ಕಲಬುರಗಿ: ಬಿಜೆಪಿ ಮುಖಂಡನೋರ್ವನನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆಗೈದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಗುರುವಾರ ನಡೆದಿದೆ. ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ (45) ಕೊಲೆಯಾದವರು.
ಬಿಜೆಪಿ ಮುಖಂಡರಾಗಿದ್ದ ಮಹಾಂತಪ್ಪ, ಸರಸಂಬಾ ಗ್ರಾಮದಲ್ಲಿ ಧನಲಕ್ಷ್ಮೀ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಸತತ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
![ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ](https://etvbharatimages.akamaized.net/etvbharat/prod-images/29-02-2024/kn-klb-bjp-leader-murder-ka10050_29022024174736_2902f_1709209056_678.jpg)
ತಮ್ಮ ಜಮೀನಿಗೆ ಹೋಗಿ ಬರುತ್ತಿರುವಾಗ ಕಾರಿನಲ್ಲಿ ಏಕಾಏಕಿ ಬಂದು ಇವರಿದ್ದ ಬೈಕ್ಗೆ ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತಪ್ಪರನ್ನು ಪಕ್ಕದ ಮಹಾರಾಷ್ಟ್ರದ ಸೋಲಾಪೂರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಾದನ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಒಂದು ಗುಂಟೆ ಜಾಗ, ಕಾರಿಗಾಗಿ ಗಲಾಟೆ: ತಮ್ಮನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಣ್ಣ