ETV Bharat / state

'ಸೊಕ್ಕಿನಿಂದ ಮೆರೆಯುವ ಬಿಎಸ್​ವೈ ಮಕ್ಕಳನ್ನು ಸೋಲಿಸಲು ನನಗೆ ಮತ ನೀಡುತ್ತೇವೆ ಅಂತಿದ್ದಾರೆ ಜನ' - K S Eshwarappa - K S ESHWARAPPA

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿಂದು ಮತ ಪ್ರಚಾರ ನಡೆಸಿ, ಯಡಿಯೂರಪ್ಪ ಹಾಗು ಅವರ ಪುತ್ರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

bjp-rebel-candidate-k-s-eshwarappa
ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ
author img

By ETV Bharat Karnataka Team

Published : Apr 7, 2024, 4:32 PM IST

ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಸೊಕ್ಕಿನಿಂದ ಮೆರೆಯುತ್ತಿರುವ ಯಡಿಯೂರಪ್ಪನವರ ಮಕ್ಕಳನ್ನು ಸೋಲಿಸಲು ನನಗೆ ಮತ ನೀಡುತ್ತೇವೆ ಎಂದು ಜನ ಹೇಳುತ್ತಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಶುಭಮಂಗಳ ಸಮುದಾಯ ಭವನದ ಮುಂಭಾಗ ಇಂದು ರಾಷ್ಟ್ರಭಕ್ತ ಬಳಗದ ವತಿಯಿಂದ ಶಿವಮೊಗ್ಗ ನಗರದ ಬೂತ್ ಸಮಿತಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನೀವು ದೇವರಿಗೆ ಹೂ ಹಾಕುವಾಗ ಈಶ್ವರಪ್ಪನವರಿಗೆ ಅನ್ಯಾಯವಾಗಿದೆ, ನ್ಯಾಯ ಕೊಡಿ ಎಂದು ಹೂ ಹಾಕಬೇಕು. ನಿಮ್ಮ ಈಶ್ವರಪ್ಪ ಧರ್ಮದ ಪರ. ನಾನು ಯಾರಿಗಾದರೂ ಅನ್ಯಾಯ ಮಾಡಿದ್ರೆ, ನನ್ನ ಮಕ್ಕಳಿಗೆ ತೊಂದರೆ ಕೊಡಲಿ ಎಂದರು.

ವಂಶ ರಾಜಕೀಯವನ್ನು‌ ಕಿತ್ತುಹಾಕಬೇಕೆಂದು ಮೋದಿ ಹೋರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಕೇಂದ್ರ ಚುನಾವಣಾ ಸಮಿತಿ ಸದಸ್ಯ. ಒಬ್ಬ ಪುತ್ರ ಸಂಸದ, ಇನ್ನೊಬ್ಬ ಪುತ್ರ ಶಾಸಕ, ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧು ಬಂಗಾರಪ್ಪ ಗೀತಾ ಶಿವರಾಜ್​ ಅವರನ್ನು ನಿಲ್ಲಿಸಿದ್ದಾರೋ ಅಥವಾ ಹೊಂದಾಣಿಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸೋಲುವಂತಹ ಕಾಂಗ್ರೆಸ್​ಗೆ ಮತ ನೀಡಲ್ಲ, ಸೊಕ್ಕಿನಿಂದ ಮೆರೆಯುತ್ತಿರುವ ರಾಘವೇಂದ್ರರನ್ನು ಸೋಲಿಸಲು ನನಗೆ ಮತ ನೀಡುತ್ತೇವೆ ಎಂದು ಜನ ಮಾತನಾಡುತ್ತಿದ್ದಾರೆ. ಮುಂದಿನ 30 ದಿನ ನ್ಯಾಯಕ್ಕೂ, ಧರ್ಮಕ್ಕೂ, ಅನ್ಯಾಯಕ್ಕೂ ನಡೆಯುವ ಚುನಾವಣೆ ಎಂದು ಹೇಳಿದರು.

ಇದನ್ನೂ ಓದಿ: ವಿಜಯೇಂದ್ರ ರಾಜೀನಾಮೆ ಎಲ್ಲದಕ್ಕೂ ಪರಿಹಾರ: ಕೆ.ಎಸ್.ಈಶ್ವರಪ್ಪ - K S Eshwarappa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.