ಹುಬ್ಬಳ್ಳಿ: ಜುಲೈ 4ರಂದು SMVT ಬೆಂಗಳೂರಿನಿಂದ 23:40 ಗಂಟೆಗೆ ಹೊರಡಲಿರುವ ರೈಲು ಸಂಖ್ಯೆ 12509 SMVT ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲು ಫುಟ್ ಓವರ್ ಬ್ರಿಡ್ಜ್ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಯ ಹಿನ್ನೆಲೆಯಲ್ಲಿ ತನ್ನ ಪ್ರಯಾಣದ ಸಮಯದಲ್ಲಿ 60 ನಿಮಿಷ ಮಾರ್ಗಮಧ್ಯೆ ನಿಯಂತ್ರಿಸಲ್ಪಡುತ್ತದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.
ಜಡ್ರಾಮಕುಂಟಿ-ಆಲಮಟ್ಟಿ ನಿಲ್ದಾಣಗಳ ನಡುವೆ ಅಗತ್ಯ ಎಂಜಿನಿಯರಿಂಗ್ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಇರುವುದರಿಂದ ಈ ಕೆಳಗಿನ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ ತಡವಾಗಿ ಹೊರಡಲಿದೆ.
ಜುಲೈ 8ರಂದು ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ನಿಗದಿತ ಸಮಯಕ್ಕಿಂತ 80 ನಿಮಿಷ ತಡವಾಗಿ ಹೊರಡಲಿದೆ.
ಜುಲೈ 8ರಂದು ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಹೊರಡಲಿದೆ.
ಜುಲೈ 7ರಿಂದ ಅನ್ವಯವಾಗುವಂತೆ ದಾದರ್ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ (ಈ ನಿಲ್ದಾಣ ಕರಾಡ ಮತ್ತು ಸಾಂಗ್ಲಿ ನಿಲ್ದಾಣಗಳ ನಡುವೆ ಇದೆ) ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಧ್ಯ ರೈಲ್ವೆ ಮಾಹಿತಿ ನೀಡಿದೆ.
ರೈಲು ಸಂಖ್ಯೆ 17318 ದಾದರ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು ಕಿರ್ಲೋಸ್ಕರವಾಡಿ ನಿಲ್ದಾಣಕ್ಕೆ ಬೆಳಿಗ್ಗೆ 04:18 ಗಂಟೆಗೆ ಆಗಮಿಸಿ, 2 ನಿಮಿಷ ನಿಂತು, 04:20 ಗಂಟೆಗೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 17317 ಎಸ್‌ಎಸ್‌ಎಸ್ ಹುಬ್ಬಳ್ಳಿ-ದಾದರ್ ಡೈಲಿ ಎಕ್ಸ್‌ಪ್ರೆಸ್ ರೈಲು ಕಿರ್ಲೋಸ್ಕರವಾಡಿ ನಿಲ್ದಾಣಕ್ಕೆ ರಾತ್ರಿ 21:58 ಗಂಟೆಗೆ ಆಗಮಿಸಿ, 2 ನಿಮಿಷ ನಿಂತು 22:00 ಗಂಟೆಗೆ ನಿರ್ಗಮಿಸಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೇ, ನೈರುತ್ಯ ರೈಲ್ವೆಯ ಪ್ರಮುಖ ರೈಲುಗಳ ಈ ಬದಲಾವಣೆ ತಿಳಿದುಕೊಳ್ಳಿ - South Western Railway