ETV Bharat / state

ರೈತರಿಗೆ ನೋಟಿಸ್ ಕೊಡದಂತೆ ಸಿಎಂ ಡಿಸಿಗಳಿಗೆ ಸೂಚಿಸಿದ್ದಾರೆ: ಸಚಿವ ಜಿ.ಪರಮೇಶ್ವರ್

ವಕ್ಫ್ ವಿಚಾರವಾಗಿ ಸಿಎಂ ಸದ್ಯದಲ್ಲಿ ಯಾವ ರೈತರಿಗೂ ನೋಟಿಸ್ ಕೊಡಬೇಡಿ, ನಂತರ ಪರಿಶೀಲಿಸೋಣ ಅಂದಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಮುಖ್ಯಮಂತ್ರಿಗಳು ಎಲ್ಲ ಡಿಸಿಗಳಿಗೂ ಯಾವುದೇ ನೋಟಿಸ್ ಕೊಡಬೇಡಿ ಅಂದಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದರು, ನೋಟಿಸ್ ಅಥವಾ ಪತ್ರಗಳನ್ನು ಕೊಟ್ಟಿದ್ರೆ ವಾಪಸ್ ಪಡೆಯಲು ಸೂಚಿಸಿದ್ದಾರೆ. ಅಲ್ಲಿಗೆ ಅದು‌ ಮುಗಿದಿದೆ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೋ ಗೊತ್ತಿಲ್ಲ. ಕಂದಾಯ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ರೆ ಮಾತ್ರ ಸಾಧ್ಯ. ಅದರಲ್ಲೊಂದು ಇದರಲ್ಲೊಂದು ಇದ್ದರೆ ಗೊಂದಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಇದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸಿಎಂ ಸದ್ಯದಲ್ಲಿ ಯಾವ ನೋಟಿಸ್ ಕೊಡಬೇಡಿ, ನಂತರ ಪರಿಶೀಲಿಸೋಣ ಅಂದಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದರು.

ಮೋದಿ ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಈಡೇರಿದೆಯಾ?: ಗ್ಯಾರಂಟಿಗಳ ಕುರಿತು ಮೋದಿಯವರ ಟ್ವೀಟ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ಮೋದಿಯವರು ಏನೆಲ್ಲ ಭರವಸೆ ಕೊಟ್ಟಿದ್ದಾರೆ, ಅದೆಲ್ಲ ಅನುಷ್ಠಾನ ಮಾಡಿದ್ದಾರಾ?. ಮೋದಿಯವರು ಈ ದೇಶದ ಪ್ರಧಾನಿ. ಅವರು ಆಡುವ ಮಾತು ಅತ್ಯಂತ ಜವಾಬ್ದಾರಿಯಿಂದ ಇರಬೇಕು. ಜನ ಪ್ರಧಾನಿಯವರ ಮಾತು ಗಮನಿಸ್ತಿರ್ತಾರೆ.‌ ಟೀಕೆ, ಅಭಿಪ್ರಾಯ ತಿಳಿಸೋದು ಅವರ ಹಕ್ಕು, ನಾವು ಪ್ರಶ್ನೆ ಮಾಡಲ್ಲ. ಆದರೆ, ನಾವು ಚುನಾವಣೆ ವೇಳೆ ಗ್ಯಾರಂಟಿಗಳ ಬಗ್ಗೆ ಮಾತು ಕೊಟ್ಟಿದ್ವಿ, ಪ್ರಣಾಳಿಕೆಯಲ್ಲೂ ತಿಳಿಸಿದ್ವಿ. ಭರವಸೆ ಈಡೇರಿಸಿರೋದು ನಮ್ಮ ಬದ್ಧತೆ ತೋರಿಸುತ್ತದೆ. ನಮ್ಮ ಪ್ರಣಾಳಿಕೆ ತಯಾರು ಮಾಡುವ ಜವಾಬ್ದಾರಿ‌ ನನಗೇ ಕೊಟ್ಟಿದ್ರು. ನಾನು, ಪ್ರೊ.ರಾಧಾಕೃಷ್ಟ, ಮಧು ಬಂಗಾರಪ್ಪ ಸೇರಿ ನಾವು ಮೂರು ಜನ ಪ್ರಣಾಳಿಕೆ ತಯಾರು ಮಾಡಿದ್ವಿ ಎಂದರು.

ಯಶಸ್ವಿಯಾಗಿ ಗ್ಯಾರಂಟಿಗಳ ಜಾರಿ: ಐದು ಗ್ಯಾರಂಟಿಗಳನ್ನು ಕೂಡಾ ನಾವು ನಮ್ಮ ಹಿರಿಯ ನಾಯಕರ ಜತೆ ಚರ್ಚೆ ಮಾಡಿ ಇದರ ಸಾಧಕ ಬಾಧಕಗಳನ್ನು, ಆರ್ಥಿಕ ಹೊರೆಯನ್ನು ಚರ್ಚೆ ಮಾಡಿ ನಾವು ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ವಿ. ಮೊದಲ ಸಂಪುಟದಲ್ಲೇ ತೀರ್ಮಾನ‌ ಮಾಡೋದಾಗಿ ಕಮಿಟ್ ಆಗಿದ್ವಿ. ಅದೇ ಪ್ರಕಾರ ಮೊದಲ ಸಂಪುಟದಲ್ಲೇ ತೀರ್ಮಾನ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ಕೊಡಲಾಯ್ತು. ಒಂದೆರಡು ತಿಂಗಳ ನಂತರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆವು. ಇವತ್ತು ಹಣ ಖರ್ಚಾಗ್ತಿದೆ, ಆರ್ಥಿಕ ಹೊರೆ ಆಗ್ತಿದೆ, ಕರ್ನಾಟಕ ಆರ್ಥಿಕ ದಿವಾಳಿ ಆಗಿದೆ ಅಂತ ಟೀಕೆ ಟಿಪ್ಪಣಿ ಬಂದಿರೋದು ನಿಜ. ಈ ಟೀಕೆ ಟಿಪ್ಪಣಿ ಮಧ್ಯೆ ನಾವು ಯಶಸ್ವಿಯಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದರಿಂದ 3.17 ಲಕ್ಷ ಕೋಟಿಯ ಬಜೆಟ್, 3.5 ಲಕ್ಷ ಕೋಟಿಗೆ ಹೋಗಿದೆ. ಹೆಚ್ಚುವರಿ ಹೊರೆ ಆಗೋದು ಗೊತ್ತಿದ್ದೇ ಬಜೆಟ್ ಕೊಟ್ಟಿದ್ದೇವೆ ಎಂದರು.

