ಬೆಂಗಳೂರು: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್ಗಳನ್ನು ಪೂರ್ವ ಮುದ್ರಿತ ಮತ್ತು ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡಲು ಮುಂದಾಗಿದೆ. ಇನ್ನು ಮುಂದೆ ಪ್ರಯಾಣಿಕರು ಪಾಸ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ.
ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸ್ಗಳನ್ನು ನಗದು ರಹಿತ, ಕಾಗದ ರಹಿತ ಮತ್ತು ಸಂಪರ್ಕ ರಹಿತವಾಗಿ ಪಡೆಯುವ ಸಲುವಾಗಿ ಮೊಬೈಲ್ ಆ್ಯಪ್ ಮೂಲಕ ವಿತರಿಸಲಾಗುವುದು. ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಡಿಜಿಟಲ್ ವ್ಯವಸ್ಥೆ ಆರಂಭ ಮಾಡಲಾಗುತ್ತಿದೆ.
— BMTC (@BMTC_BENGALURU) August 30, 2024
ಪ್ರಯಾಣಿಕರು ಟುಮ್ಯಾಕ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕಿದೆ. ದೈನಿಕ, ಸಾಪ್ತಾಹಿಕ, ಮಾಸಿಕ ಪಾಸ್ ಅನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ, ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕಿದೆ.
ಪಾಸ್ ಪಡೆಯಲು ದೃಢೀಕರಿಸಿ, ಪಾಸ್ನ ಮೊತ್ತವನ್ನು ಪಾವತಿಸಿದ ನಂತರ ಅದು ಲಭ್ಯವಾಗಲಿದೆ. ಡಿಜಿಟಲ್ ಪಾಸ್ನೊಂದಿಗೆ ಆಯ್ಕೆ ಮಾಡಿದ ಗುರುತಿನ ಚೀಟಿಯನ್ನು ಇಟ್ಟುಕೊಂಡು ಪ್ರಯಾಣಿಸುವುದು ಕಡ್ಡಾಯವಾಗಿದೆ. ಹಾಗೂ ವಾಹನಗಳಲ್ಲಿ ಅಂಟಿಸಿರುವ ಕ್ಯೂ ಆರ್ ಕೋಡ್ ಅನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ, ಪಾಸ್ನ ಮಾನ್ಯತೆಯನ್ನು ಚಾಲನಾ ಸಿಬ್ಬಂದಿಗೆ ತೋರಿಸಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಗಮನಿಸಿ: ಸೆಪ್ಟೆಂಬರ್ನಲ್ಲಿ 2 ದಿನ ಪೀಣ್ಯದಿಂದ ನಾಗಸಂದ್ರದವರೆಗೆ ಮೆಟ್ರೋ ಸೇವೆ ಬಂದ್ - Namma Metro