ETV Bharat / state

ಉಡುಪಿ: ಮತ ಹಾಕದವರಿಗೆ ಸಿಟಿಜನ್ ಶಿಪ್ ಕೊಡಬಾರದು: ಪೇಜಾವರ ಶ್ರೀ - Pejawara Shri Casting his Vote

ಮತ ಚಲಾಯಿಸದವರಿಗೆ ಸಿಟಿಜನ್​ ಶಿಪ್​ ಕೊಡಬಾರದು. ಕಠೋರ ನಿಲುವು ಆದರೂ ಇದು ಅವಶ್ಯಕವಾಗಿ ಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

CITIZENSHIP  VOTE  UDUPI
ಮತ ಹಾಕದವರಿಗೆ ಸಿಟಿಜನ್ ಶಿಪ್ ಕೊಡಬಾರದು: ಪೇಜಾವರ ಶ್ರೀ
author img

By ETV Bharat Karnataka Team

Published : Apr 26, 2024, 2:31 PM IST

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಭರ್ಜರಿ ಸಾಗುತ್ತಿದೆ. ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ತಮ್ಮ ಮತವನ್ನು ಚಲಾಯಿಸಿದರು.

ಪೇಜಾವರ ಶ್ರೀಗಳು ನಗರದ ಮತಗಟ್ಟೆ ಸಂಖ್ಯೆ 185 ರಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ನಮಗೆ ಬೇಕಾಗಿರುವ ಸರಕಾರ ರೂಪಿಸುವ ದೊಡ್ಡ ಬದ್ದತೆ ಪ್ರಜೆಗಳ ಮೇಲೆ ಇದೆ. ಎಲ್ಲ ಪ್ರಜೆಗಳು ಅವಶ್ಯವಾಗಿ ಮತದಾನ ಮಾಡಬೇಕು. ಯಾರೂ ಕೂಡ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡಿ ತುಂಬಾ ಹೆಮ್ಮೆ ಅನಿಸುತ್ತಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಾಗ ಅನುಭವಿಸಿದ ಧನ್ಯತಾಭಾವ ಈಗಲೂ ಅನುಭವಿಸಿದ್ದೇವೆ. ದೇಶದಲ್ಲಿ ಎಲ್ಲಾ ಬಗೆಯ ಜನ ಎಲ್ಲ ಕಾಲಕ್ಕೂ ಇರುತ್ತಾರೆ. ನೆಲದ ಸಂಸ್ಕೃತಿಯನ್ನು ಗೌರವಿಸುವ ಸರಕಾರವನ್ನು ರೂಪಿಸುವ ಅವಕಾಶ ನಮಗೆ ಇದೆ. ಸಮಾಜದ ಪ್ರಸಕ್ತ ವಾತಾವರಣವನ್ನು ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ರಾಜನಾದವ ಸರಿಯಾಗಿದ್ದರೆ ಕಾಲ ಯಾವತ್ತೂ ಹಾಳಾಗುವುದಿಲ್ಲ. ಈಗ ಪ್ರಜೆಗಳೇ ರಾಜರು ಎಂದರು.

ಪ್ರಧಾನಿ ಸರ್ವಾಧಿಕಾರಿ ಆರೋಪ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿ ಇದ್ದಾರೆ ಎಂದರೆ ಅವರು ಸರ್ವಾಧಿಕಾರಿ ಆಗುವುದು ಹೇಗೆ?.. ಪ್ರಜೆಗಳು ತಮಗೆ ಬೇಕಾದ ಸರ್ಕಾರ ರೂಪಿಸುತ್ತಿದ್ದಾರೆ. ಅದನ್ನು ಆಕ್ಷೇಪಿಸಿದರೆ ಸಾರ್ವಕಾಲಿಕ ಆಕ್ಷೇಪ. ಮತದಾನ ಪ್ರಮಾಣ ಕಡಿಮೆ ಆಗಬಾರದು. ವ್ಯವಸ್ಥೆ ನಮಗೆ ಅನುಕೂಲವಾಗಿಲ್ಲ ಅಂತ ದೂರುತ್ತೇವೆ. ಹಾಗಾದರೆ ವ್ಯವಸ್ಥೆಯನ್ನು ಸರಿ ಮಾಡುವುದು ಯಾರು?.. ಮತದಾನದಿಂದ ದೂರ ಉಳಿದವರಿಗೆ ಈ ದೇಶದ ನಾಗರಿಕರೇ ಅಲ್ಲ. ಅವರಿಗೆ ಸಿಟಿಜನ್ ಶಿಪ್ ಕೊಡಬಾರದು. ಅದು ಕಠೋರ ನಿಲುವು ಆದರೆ ಅವಶ್ಯವಾಗಿ ಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಂದ್ ಮಾಡಬೇಕು. ಅವರನ್ನು ದ್ವಿತೀಯ ಅಥವಾ ತೃತೀಯ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು. ಆಗ ಪರಿಸ್ಥಿತಿ ಸುಧಾರಿಸಬಹುದು. ಪ್ರಜೆಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದರೆ ಕಠೋರ ನಿಲುವು ಅನಿವಾರ್ಯ. ನೋಟ ಸಹಜ ಪ್ರಕ್ರಿಯೆ ಆಗಿರಬೇಕು. ಅದನ್ನು ಒತ್ತಡ ಹೇರುವ ಕೆಲಸ ಆಗಬಾರದು ಎಂದರು.

ಓದಿ: ಯಾವ ಅಭ್ಯರ್ಥಿಗಳು ಎಲ್ಲಿ ವೋಟ್​ ಮಾಡಿದರು?; ಹಕ್ಕು ಚಲಾಯಿಸಿದ ಪ್ರಮುಖ ಕ್ಯಾಂಡಿಡೇಟ್ಸ್​​​​​​​​​​ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ! - candidates voting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.