ETV Bharat / state

ತಂಗಿಯ ಮದುವೆಗೆ ಮಾಡಿದ ಸಾಲ ತೀರಿಸಲು ಸರಗಳ್ಳತನ! ಅಣ್ಣನ ಬಂಧನ - Chain Snatcher Arrested - CHAIN SNATCHER ARRESTED

ತಂಗಿಯ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರಗಳ್ಳತನದಲ್ಲಿ ತೊಡಗಿದ್ದ ಅಣ್ಣನನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Theft case  Bengaluru Arrest of a person involved in theft to pay off debt
ವಶಕ್ಕೆ ಪಡೆದ ಚಿನ್ನಾಭರಣ ಮತ್ತು ಆರೋಪಿ (ETV Bharat)
author img

By ETV Bharat Karnataka Team

Published : Jul 17, 2024, 10:56 AM IST

ಬೆಂಗಳೂರು: ತಂಗಿಯ ಮದುವೆ ಸಾಲ ತೀರಿಸಲು ನಗರದಲ್ಲಿ ವೃದ್ದೆಯರ ಸರಗಳ್ಳತನ ಮಾಡುತ್ತಿದ್ದ ಅಣ್ಣನನ್ನು ಕೆಂಗೇರಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಸಂಜಯ್ ಕುಮಾರ್ ಬಂಧಿತ ಸರಗಳ್ಳ.

ಮದ್ದೂರು ನಿವಾಸಿಯಾಗಿರುವ ಈತ, ಕೆಲವು ವರ್ಷಗಳ ಹಿಂದೆ ತಂಗಿಯ ಮದುವೆಗಾಗಿ ಸಾಲ ಮಾಡಿಕೊಂಡಿದ್ದ. ಆ ಸಾಲ ತೀರಿಸಲಾಗದೆ ತತ್ತರಿಸಿದ್ದ. ಹೀಗಾಗಿ ಹೆಂಡತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಜೀವನಕ್ಕಾಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಾಲದ ಒತ್ತಡ ಹೆಚ್ಚಾಗಿತ್ತು. ಹೀಗಾಗಿ ಅಕ್ರಮವಾಗಿ ಹಣ ಸಂಪಾದಿಸಲು ಫುಡ್ ಡೆಲಿವರಿ ಕೆಲಸ ಮಾಡುವುದರ ಜೊತೆಗೆ ವೃದ್ದೆಯರ ಸರಗಳ್ಳತನದಲ್ಲೂ ತೊಡಗಿದ್ದನು.

ಕೆಂಗೇರಿ, ಕುಂಬಳಗೋಡು, ಆರ್.ಆರ್.ನಗರ ಸೇರಿದಂತೆ ಏಳು ಕಡೆಗಳಲ್ಲಿ ಸರಗಳ್ಳತನ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. 7 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣವನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೊಸಕೋಟೆ: ಪೊಲೀಸರ ಮೇಲೆ ತಲ್ವಾರ್​ ಬೀಸಿದ ಡ್ರಗ್ ಪೆಡ್ಲರ್‌ಗೆ ಗುಂಡೇಟು - Drug Peddler Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.