ಯಾವುದೇ ಗೊಂದಲ ಇಲ್ಲದೇ ಗ್ಯಾರಂಟಿಗಳು ಅನುಷ್ಠಾನ ಆಗ್ತಿದೆ. ಡಿಕೆಶಿಯವರು ಅವರಿಗೆ ಶಕ್ತಿ ಯೋಜನೆ ಬಗ್ಗೆ ಕೆಲವರು ಏನು ಅಭಿಪ್ರಾಯ ಹೇಳಿದ್ರೋ ಅದನ್ನು ಹೇಳಿದ್ರು. ಅವರು ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂತ ಹೇಳಿಲ್ಲ. ಮೋದಿಯವರು ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದಿದ್ರು, ಆಗಿದೆಯಾ?. ಮಹಾರಾಷ್ಟ್ರದಲ್ಲಿ ಏನೆಲ್ಲ ಭರವಸೆ ಕೊಟ್ಟಿದ್ರೋ‌ ಕಳೆದ ಸಲ, ಅನುಷ್ಠಾನ ಮಾಡಿದ್ದಾರಾ?. ಬಿಜೆಪಿಯಲ್ಲಿ ಬೇರೆಯವರು ಟೀಕೆ ಮಾಡಿದರೆ ಅದು ಬೇರೆ. ಆದರೆ, ಪ್ರಧಾನಿಯವರು ಈಥರ ಟೀಕೆ ಮಾಡುವುದು ಔಚಿತ್ಯ ಅಲ್ಲ ಎಂದರು.

ನಾವು ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಡಿಕೆಶಿಯವರೂ ಸಹ ಆವತ್ತು ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂದಿಲ್ಲ. ಒಂದು ವೇಳೆ ಆರೀತಿ ಏನಾದ್ರೂ ತೀರ್ಮಾನಗಳನ್ನು ತೆಗೆದುಕೊಳ್ಳೋದಾದಾರೆ, ಸಿಎಂ ಆಗಲೀ, ಡಿಕೆಶಿ ಆಗಲೀ ಅಥವಾ ಒಬ್ಬೊಬ್ಬರೇ ಆ ತೀರ್ಮಾನ ತಗೊಳ್ಳಲ್ಲ. ಅದನ್ನು ಕ್ಯಾಬಿನೆಟ್​ನಲ್ಲಿ ಚರ್ಚೆ ಇಟ್ಟು, ಸಾಧಕ‌ ಬಾಧಕ ಚರ್ಚೆ ಮಾಡಿ ತೀರ್ಮಾನ ಆಗುತ್ತೆ. ಆದರೆ, ಗ್ಯಾರಂಟಿಗಳನ್ನು ನಿಲ್ಲಿಸುವ ಸ್ಥಿತಿಗೆ ನಾವು ಯಾರೂ ಬಂದಿಲ್ಲ ಇಲ್ಲಿಯವರೆಗೆ. ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ನಾವು ಎಲ್ಲೂ ಕೂಡಾ ಚರ್ಚೆ ಮಾಡಿಲ್ಲ. ಪಕ್ಷದ ವೇದಿಕೆ, ಸಂಪುಟ ಸಭೆ, ಹೊರಗಡೆ ಎಲ್ಲೂ ಈ ಚರ್ಚೆ ಮಾಡಿಲ್ಲ. ಅದರ ಬದಲಾಗಿ ಗ್ಯಾರಂಟಿಗಳನ್ನು ಮುಂದುವರೆಸ್ತೇವೆ ಅಂತ ಪದೇ ಪದೇ ಹೇಳ್ತಿದ್ದೇವೆ. ಖರ್ಗೆಯವರು ಡಿಕೆಶಿಯವರಿಗೆ ಎಲ್ರೂ ಎಚ್ಚರಿಕೆಯಿಂದ ಆಡಳಿತದಲ್ಲಿ ಹೋಗಬೇಕು ಅಂತ ಹಿರಿಯರಾಗಿ ಹೇಳಿದ್ದಾರೆ. ಆದರೆ, ಮೋದಿಯವರು ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಡೆ ಎಲ್ಲ ಸುಳ್ಳು ಭರವಸೆ ಕೊಡ್ತಾರೆ ಅಂತ ಅರ್ಥ ಬರುವಂತೆ ಹೇಳಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿಗೆ ಪುಡಾರಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಕಳೆದೆರಡು ಲೋಕಸಭಾ ಚುನಾವಣೆಗೆ ನೀಡಿದ್ದ ಪ್ರಣಾಳಿಕೆ ಜೊತೆ ಬಹಿರಂಗ ಚರ್ಚೆಗೆ ಬನ್ನಿ: ಮೋದಿಗೆ ಸಿದ್ದರಾಮಯ್ಯ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.