ETV Bharat / state

ನೆಂಟರಿಸ್ಟರನ್ನು ಕರೆದು ಬಾಡೂಟ ಹಾಕುವುದು ನಮ್ಮ ಸಂಪ್ರದಾಯ: ಹೆಚ್.ಡಿ.ಕುಮಾರಸ್ವಾಮಿ - H D Kumaraswamy - H D KUMARASWAMY

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಭಾನುವಾರ ಕೃತಜ್ಞತಾ ಸಮಾವೇಶ ಏರ್ಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಟೀಕಾಸಮರ ನಡೆಸಿದರು.

ಹೆಚ್​ಡಿ ಕುಮಾರಸ್ವಾಮಿ
ಹೆಚ್.​ಡಿ.ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : Jul 22, 2024, 10:04 AM IST

ಹೆಚ್.ಡಿ.ಕುಮಾರಸ್ವಾಮಿ (ETV Bharat)

ಮಂಡ್ಯ: "ನೆಂಟರಿಸ್ಟರನ್ನು ಕರೆದು ಬಾಡೂಟ ಹಾಕುವುದು ನಮ್ಮ ಸಂಪ್ರದಾಯ. ಇದರ ಬಗ್ಗೆ ನಿಮ್ಮ ಕೊಂಕೇಕೆ" ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಸಮೀಪದ ಮೈದಾನದಲ್ಲಿ ಭಾನುವಾರ ನಡೆದ ಕೃತಜ್ಞತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಏರ್ಪಡಿಸಿದ್ದರು. ಬಳಿಕ ಮಾತನಾಡಿದ ಸಚಿವರು, "ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಮಳೆಯಾಗಿದೆ. ಕೆಲವೆಡೆ ಅಧಿಕ ಮಳೆಯಿಂದ ಅನಾಹುತಗಳೂ ಆಗಿವೆ. ಮಂಡ್ಯ ಜಿಲ್ಲೆ ಸೇರಿ ಈ ಭಾಗದ ಜಲಾಶಯಗಳು ಭರ್ತಿಯಾಗಿವೆ‌‌‌. ರೈತರು ಈ ಬಾರಿ ಎರಡೂ ಬೆಳೆ ಬೆಳೆಯುವ ನಿರೀಕ್ಷೆ ಇದೆ" ಎಂದರು.

"ಭಾನುವಾರ ಸಭೆ ಕರೆದು ಶನಿವಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದು, ಸಭೆ ನಡೆಸಿದ್ದು ಕಾಟಾಚಾರಕ್ಕೆ ಎಂಬಂತಿದೆ. ನನಗೆ ಕಾಂಗ್ರೆಸ್ ನಾಯಕರು CWRC ಮತ್ತು CWMA ರದ್ದು ಮಾಡುವಂತೆ ಸವಾಲು ಹಾಕಿದ್ದಾರೆ. ನಾನು ಜನರ ಸೇವೆಗಾಗಿ ಇಲ್ಲಿಗೆ ಬಂದಿದ್ದೇನೆ" ಎಂದರು.

ಮುಂದುವರೆದು ಮಾತನಾಡಿ, "ನನ್ನ ಬಗ್ಗೆ ಬಾಡೂಟ ವಿಚಾರದಲ್ಲಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ನಾನು ಬಾಡೂಟ ಮಾಡುವುದನ್ನು ನಿಲ್ಲಿಸಿ ಈಗಾಗಲೇ ಐದಾರು ವರ್ಷವಾಗಿದೆ. ನೆಂಟರಿಸ್ಟರನ್ನು ಕರೆದು ಬಾಡೂಟ ಹಾಕುವುದು ನಮ್ಮ ಸಂಪ್ರದಾಯ. ಇದರ ಬಗ್ಗೆ ನಿಮ್ಮ ಕೊಂಕು ಏಕೆ?. ನನ್ನನ್ನು ಸಂಸದನಾಗಿ ಮಾಡಿದ ಈ ಜಿಲ್ಲೆಯ ಜನತೆಗೆ ಸದಾ ಕೃತಜ್ಞನಾಗಿರುತ್ತೇನೆ. ದೇಶದ ಪ್ರಧಾನಿ ನನಗೆ ಎರಡು ಪ್ರಮುಖ ಖಾತೆಗಳನ್ನು ಕೊಟ್ಟಿದ್ದಾರೆ. ಅದಕ್ಕೆ ಕಾರಣ ಇಲ್ಲಿನ ಜನತೆ ಕೊಟ್ಟ ಗೆಲುವಿನ ಶಕ್ತಿ" ಎಂದು ಹೇಳಿದರು.

