ETV Bharat / state

ವಿಜಯಪುರ: ಕೊಳವೆಬಾವಿಯಿಂದ ರಕ್ಷಿಸಲ್ಪಟ್ಟ ಸಾತ್ವಿಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ - ಲಚ್ಯಾಣದಲ್ಲಿ ಸಂಭ್ರಮ - SATVIK RETURNS TO HOME

author img

By ETV Bharat Karnataka Team

Published : Apr 6, 2024, 10:27 PM IST

Updated : Apr 7, 2024, 6:10 AM IST

ಕೊಳವೆ ಬಾವಿಯಿಂದ ರಕ್ಷಿಸಲ್ಪಟ್ಟು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಮಗು ಶನಿವಾರ ಡಿಸ್ಚಾರ್ಜ್ ಆಗಿ ಪೋಷಕರೊಂದಿಗೆ ತಮ್ಮೂರಿಗೆ ಮರಳಿದೆ.

borewell-incident-child-return-to-home-from-the-hospital-in-vijayapura
ವಿಜಯಪುರ: ಕೊಳವೆಬಾವಿಯಿಂದ ರಕ್ಷಿಸಲ್ಪಟ್ಟ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ - ಲಚ್ಯಾಣದಲ್ಲಿ ಸಂಭ್ರಮ

ವಿಜಯಪುರ: ಕೊಳವೆಬಾವಿಯಿಂದ ರಕ್ಷಿಸಲ್ಪಟ್ಟ ಸಾತ್ವಿಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ - ಲಚ್ಯಾಣದಲ್ಲಿ ಸಂಭ್ರಮ

ವಿಜಯಪುರ: ಕೊಳವೆ ಬಾವಿಯಿಂದ ರಕ್ಷಿಸಲ್ಪಟ್ಟ 2 ವರ್ಷದ ಮಗು ಸಾತ್ವಿಕ್​ನನ್ನು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಕೇಕ್ ಕತ್ತರಿಸಿ ಸಾತ್ವಿಕ್​ಗೆ ಡಿಎಸ್‌ಒ ಶಿವಾನಂದ ಮಾಸ್ತಿಹೊಳಿ ಹಾಗೂ ಡಿಹೆಚ್‌ಒ ಬಸವರಾಜ್ ಹುಬ್ಬಳ್ಳಿ ಹಾಗೂ ವೈದ್ಯರು ಬೀಳ್ಕೊಟ್ಟಿದ್ದಾರೆ. ಕೊಳವೆಬಾವಿಯಿಂದ ರಕ್ಷಿಸಲಾಗಿದ್ದ ಸಾತ್ವಿಕ್ ಆರೋಗ್ಯ ಸ್ಥಿರವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ಟೆಸ್ಟ್ ಗಳನ್ನು ಮಾಡಲಾಗಿತ್ತು. ಈ ಟೆಸ್ಟ್​​ಗಳ ವರದಿ ನಾರ್ಮಲ್ ಬಂದ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಾತ್ವಿಕ್‌ ಮುಜಗೊಂಡ ಶನಿವಾರ ಸಂಜೆ ಪೋಷಕರೊಂದಿಗೆ ತಮ್ಮೂರಿಗೆ ಮರಳಿದ್ದಾನೆ. ಊರಿಗೆ ಮಗು ಮರಳಿದ ಸುದ್ದಿ ಕೇಳಿ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಸಾತ್ವಿಕ್​ ಸುರಕ್ಷಿತವಾಗಿ ವಾಪಸ್​ ಆಗಿದ್ದರಿಂದ ಲಚ್ಯಾಣದಲ್ಲಿ ಮೂರು ದಿನ ಮೊದಲೇ ಯುಗಾದಿ ಸಂಭ್ರಮ ಮನೆ ಮಾಡಿತ್ತು. ಮಗುವಿನೊಂದಿಗೆ ಪೋಷಕರು ಲಚ್ಯಾಣದ ಆರಾಧ್ಯ ದೈವ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾತ್ವಿಕ್​ನ ತಂದೆ ಶರಣು ಶಂಕರ ಮುಜಗೊಂಡ ಅವರು ಸಿದ್ಧಲಿಂಗ ಮಹಾರಾಜ ಕೀ ಜೈ’ ಎಂದು ಘೋಷಣೆ ಮೊಳಗಿಸಿದರು.

ಬಾಲಕನ ಸಮ್ಮುಖದಲ್ಲಿ ಸಿದ್ಧಲಿಂಗ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು. ಈ ವೇಳೆ ಮಗುವಿಗೆ ಮಠದಲ್ಲಿನ ಸಾಧು ಸಂತರು ಮಗು ನೂರು ವರ್ಷ ಬಾಳಲಿ ಎಂದು ಹಾರೈಸಿದರು. ಬಳಿಕ ಸುರಕ್ಷಿತವಾಗಿ ಸಾತ್ವಿಕ್​ನನ್ನು ಗ್ರಾಮಕ್ಕೆ ಕರೆತಂದ ಆರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್‌ ಸಿಬ್ಬಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.

ಏಪ್ರಿಲ್ 3ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗು ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಾತ್ವಿಕ್​ನನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: ಆನೇಕಲ್​: ನಿಯಂತ್ರಣ ಕಳೆದುಕೊಂಡು ನೆಲಕ್ಕುರುಳಿದ ಹುಸ್ಕೂರು ಮದ್ದೂರಮ್ಮ ದೇವಿಯ ತೇರು- ವಿಡಿಯೋ - CHARIOT FELL DOWN

Last Updated : Apr 7, 2024, 6:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.