ETV Bharat / state

ಕೊಪ್ಪಳದಲ್ಲಿ ಗೆಲುವು ನಮ್ಮದೇ: ಸಿ.ಟಿ.ರವಿ - C T Ravi

ಲೋಕಸಭೆ ಚುನಾವಣೆಗೆ ನಡೆಯುತ್ತಿರುವ ಮತಪ್ರಚಾರದ ಕುರಿತು ಬಿಜೆಪಿ ಮುಖಂಡ ಸಿ.ಟಿ.ರವಿ ಕಾಂಗ್ರೆಸ್‌ ನಾಯಕರ ಕಾಲೆಳೆದಿದ್ದಾರೆ.

LASHED OUT  BJP LEADER  CONGRESS  KOPPAL
ಸಿ.ಟಿ.ರವಿ
author img

By ETV Bharat Karnataka Team

Published : May 1, 2024, 6:03 PM IST

Updated : May 1, 2024, 8:13 PM IST

ಸಿ.ಟಿ.ರವಿ ಹೇಳಿಕೆ

ಕೊಪ್ಪಳ: ದೇಶದಾದ್ಯಂತ ಜನ ಮೋದಿ ಜಪ ಮಾಡುವುದನ್ನು ಕಂಡು ಕಾಂಗ್ರೆಸ್​ಗೆ ಮೋಷನ್ ಶುರುವಾಗಿದೆ ಎಂದು ಬಿಜೆಪಿಯ ಸಿ.ಟಿ.ರವಿ ವ್ಯಂಗ್ಯವಾಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತತ್ವ ಸಿದ್ದಾಂತದ ಮೇಲೆ ನಡೆಯುತ್ತಿರುವ ಪಕ್ಷ. ಕೊಪ್ಪಳದಲ್ಲಿ ಗೆಲುವು ನಮ್ಮದೇ ಎಂದರು.

ಸಿ.ಟಿ.ರವಿ ಅಲ್ಲ, ಓ.ಟಿ.ರವಿ ಎಂಬ ಸಂಗಣ್ಣ ಕರಡಿ ಹೇಳಿಕೆಗೆ, ಸಂಗಣ್ಣ ಕರಡಿ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಏನೋ ಸಿಗುತ್ತೆ ಅಂತ ಕಾಂಗ್ರಸ್​ಗೆ ಹೋಗಿದ್ದಾರೆ. ಅವರಿಗೆ ಭ್ರಮನಿರಸನವಾಗುತ್ತದೆ. ಕಾಂಗ್ರೆಸ್​ನಲ್ಲಿ ಅವರಿಗೆ ಯಾವತ್ತೂ ಗೌರವ ಸಿಗುವುದಿಲ್ಲ. ಮೋದಿ ಮಾಯೆಯೇ ಅವರನ್ನು ಎರಡು ಬಾರಿ ಎಂಪಿ ಮಾಡಿತ್ತು. ಮೋದಿ ಮಾಯೆ ಇಲ್ಲದಿದ್ದರೆ 2013ಕ್ಕೆ ಸಂಗಣ್ಣ ಕರಡಿ ಅವರ ರಾಜಕೀಯ ಭವಿಷ್ಯ ಮುಗಿದೇ ಹೋಗುತ್ತಿತ್ತು. ನಮಗಿಂತ ಹೆಚ್ಚು ಮೋದಿ ಮೋದಿ ಎಂದು ಸಂಗಣ್ಣ ಕರಡಿ ಹೇಳುತ್ತಿದ್ದರು. ಇದೆಲ್ಲಾ ನಾವು ಹೇಳಬೇಕೇ? ಎಂದರು.

ಹಾಸನ ಅಶ್ಲೀಲ ವಿಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಈ ಬಗ್ಗೆ ನಮ್ಮ ನಾಯಕರು ಮತ್ತು ನಾನು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ತನಿಖೆಗೆ ಎಸ್ಐಟಿ ರಚನೆಯಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಹಿಂದೆ ಇಂದಿನ ಸಿಎಂ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದರು. ಈ ಕುರಿತು ನಿಷ್ಪಕ್ಷಪಾತ ತನಿಖೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ನಮ್ಮ ನಿಲುವು. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ 'ಉಪ್ಪು ತಿಂದವರು ನೀರು ಕುಡಿಯಬೇಕು' ಎಂದು ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಸೀಜ್ ಮಾಡಿದ್ದೇವೆ: ಗೃಹ ಸಚಿವ ಜಿ.ಪರಮೇಶ್ವರ್ - G Parameshwar

Last Updated : May 1, 2024, 8:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.