ETV Bharat / state

ಸಿದ್ದರಾಮಯ್ಯ - ಕುಮಾರಸ್ವಾಮಿ ಪರಸ್ಪರ ನಮಸ್ಕಾರ; ಎದುರಾದರೂ ಮುಖ ನೋಡದ ಡಿಕೆಶಿ - ಹೆಚ್​​ಡಿಕೆ - CM Siddaramaiah - CM SIDDARAMAIAH

ವಿಧಾನಸೌಧ ಕಾರಿಡಾರ್​​ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಪರಸ್ಪರ ಮುಖಾಮುಖಿಯಾದರು.

cm siddaramaiah
ಸಿದ್ದರಾಮಯ್ಯ-ಕುಮಾರಸ್ವಾಮಿ ಮುಖಾಮುಖಿ (ETV Bharat)
author img

By ETV Bharat Karnataka Team

Published : Jun 3, 2024, 12:48 PM IST

Updated : Jun 3, 2024, 1:05 PM IST

ಸಿದ್ದರಾಮಯ್ಯ - ಕುಮಾರಸ್ವಾಮಿ ಮುಖಾಮುಖಿ (ETV Bharat)

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ವಿಧಾನಸೌಧ ಕಾರಿಡಾರ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಮುಖಾಮುಖಿಯಾದ ಘಟನೆ ನಡೆಯಿತು.

ತಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ವಿಧಾನಸಭೆ ಕಾರ್ಯದರ್ಶಿ ಚೇಂಬರ್ ಹೊರಗಡೆ ಸಿಎಂ ಸಿದ್ದರಾಮಯ್ಯ ನಿಂತಿದ್ದರು. ಈ ವೇಳೆ, ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿ ಕುಮಾರಸ್ವಾಮಿ ಹೊರಗೆ ಬರುತ್ತಿರುವಾಗ ಇಬ್ಬರೂ ಮುಖಾಮುಖಿಯಾದರು. ಪರಸ್ಪರ ಎದುರಾದಾಗ ಉಭಯ ನಾಯಕರು ನಮಸ್ಕರಿದರು.

ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಜಿ.ಟಿ. ದೇವೇಗೌಡರ ಬಳಿ ಕುಶಲೋಪರಿ ವಿಚಾರಿಸಿದರು. ಜಿ.ಟಿ. ದೇವೆಗೌಡರಿಗೆ ಶೇಕ್ ಹ್ಯಾಂಡ್ ಮಾಡಿ ಆತ್ಮೀಯವಾಗಿ ಮಾತನಾಡಿಸಿದರು. ಕೆಲ ಜೆಡಿಎಸ್ ಶಾಸಕರು ಸಹ ಸಿಎಂ ಸಿದ್ದರಾಮಯ್ಯ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಪರಸ್ಪರ ಮುಖ ನೋಡದ ಡಿಕೆಶಿ - ಹೆಚ್​ಡಿಕೆ: ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರಸ್ಪರ ಮುಖಾಮುಖಿಯಾದರು. ಆದರೆ ಉಭಯ ನಾಯಕರು ಮುಖವನ್ನೂ ನೋಡದೇ ತೆರಳಿದರು. ಉಭಯ ನಾಯಕರು ತಮ್ಮ ಪಾಡಿಗೆ ತಾವು ಮುಂದೆ ಸಾಗಿದರು. ವಿಧಾನಸೌಧದ ಕಾರಿಡಾರ್​ನಲ್ಲಿ ನಡೆದ ಉಭಯ ನಾಯಕರುಗಳ ಪ್ರಸಂಗ ನೆರೆದಿದ್ದವರ ಕುತೂಹಲಕ್ಕೆ ಕಾರಣವಾಯಿತು.

ಇದನ್ನೂ ಓದಿ: ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆ: ಮತದಾನಕ್ಕೆ ಅಡ್ಡಿಯಾದ ಮಳೆ, ಕರೆಂಟ್​ - KARNATAKA MLC ELECTION

Last Updated : Jun 3, 2024, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.