"ಎಚ್‌ಎಂಟಿ ಕಾರ್ಖಾನೆ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುತ್ತಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಮುಚ್ಚಿಸಿದ್ದಾರೆ. 13 ಸಾವಿರ ಕುಟುಂಬಗಳು ಈ ಕಾರ್ಖಾನೆಯನ್ನು ನಂಬಿ ಬದುಕುತ್ತಿದ್ದವು. ಈಗ ಕಾರ್ಖಾನೆ ಇರುತ್ತಿದ್ದರೆ 25 ಸಾವಿರ ಕೋಟಿ ರೂ ಲಾಭಾಂಶ ಬರುತ್ತಿತ್ತು. ಕಾರ್ಖಾನೆಗಳನ್ನು ಮತ್ತೆ ಪುನಶ್ಚೇತನಗೊಳಿಸುವ ಸಲುವಾಗಿ ಭೇಟಿ ಕೊಟ್ಟಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ಅವಕಾಶ ಒದಗಿಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕೃಷಿ ನಂಬಿ ಯುವಕರು ಬದುಕಲು ಆಗಲ್ಲ. ಹೀಗಾಗಿ ಕಾರ್ಖಾನೆಗಳನ್ನು ತರುವ ಕೆಲಸ ಮಾಡುತ್ತೇನೆ. ನನಗೆ ಸ್ವಲ್ಪ ಸಮಯ ಕೊಡಿ" ಎಂದು ಮನವಿ ಮಾಡಿದರು.

"ಮಂಡ್ಯಕ್ಕೆ ಯಾಕೆ ಬರ್ತಾರೆ ಅಂತ ಟೀಕೆ ಮಾಡುತ್ತಾರೆ. ಅಧಿಕಾರಿಗಳಿಗೆ ನಿರ್ಬಂಧ ಹೇರಿ ಆದೇಶ ಮಾಡುತ್ತಾರೆ. ಇದಕ್ಕೆಲ್ಲ ಆದೇಶ ಮಾಡುವವರಿಗೆ ವಿಧಾನಸೌಧದಲ್ಲಿ ಸಭೆಗೆ ಕರೆಯುವ ನೈತಿಕತೆ ಇದೆಯಾ?. ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ ತಮಿಳುನಾಡು ಹಾಗು ಕರ್ನಾಟಕದ ನೀರಿನ ಹಂಚಿಕೆ ವಿವಾದ ಇದೆ. ನೀರಾವರಿ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ವ್ಯಕ್ತಿ ದೇವೇಗೌಡರು. ಅವರು ಇನ್ನೂ ಬದುಕಿದ್ದಾರೆ. ಅವರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಯುತ್ತದೆ" ಎಂಬ ಭರವಸೆ ನೀಡಿದರು.

ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ, ಸಾ.ರಾ.ಮಹೇಶ್, ಶಾಸಕ ಹೆಚ್.ಟಿ.ಮಂಜು, ಚನ್ನರಾಯಪಟ್ಟ ಶಾಸಕ ಬಾಲಕೃಷ್ಣ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್, ಎಸ್.ಪಿ.ಸ್ವಾಮಿ, ಮತ್ತಿತರರು ಸಭೆಯಲ್ಲಿದ್ದರು. ಇದೇ ವೇಳೆ ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ ಮತ್ತು ಶಾಸಕ ಹೆಚ್.ಟಿ.ಮಂಜು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಪಾಪಪ್ರಜ್ಞೆ ಕಾಡುತ್ತಿದೆ: ಹೆಚ್​.ಡಿ ಕುಮಾರಸ್ವಾಮಿ - H D Kumaraswamy

ETV Bharat Logo

Copyright © 2025 Ushodaya Enterprises Pvt. Ltd., All Rights Reserved.