ETV Bharat / state

ವಿಪಕ್ಷ ನಾಯಕನಾದರೂ ಬೆಂಗಾವಲು ಕೊಟ್ಟಿಲ್ಲ, ದಲಿತನೆಂಬ ಕಾರಣಕ್ಕೆ ಅನ್ಯಾಯವೇ?: ಛಲವಾದಿ - Chalavadi Narayanaswamy

author img

By ETV Bharat Karnataka Team

Published : Aug 12, 2024, 5:00 PM IST

ರಾಜ್ಯ ಸರ್ಕಾರ ನನಗೆ ಕೊಡಬೇಕಾದ ಸವಲತ್ತು ಕೊಟ್ಟಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.

CHALAVADI NARAYANASWAMY
ಛಲವಾದಿ ನಾರಾಯಣಸ್ವಾಮಿ (ETV Bharat)

ಬೆಂಗಳೂರು: ವಿಪಕ್ಷದ ನಾಯಕನಿಗೆ ನೀಡಬೇಕಾದ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾನು ವಿಧಾನ ಪರಿಷತ್ ವಿಪಕ್ಷದ ನಾಯಕನಾದರೂ ನನಗೆ ಸರ್ಕಾರಿ ನಿವಾಸ ನೀಡಿಲ್ಲ. ಕೇವಲ ಓರ್ವ ಗನ್ ಮ್ಯಾನ್ ನೀಡಿದ್ದಾರೆ. ಬೆಂಗಾವಲು ಪಡೆ ನೀಡುವಂತೆ ಡಿಐಜಿಗೆ ಪತ್ರ ಬರೆದಿದ್ದೇನೆ. ಅವರು ಮೀಟಿಂಗ್ ಮಾಡಿ ಪರಿಶೀಲಿಸುತ್ತೇನೆ ಎನ್ನುತ್ತಾರೆ. ನಾನು ದಲಿತನಾಗಿದ್ದಕ್ಕೆ ಹೀಗೆ ನಡೆದುಕೊಳ್ಳುತ್ತಾರಾ?. ನನಗೆ ಎಸ್ಕಾರ್ಟ್ ಕೊಟ್ಟಿಲ್ಲ. ಹೆಚ್ಚುವರಿ ಗನ್ ಮ್ಯಾನ್ ಕೊಟ್ಟಿಲ್ಲ. ನನಗೆ ಗನ್ ಮ್ಯಾನ್, ಕಾರು ಬೇಡ. ನನಗೆ ನೀಡಿರುವ ಓರ್ವ ಗನ್ ಮ್ಯಾನನ್ನೂ ವಾಪಸ್ ಕಳುಹಿಸುತ್ತೇನೆ ಎಂದರು.

ಹಕ್ಕುಚ್ಯುತಿ ಮಂಡಿಸುತ್ತೇನೆ: ನನ್ನ ಸ್ಥಾನಮಾನಕ್ಕೆ ತಕ್ಕುದಾಗಿ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಹೀಗಾಗಿ ನಾನು ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ನನಗೆ ಏನೂ ಬೇಕಾಗಿಲ್ಲ. ನನ್ನ ಹಕ್ಕಿಗೆ ಚ್ಯುತಿಯಾದರೆ ಯಾರು ಹೊಣೆ? ನನ್ನ ಮೇಲೆ ಹಗೆತನ ಯಾಕೆ? ನನಗೆ ಕೊಡಬೇಕಾದ ಸವಲತ್ತು ನೀಡಲು ಯಾವಾಗ ಸಭೆ ನಡೆಸುತ್ತೀರಿ? ಇದೆಲ್ಲಾ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಮನೆಗೆ ಸೆಕ್ಯೂರಿಟಿ ಕೊಟ್ಟಿಲ್ಲ. ನನ್ನ ಹಕ್ಕನ್ನು ನಾನು ಕೇಳ್ತಿದ್ದೇನೆ, ನನಗೆ ಜೀವ ಭಯ ಇಲ್ಲ. ನಾನು ಅಧಿಕಾರ ವಹಿಸಿಕೊಂಡು 20 ದಿನಗಳಾಗಿದೆ. ಆದರೆ, ಇಲ್ಲಿಯವರೆಗೆ ಎಸ್ಕಾರ್ಟ್ ಕೊಟ್ಟಿಲ್ಲ. ನನಗಿರುವ ಹಕ್ಕನ್ನ‌ುಕಿತ್ತುಕೊಳ್ಳಲು ಇವರ್ಯಾರು? ಸಚಿವರಾಗುತ್ತಲೇ ಎಸ್ಕಾರ್ಟ್ ಬರುತ್ತೆ, ಗನ್ ಮ್ಯಾನ್ ಬರುತ್ತೆ, ಕಾರು ಬಂದು ನಿಲ್ಲುತ್ತೆ. ಆದರೆ, ಇವರು ಇಲ್ಲಿ ತಾರತಮ್ಯ ಮಾಡ್ತಿದ್ದಾರೆ ಎಂದು ಹೇಳಿದರು.

