ETV Bharat / state

ಮಂಡ್ಯದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಪ್ರಚೋದನೆ: ಸಿಎಂ, ಡಿಸಿಎಂ ವಾಗ್ದಾಳಿ - ಡಿಸಿಎಂ

ಮಂಡ್ಯದಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ಪಾದಯಾತ್ರೆ, ಪ್ರತಿಭಟನೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

cm, dcm
ಸಿಎಂ, ಡಿಸಿಎಂ ವಾಗ್ದಾಳಿ
author img

By ETV Bharat Karnataka Team

Published : Jan 29, 2024, 2:18 PM IST

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿಯವರೇ ಪ್ರಚೋದನೆ ಮಾಡುತ್ತಿದ್ದಾರೆ ಎ‌ಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಅವರು ಅನುಮತಿ ತೆಗೆದುಕೊಂಡಿರುವುದು ರಾಷ್ಟ್ರೀಯ ಧ್ವಜ​ ಮತ್ತು ಕನ್ನಡ ಧ್ವಜ ಹಾರಿಸಲು. ಯಾವುದಕ್ಕೆ ಅನುಮತಿ ತೆಗೆದುಕೊಂಡಿದ್ದಾರೋ ಅದನ್ನು ಮಾಡುತ್ತಿದ್ದರೆ ಜಿಲ್ಲಾಡಳಿತ ಯಾಕೆ ಮಧ್ಯಪ್ರವೇಶ ಮಾಡುತ್ತಿತ್ತು? ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪಕ್ಕೆ, ಅವರಿಗೆ ನನ್ನ ಮೇಲೆ ಬೇರೇನೂ ಹೇಳಲು ಇಲ್ಲವಲ್ಲ? ಅದಕ್ಕೆ ಹೀಗೆ ಹೇಳುತ್ತಿದ್ದಾರೆ. ನಾನು ಹಿಂದು. ಎಲ್ಲಾ ಧರ್ಮದ ಜನರನ್ನೂ ಪ್ರೀತಿಸುತ್ತೇನೆ. ಸೆಕ್ಯೂಲರಿಸಂ ಎಂದರೇನು?. ಸಂವಿಧಾನದಲ್ಲಿ ಏನು ಹೇಳಿದ್ದಾರೆ?. ಸಹಬಾಳ್ವೆ ಸಹಿಷ್ಣುತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು ಎಂದರು.

  • ಮನುಷ್ಯರನ್ನು ಪ್ರೀತಿಸುವ, ಎಲ್ಲ ಧರ್ಮಗಳನ್ನು ಗೌರವಿಸುವ ಹಿಂದೂ ನಾನು.

    ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಸಮಾಜವನ್ನು ಧರ್ಮಾಧಾರಿತವಾಗಿ ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.
    - ಮುಖ್ಯಮಂತ್ರಿ @siddaramaiah#BJPagainstHarmony pic.twitter.com/iG75u4lF88

    — CM of Karnataka (@CMofKarnataka) January 29, 2024 " class="align-text-top noRightClick twitterSection" data=" ">

ಡಿಸಿಎಂ ಡಿಕೆಶಿ ಹೇಳಿದ್ದೇನು?: ಮಂಡ್ಯದಲ್ಲಿ ಬಿಜೆಪಿಗೆ ನೆಲೆ ಇಲ್ಲ. ನೆಲೆ ಗಟ್ಟಿ ಮಾಡುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಪಂಚಾಯತಿಯವರಲ್ಲಿ ಪರ್ಮಿಷನ್ ಕೇಳಿದ್ದಾರೆ. ಆ ಪ್ರಕಾರ ಮಾಡಬೇಕಿತ್ತು. ಆದರೆ ಇವರು ಸುಮ್ಮನೆ ಎತ್ತಿಕಟ್ಟಿ ಗಲಾಟೆ ಮಾಡಬೇಕು, ಅಶಾಂತಿ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಕಾನೂನು ಏನಿದೆಯೋ ಆ ಪ್ರಕಾರ ನಾವೆಲ್ಲರೂ ನಡೆದುಕೊಳ್ಳಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಬಿಜೆಪಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರ್ ರೀ ಹಿಂದು. ಮೊದಲು ನಾವೆಲ್ಲರೂ ಭಾರತೀಯರು. ಮೊದಲು ಭಾರತದ ಸಂವಿಧಾನ. ಸುಮ್ಮನೆ ಅಶಾಂತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ: ಹನುಮ ಧ್ವಜ ತೆರವುಗೊಳಿಸಿರುವುದು ಕಾಂಗ್ರೆಸ್ ಅಧಃಪತನಕ್ಕೆ ನಾಂದಿ: ಶಾಸಕ ಎಸ್​.ಎನ್​ ಚನ್ನಬಸಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.