ETV Bharat / state

ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ ಬಿಜೆಪಿ ಪ್ರತಿಭಟನೆ: ಸಿಎಂ ಕ್ಷಮೆಯಾಚನೆಗೆ ಆಗ್ರಹ

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು, ಮುಖ್ಯಮಂತ್ರಿಗಳು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

bjp protest
ಬಿಜೆಪಿ ಪ್ರತಿಭಟನೆ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಬಿಜೆಪಿ ಶಾಸಕರು ಸುವರ್ಣಸೌಧದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರವು ವಾಕ್ ಸ್ವಾತಂತ್ರ್ಯ, ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಲಿಂಗಾಯತ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗಿದರು. ಪ್ರಜಾಪ್ರಭುತ್ವ ಧಮನ ಮಾಡುತ್ತಿದೆ, ಸರ್ವಾಧಿಕಾರ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ, ಅಲ್ಪಸಂಖ್ಯಾತರಿಗೆ ಕೋಟಿ ಕೋಟಿ ಲಿಂಗಾಯತರಿಗೆ ಲಾಠಿ ಏಟು ಎಂಬ ಘೋಷಣೆಗಳೊಂದಿಗೆ ಶಾಸಕರು ಆಕ್ರೋಶ ಹೊರಹಾಕಿದರು.

ಬಿಜೆಪಿ ಪ್ರತಿಭಟನೆ (ETV Bharat)

ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಲಾಠಿ ಪ್ರಹಾರ: ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ''ಶಾಂತಿಯುತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ಸಿಎಂ ಕುಮ್ಮಕ್ಕಿನಿಂದ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಮುಂಚೆನೂ ಸಿಎಂ ಆಗಿದ್ದಾಗ ಲಿಂಗಾಯತ ಸಮಾಜದ ವಿರುದ್ಧ ಸಿದ್ದರಾಮಯ್ಯ ಅವರು ಒಡೆದು ಆಳುವ ನೀತಿ ಅನುಸರಿಸಿದ್ದರು. ಇಂದು ಶಾಂತಿಯುತವಾಗಿ ಧರಣಿ ನಡೆಯುತ್ತಿರುವಾಗ ಪೊಲೀಸರನ್ನು ಛೂ ಬಿಟ್ಟಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲವೇ? ಎಂದು ಪ್ರಶ್ನಿಸಿದರು.

''ಮೀಸಲಾತಿ ಹೋರಾಟ ನಡೆದಾಗ ಸೌಜನ್ಯ ಇದ್ದಿದ್ದರೆ ಸಿಎಂ ಅವರು ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿಯಾಗಬೇಕಿತ್ತು.‌ ಸಿಎಂ ಸಿದ್ದರಾಮಯ್ಯ ಅಹಂ, ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರ ಎಂಬುದು ಶಾಶ್ವತ ಅಲ್ಲ. ನೀವು ಅಧಿಕಾರವನ್ನು ಸದ್ಬಳಕೆ ಮಾಡದೇ, ಜಾತಿ, ಧರ್ಮ ಮಧ್ಯೆ ವಿಷ ಬೀಜ ಬಿತ್ತಿದ್ದೀರಿ. ಲಾಠಿ ಪ್ರಹಾರ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ‌. ಸ್ವಾಮಿಗಳು ಹಾಗೂ ಪಂಚಮಸಾಲಿ ಸಮಾಜದ ಕ್ಷಮಾಪಣೆ ಕೇಳಬೇಕು. ದೌರ್ಜನ್ಯ ಮಾಡಿದ ಪೊಲೀಸರ ವಿರುದ್ಧ ಕ್ರಮ ತೆಗದುಕೊಳ್ಳಬೇಕು'' ಎಂದು ಆಗ್ರಹಿಸಿದರು.

