ETV Bharat / state

ಅಮ್ಮ ಹೊಡೀತಾರೆ, ಸ್ನೇಹಿತರು ಆಟಕ್ಕೆ ಸೇರಿಸಿಕೊಳ್ಳಲ್ಲ ಎಂದು ಪೊಲೀಸರಿಗೆ ಚಿಣ್ಣರ ಕರೆ - ಮಕ್ಕಳಿಂದ ಪೊಲೀಸರಿಗೆ ದೂರು

ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವವರ ಪಟ್ಟಿಯಲ್ಲಿ ಪುಟಾಣಿ ಮಕ್ಕಳೂ ಇದ್ದಾರೆ.

ಪೊಲೀಸ್ ಸಹಾಯವಾಣಿಗೆ ಮಕ್ಕಳ ಕರೆ
ಪೊಲೀಸ್ ಸಹಾಯವಾಣಿಗೆ ಮಕ್ಕಳ ಕರೆ
author img

By ETV Bharat Karnataka Team

Published : Jan 21, 2024, 12:52 PM IST

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಪೊಲೀಸರ ಸಹಾಯ ಪಡೆಯಲೆಂದೇ ಸಹಾಯವಾಣಿ ಚಾಲ್ತಿಯಲ್ಲಿದೆ. ಕೆಲವೊಮ್ಮೆ ಸಹಾಯವಾಣಿಗೆ ಬರುವ ದೂರುಗಳು ಹಾಸ್ಯಾಸ್ಪದ ಎನ್ನಿಸಿದರೂ ಅವುಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಯಾರೇ ಆಗಲಿ ಪೊಲೀಸರ ನೆರವು ಪಡೆಯುವ ಅಧಿಕಾರವಿದೆ. ಆದ್ದರಿಂದ ಸಹಾಯವಾಣಿಗೆ ಬರುವ ದೂರುಗಳನ್ನು ಪೊಲೀಸರು ಖುದ್ದಾಗಿ ತೆರಳಿ ಆಲಿಸುತ್ತಾರೆ. ಇತ್ತೀಚಿಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರುವವರ ಪಟ್ಟಿಯಲ್ಲಿ ಮಕ್ಕಳೂ ಸಹ ಸೇರ್ಪಡೆಯಾಗುತ್ತಿರುವುದು ವಿಶೇಷ. ಅಂತಹ ಇತ್ತೀಚಿನ ಎರಡು ನಿದರ್ಶನಗಳು ಇಲ್ಲಿವೆ.

ಅಮ್ಮ ಹೊಡೀತಾರೆ: ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಪುಟ್ಟ ಬಾಲಕಿಯೊಬ್ಬಳು ಮನೆಯಲ್ಲಿ ಅಮ್ಮ ಹೊಡೆಯುತ್ತಾರೆ, ಅಪ್ಪ ಮನೆಯಲ್ಲಿಲ್ಲ. ಅದಕ್ಕಾಗಿ ನಿಮಗೆ ಕರೆ ಮಾಡಿದ್ದೇನೆ ಎಂದಿದ್ದಾಳೆ. ತಕ್ಷಣ ಆಕೆಯ ವಿಳಾಸದ ಮಾಹಿತಿ ಪಡೆದ ಸಹಾಯವಾಣಿ ಸಿಬ್ಬಂದಿ ಸಂಬಂಧಪಟ್ಟ ನಂದಿನಿ ಲೇಔಟ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂದಿನಿ ಲೇಔಟ್ ಠಾಣಾ ಸಿಬ್ಬಂದಿ ಕರೆ ಮಾಡಿದಾಗ ಉತ್ತರಿಸಿದ ಆಕೆಯ ತಾಯಿ ''ನನ್ನ ಮಗಳಿಗೆ ನಾನು ಹೊಡೆಯುವ ಸ್ವಾತಂತ್ರ್ಯವಿಲ್ಲವೇ?" ಎಂದು ಪ್ರಶ್ನಿಸಿ ಕರೆ ಸ್ಥಗಿತಗೊಳಿಸಿದ್ದಾರೆ.

ಸ್ನೇಹಿತರು ಆಟಕ್ಕೆ ಸೇರಿಸಿಕೊಳ್ಳುತ್ತಿಲ್ಲ: ಮತ್ತೊಂದೆಡೆ, ಸ್ನೇಹಿತರು ಕ್ರಿಕೆಟ್ ಆಟಕ್ಕೆ ಸೇರಿಸಿಕೊಂಡಿಲ್ಲವೆಂದು ಬಾಲಕನೊಬ್ಬ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಪ್ರಸಂಗ ಸಹ ಕೆಲ ದಿನಗಳ ಹಿಂದೆ ನಡೆದಿದೆ. ಸ್ಥಳಕ್ಕೆ ತೆರಳಿದ ಸಂಬಂಧಪಟ್ಟ ಠಾಣಾ ಸಿಬ್ಬಂದಿ, ಆತನ ಸ್ನೇಹಿತರಿಗೆ ಬುದ್ದಿವಾದ ಹೇಳಿ ಆಟವಾಡಲು ಜೊತೆ ಸೇರಿಸಿ ವಾಪಸಾಗಿದ್ದಾರೆ.

ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ AI, ML ತಂತ್ರಜ್ಞಾನ ಆಧರಿತ ನೂತನ ವ್ಯವಸ್ಥೆಗಳಿಗೆ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.