ತುಂಗಭದ್ರಾ ಗೇಟ್ ಸಮಸ್ಯೆಗೆ ನಿರ್ಲಕ್ಷ್ಯ ಕಾರಣ: ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್ ಆಗಿದ್ದು ಸಿಎಂ ನಾಳೆ ಹೋಗ್ತಾರಂತೆ. ಕಾಟಾಚಾರಕ್ಕೆ ಡಿಸಿಎಂ ಡಿಕೆಶಿ ನಿನ್ನೆ ಭೇಟಿ ಮಾಡಿದ್ದಾರೆ. ವಿಪಕ್ಷದವರು ಹೋದ್ರೆ ಹತ್ತಿರ ಹೋಗಂಗಿಲ್ಲವಂತೆ. ಅಧಿಕಾರಿಗಳು‌ ಮಾತ್ರ ನೋಡಿಕೊಳ್ಳಬೇಕಂತೆ. ಯಾರ ನಿರ್ಲಕ್ಷದಿಂದ ಇದು ಆಗಿದೆ? ಇದರ ಬಗ್ಗೆ ಪರಿಶೀಲಿಸಬೇಕು. ಅಲ್ಲಿ‌ಗೆ ಹೋದ್ರೂ ಗೆಸ್ಟ್ ಹೌಸ್​​ನಲ್ಲಿ ಅಧಿಕಾರಿಗಳು ಮಾಡಿದ ಬಿರಿಯಾನಿ ತಿಂದ್ರು ಹೆಲಿಕಾಪ್ಟರ್ ಹತ್ತಿ ಮತ್ತೆ ವಾಪಸ್ ಬಂದ್ರು. ಅವರನ್ನು ಹೊಗಳಿ ಬಂದಿದ್ದಾರೆ. ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಆಗಬೇಕಲ್ಲ? ಮಳೆ‌ ಬರುತ್ತಿದೆ, ನೀರು‌ ಹರಿದು‌ ಹೋಗ್ತಿದೆ, ಈ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ. ತಮ್ಮ ರಕ್ಷಣೆಯಲ್ಲಿ ಸಿಎಂ ಸಿದ್ದರಾಮಯ್ಯ ತೊಡಗಿದ್ದಾರೆ. ಅವರಿಗೆ ಇನ್ನೂ ಎಚ್ಚರಿಕೆ ಆಗಿಲ್ಲ. ಡಿಸಿಎಂ ಕಾಟಾಚಾರಕ್ಕೆ ವೀಕ್ಷಣೆ ಮಾಡಿದ್ದಾರೆ. ಈಗಾಗಲೇ 60 ಟಿಎಂಸಿ ಖಾಲಿಯಾಗಿದೆ. ಯಾರ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇಂತಹ ಧೈರ್ಯಶಾಲಿ ಸರ್ಕಾರ ಮತ್ತೊಂದು ಬಾರಿ ಬರಲು ಅಸಾಧ್ಯ. ಖಜಾನೆ ಹಣವನ್ನೇ ಲೂಟಿ ಮಾಡಲಾಗಿದೆ. ದಲಿತರು ಸಿದ್ದರಾಮಯ್ಯ ಅವರನ್ನು ನಂಬಿದ್ದರು. ಆದರೆ, ದಲಿತರ ಹಣ ನುಂಗಲಾಗಿದೆ. ನಾವು ದಲಿತರ ಪರವಾಗಿ ಹೋರಾಟ ಮಾಡಿದ್ದೇವೆ. ನಾವು ನಿಜಕ್ಕೂ ದಲಿತರ ಪರವಾಗಿದ್ದೇವೆ. ಸಿದ್ದರಾಮಯ್ಯ ವೇಷ ಮೊದಲು ಗೊತ್ತಾಗಿರಲಿಲ್ಲ. ನಂಬಿದ ದಲಿತರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡು ಓಡಾತ್ತಿದ್ದಾರೆ ಎಂದರು.

ಇದನ್ನೂ ಓದಿ: ಮುಡಾ: ರಾಜ್ಯಪಾಲರ ಶೋಕಾಸ್‌ ನೋಟಿಸ್​ಗೆ ಸಿಎಂ ಸ್ಪಂದಿಸದಿದ್ದರೆ ರಾಷ್ಟ್ರಪತಿಗೆ ದೂರು- ಶಾಸಕ ಶ್ರೀವತ್ಸ - BJP MLA Srivatsa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.