ETV Bharat / state

ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning - BY VIJAYENDRA CAMPAIGNING

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರ ಮಾಡಿದರು.

bjp-state-president-vijayendra-campaigning-for-bjp-candidate-raghavendra
ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ
author img

By ETV Bharat Karnataka Team

Published : Apr 9, 2024, 9:10 AM IST

Updated : Apr 9, 2024, 12:55 PM IST

ವಿಜಯೇಂದ್ರ ಭರ್ಜರಿ ಪ್ರಚಾರ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ನಾಲ್ಕನೇ ಬಾರಿಗೆ ಗೆಲ್ಲಿಸಿ, ಕೇಂದ್ರದ ಸಚಿವರನ್ನಾಗಿ ಮಾಡಲು ಸಹಕರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿಕಾರಿಪುರ ಮತದಾರರಿಗೆ ಕರೆ ನೀಡಿದ್ದಾರೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಮತ್ತು ರಾಘವೇಂದ್ರ ಎರಡು ದಿನಗಳ ಕಾಲ ಭರ್ಜರಿ ಕ್ಯಾಂಪೇನ್​​ ಮಾಡಿದರು. ಇದೇ ವೇಳೆ ಮಾತನಾಡಿದ ವಿಜಯೇಂದ್ರ, ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಮೇಲೆ ವಿಶೇಷ ಪ್ರೀತಿಯಿಂದ ಶಾಲಾ-ಕಾಲೇಜುಗಳನ್ನು ತೆರೆದಿದ್ದಾರೆ. ಆಸ್ಪತ್ರೆಗಳನ್ನು ತಂದಿದ್ದಾರೆ. ರಸ್ತೆ ಕಾಮಾಗಾರಿಗಳಾಗಿವೆ. ರಾಘವೇಂದ್ರ ಅವರು ಕೇವಲ ಕರ್ನಾಟಕದಲ್ಲಿ ಅಲ್ಲ, ಇಡೀ ದೇಶದಲ್ಲೇ ಅತೀ ಹೆಚ್ಚು ಅಭಿವೃದ್ಧಿ ತಂದ ಸಂಸದರ ಪಟ್ಟಿಯಲ್ಲಿ 3-2 ಸ್ಥಾನ ಪಡೆದುಕೊಂಡಿದ್ದಾರೆ. ಅಂತಹ ಉತ್ತಮ ಕ್ರಿಯಾಶೀಲ ಸಂಸದರನ್ನು ಕೊಟ್ಟಿರುವ ಹೆಗ್ಗಳಿಕೆ ನಮ್ಮ ಶಿವಮೊಗ್ಗ ಜಿಲ್ಲೆಗೆ, ಶಿಕಾರಿಪುರ ತಾಲೂಕಿನ ಜನರಿಗೆ ಸಲ್ಲುತ್ತದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯು ಜಿಲ್ಲಾ ಪಂಚಾಯತ್​ ಅಥವಾ ತಾಲೂಕು ಪಂಚಾಯತ್​ ಚುನಾವಣೆಯಲ್ಲ. ಈ ದೇಶದ ಭವಿಷ್ಯವನ್ನು ರೂಪಿಸುವಂತ ಲೋಕಸಭಾ ಚುನಾವಣೆಗೆ ನಿಮ್ಮ ಮನೆ ಮಗ ರಾಘಣ್ಣ ನಿಂತಿದ್ದಾರೆ. ಕೇವಲ ಒಬ್ಬ ಸಂಸದನಾಗಿ ಆಯ್ಕೆ ಆಗುವಂತದಲ್ಲ, ನಮ್ಮ ಹಿರಿಯರ, ತಾಯಿಯಂದರ ಆಶೀರ್ವಾದದಿಂದ ರಾಘಣ್ಣ 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಗೆಲುವು ಸಾಧಿಸುತ್ತಾರೆ. ಅಲ್ಲದೇ, ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದ ಸಚಿವರಾಗಿ ಬಂದು ರಾಜ್ಯದ, ಜಿಲ್ಲೆಯ ಸೇವೆ ಮಾಡುವಂತಹ ಉತ್ತಮ ದಿನಗಳು ಮುಂದಿನ ದಿನಗಳಲ್ಲಿ ಬರುತ್ತದೆ" ಎಂದರು.

ಇನ್ನು ರಾಜ್ಯಾದ್ಯಾಂತ ಪ್ರವಾಸ ಹಾಗೂ ವಿವಿಧ ಮುಖಂಡರುಗಳ, ಕೇಂದ್ರ ನಾಯಕರ ಜೊತೆ ಚರ್ಚೆ ಸೇರಿದಂತೆ ಇತರೆ ಒತ್ತಡದ ನಡುವೆ ಬಿ.ವೈ. ವಿಜಯೇಂದ್ರ ತಮ್ಮ ಸಹೋದರ ಪರ ಪ್ರಚಾರ ನಡೆಸಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಸಾಲೂರು, ಕಪ್ಪನಹಳ್ಳಿ, ಸುಣ್ಣದ ಕೊಪ್ಪ, ತಡಸನಹಳ್ಳಿ ಶಕ್ತಿ ಕೇಂದ್ರಗಳಲ್ಲಿ ಮತ ಪ್ರಚಾರ ಮಾಡಿದರು. ಈ ವೇಳೆ ಸಂಸದ ರಾಘವೇಂದ್ರ, ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

ಇದನ್ನೂ ಓದಿ: ಸಿಎಂ ಭಾಗಿಯಾಗಿದ್ದ ಚುನಾವಣಾ ರ‍್ಯಾಲಿಯಲ್ಲಿ ಭದ್ರತಾ ಲೋಪ; ಪಿಸ್ತೂಲ್ ಹೊಂದಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ - Security Lapse

Last Updated : Apr 9, 2024, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.