ನ್ಯಾಯಾಂಗ ತನಿಖೆ ನಡೆಸಬೇಕು: ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ''ಸಿದ್ದರಾಮಯ್ಯ ಕುತಂತ್ರದಿಂದ ಲಿಂಗಾಯತ ಸಮುದಾಯಕ್ಕೆ ಲಾಠಿ ಏಟು ಕೊಟ್ಟಿದ್ದಾರೆ. ಬಸವಣ್ಣನವರ ಅನುಭವ ಮಂಟಪ ತೈಲ ಚಿತ್ರ ಅನಾವರಣಗೊಳಿಸಿ, ಭಾಷಣ ಮಾಡಿದ ಸಿಎಂ ದಯೆಯೇ ಧರ್ಮದ ಮೂಲ ಎಂದು ವಚನ ಹೇಳಿದ್ದರು. ಆದರೆ, ಇಲ್ಲಿ ದಯೆ ಇಲ್ಲದೇ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಇದೆಲ್ಲ ಪೂರ್ವಯೋಜಿತವಾಗಿದೆ. ಪೊಲೀಸರೇ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸ್ವಾಮಿಗಳ ಕ್ಷಮೆಯಾಚಿಸಬೇಕು. ಹಲ್ಲೆ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕು'' ಎಂದು ಆಗ್ರಹಿಸಿದರು.

ಗಾಯಾಳುಗಳ ಕಿಡ್ನಾಪ್ ಮಾಡಿದ್ದೀರಿ: ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ''ಕೈಯ್ಯಲ್ಲಿ ಶರಣು, ಕಂಕುಳಲ್ಲಿ ದೊಣ್ಣೆ ಇದು ಸರ್ಕಾರದ ನೀತಿಯಾಗಿದೆ.‌ ನಿಜಲಿಂಗಪ್ಪ ಕಾಲದಿಂದ ಈವರೆಗೆ ಕಾಂಗ್ರೆಸ್ ಇದೇ ದ್ವಂದ್ವ ನೀತಿ ಹೊಂದಿದ್ದಾರೆ. ಈ ಮುಂಚೆ ಲಿಂಗಾಯತ ಸಮಾಜವನ್ನು ಒಡೆದು ಕೆಲಸ ಮಾಡಿದ್ದರು. ನಾವು ಮೀಸಲಾತಿ ಬಗ್ಗೆ ಕೊಟ್ಟ ಮಾತು ಈಡೇರಿಸಿದ್ದೆವು. ಆದರೆ, ನೀವು ನುಡಿದಂತೆ ನಡೆದಿಲ್ಲ'' ಎಂದು ಆರೋಪಿಸಿದರು.

''ಮೊನ್ನೆ ಲಾಠಿಚಾರ್ಜ್ ಮಾಡಿಸಿದ್ದೀರಿ. ಲಾಠಿ ಚಾರ್ಜ್ ನಲ್ಲಿ ಗಾಯಾಳುಗಳನ್ನು ಕಿಡ್ನಾಪ್​​ ಮಾಡಿ ಎಲ್ಲಿ ಇಟ್ಟಿದ್ದೀರಿ? ಗಾಯಾಳುಗಳು ಎಲ್ಲಿ ಹೋಗಿದ್ದಾರೆ. ನಿಮಗೆ ಪಾಠ ಕಲಿಸಬೇಕಾಗುತ್ತೆ. ಮೀಸಲಾತಿ ನೀಡಿದರೆ ಯಾರಿಗೆ ತೊಂದರೆ ಆಗುತ್ತೆ? ಹಿಂದುಳಿದ ವರ್ಗಗಳನ್ನು ಎತ್ತಿಕಟ್ಟಿ ಅವರಿಂದ ಪತ್ರ ಬರೆಸುತ್ತಿದ್ದೀರಿ. ನೀವೇ ಆ ಬಗ್ಗೆ ಟ್ವೀಟ್ ಮಾಡುತ್ತೀರಿ. ನೀವು ಸಿಎಂ ಆಗುವುದಕ್ಕೆ ಯೋಗ್ಯರಾ? ನಿಮ್ಮ ಚರಿತ್ರೆಯನ್ನು ದಿನಹೋದಂತೆ ಹೊರಬರಲಿದೆ'' ಎಂದು ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಬಿಜೆಪಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.