ETV Bharat / state

ತರಕಾರಿ ಮಳಿಗೆ ಹಂಚಿಕೆಗೆ ₹50 ಸಾವಿರ ಲಂಚ: ಎಪಿಎಂಸಿ ಕಾರ್ಯದರ್ಶಿ, ಕೇಸ್​ ವರ್ಕರ್​ ಲೋಕಾಯುಕ್ತ ಬಲೆಗೆ - Lokayukta

ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆ ಹಂಚಿಕೆಗೆ ಎಪಿಎಂಸಿ ಕಾರ್ಯದರ್ಶಿ ಹಾಗೂ ಕೇಸ್​ ವರ್ಕರ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Lokayukta
ಲೋಕಾಯುಕ್ತ
author img

By ETV Bharat Karnataka Team

Published : Mar 5, 2024, 10:04 AM IST

ಶಿವಮೊಗ್ಗ: ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆ ಹಂಚಿಕೆ ಮಾಡಲು 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಕಾರ್ಯದರ್ಶಿ ಕೋಡಿಗೌಡ ಹಾಗೂ ಕೇಸ್​​ ವರ್ಕರ್​ ಯೋಗೀಶ್​ ಎಂಬಿಬ್ಬರನ್ನು ಲೋಕಾಯುಕ್ತ ತನಿಖಾಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಲಂಚಬಾಕ ಅಧಿಕಾರಿಗಳ ವಿರುದ್ಧ ರವೀಂದ್ರ ವೀರಭದ್ರಪ್ಪ ನೇರಳಿ ಎಂಬವರು ದೂರು ನೀಡಿದ್ದರು.

ರವೀಂದ್ರ ಅವರು ಎಪಿಎಂಸಿ ವ್ಯಾಪ್ತಿಯ ತರಕಾರಿ ಮಾರುಕಟ್ಟೆಯಲ್ಲಿ ಮಳಿಗೆಗಾಗಿ ಅರ್ಜಿ ಸಲ್ಲಿಸಿ,‌ ನಿಗದಿತ ಹಣ ಸಂದಾಯ ಮಾಡಿದ್ದರು. ಈ ಕುರಿತು ಕಾರ್ಯದರ್ಶಿ ಬಳಿ ಹೋದಾಗ ಮಳಿಗೆ ನೀಡಬೇಕಾದರೆ ಮೇಲಿನವರಿಗೆ ಹಣ ನೀಡಬೇಕು, ಇದಕ್ಕಾಗಿ ನೀವು ಕೇಸ್ ವರ್ಕರ್ ಯೋಗೀಶ್ ಅವರನ್ನು ಭೇಟಿ ಮಾಡಿ ಎಂದಿದ್ದಾರೆ.

ಯೋಗೀಶ್ ಅವ​ರನ್ನು ಸಂಪರ್ಕಿಸಿದಾಗ ಅವರು 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ನಂತರ ಮಾತುಕತೆ ನಡೆದು 1 ಲಕ್ಷಕ್ಕೆ ಒಪ್ಪಿಗೆಯಾಗಿತ್ತು. ಈ ಹಣದ ಪೈಕಿ ಸೋಮವಾರ 50 ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಡಿವೈಎಸ್​ಪಿ ಉಮೇಶ್​​​ ಈಶ್ವರ್​​​ ನಾಯಕ್​​​ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಂಧಿತ ಆರೋಪಿಗಳಾದ ಕೋಡಿಗೌಡ ಮತ್ತು ಯೋಗೀಶ್​ ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‌

ಕಾರ್ಯಾಚರಣೆಯಲ್ಲಿ ಪೊಲೀಸ್​ ನಿರೀಕ್ಷಕರಾದ ಪ್ರಕಾಶ್​, ಮಹಾಂತೇಶ್​, ಸುರೇಂದ್ರ, ಯೋಗೀಶ್, ಚನ್ಬೇಶ್, ಪ್ರಶಾಂತ್, ಅರುಣ್, ದೇವರಾಜ್, ರಘುನಾಯ್ಕ್, ಪುಟ್ಟಮ್ಮ, ಜಯಂತ್, ಗೋಪಿ, ಪ್ರದೀಪ್ ಇದ್ದರು.

ಇದನ್ನೂ ಓದಿ: ಭಾಷಣ ಅಥವಾ ಮತ ಹಾಕಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ವಿನಾಯಿತಿ ಇಲ್ಲ: ಸುಪ್ರೀಂ ಕೋರ್ಟ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.