಲ್ಲ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಶಕ್ತಿ ತುಂಬಿಸುವಂತಹ ಕೆಲಸ ಮಾಡಿದ್ದೇವೆ. ನಮ್ಮ ಈ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಮತ್ತು ಜೆಡಿಎಸ್​ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಯಾವತ್ತೂ ರಾಜಕೀಯಕ್ಕೆ ಬಾರದ ನನ್ನ ಪತ್ನಿಯನ್ನು ಬೀದಿಗೆ ತಂದರು. ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ನನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸುವುದಕ್ಕೆ ಆಗದೇ ಹಣಿಯುವುದಕ್ಕೆ ನೋಡುತ್ತಿದ್ದರಲ್ಲ, ನಾನು ಮಾಡಿದ ತಪ್ಪಾದರೂ ಯಾವುದು ಹೇಳಿ? ನಾನು ಹಿಂದುಳಿದ ಜಾತಿಗೆ ಸೇರಿದವನು ಅಂತ ನನ್ನ ಮೇಲೆ ಈ ದ್ವೇಷನಾ?, ಸಿದ್ದರಾಮಯ್ಯ ಕುರಿ ಕಾಯುತ್ತಿದ್ದವನ ಮಗ ಅಂತನಾ? ಎರಡನೇ ಬಾರಿಗೆ ಸಿಎಂ ಆದನಲ್ಲಾ ಅನ್ನೋ ಹೊಟ್ಟೆ ಉರಿಯೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆರ್.ಅಶೋಕ್, ಬಿಎಸ್​ವೈ, ವಿಜಯೇಂದ್ರ, ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಹೊಟ್ಟೆ ಉರಿಯಾಗಿದೆ ಎಂದು ಟೀಕಿಸಿದರು.

ದಿನನಿತ್ಯ ರಾಜೀನಾಮೆ ಕೊಡಿ ಅಂತ ನಿತ್ಯ ಹೇಳ್ತಿದ್ದಾರೆ. ನನಗೂ ಬೇಜಾರಾಗಿದೆ. ನಿಮಗೋಸ್ಕರ ನಾನು ಹೋರಾಟ ಮುಂದುವರೆಸುತ್ತೇನೆ. ನಾನು ಹೋರಾಟದಿಂದ ಹಿಂದೆ ಸರಿಯುವವನಲ್ಲ. ನಾನು ಏನು ತಪ್ಪು ಮಾಡಿದವನಲ್ಲ. ಎಲ್ಲ ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿ ದೊಡ್ಡದು ಅಂತಾ ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ನಾನು ಇವರ ಗೊಡ್ಡು ಬೆದರಿಕಗಳಿಗೆ ಬೆದರುವುದು ಇಲ್ಲ, ಜಗ್ಗುವುದು ಅಲ್ಲ. ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ನೀವೇ ಉತ್ತರ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಎನ್.ಎಸ್. ಬೋಸರಾಜು, ಹೆಚ್.ಸಿ. ಮಹಾದೇವಪ್ಪ, ಡಾ. ಶರಣಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಹೆಚ್.ಮುನಿಯಪ್ಪ, ಶಾಸಕರಾದ ಬಸವನಗೌಡ ದದ್ದಲ್, ಹಂಪಯ್ಯ ನಾಯಕ ಇದ್ದರು. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯಗೆ ಬೆಳ್ಳಿ ಗದೆ ಹಾಗೂ ಸಚಿವರಿಗೆ ಬೆಳ್ಳಿ ಕತ್ತಿ ನೀಡಿ ಸನ್ಮಾನಿಸಿದರು.

ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ ಬರೀ ಊಹಾಪೋಹ: ಸಿದ್ದರಾಮಯ್ಯ - Siddaramaiah Clarifies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.