ಹುಬ್ಬಳ್ಳಿ(ಧಾರವಾಡ): ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಹ್ಲಾದ್ ಜೋಶಿ ಅವರಿಂದ ರಾಜ್ಯದ ಮರಾಠಾ ಸಮುದಾಯಕ್ಕೆ ಮೋಸವಾಗಿದೆ ಎಂದು ಕರ್ನಾಟಕ ಮರಾಠಾ ಒಕ್ಕೂಟದ ರಾಜ್ಯಾಧ್ಯಕ್ಷ ಶಾಮಸುಂದರ್ ಗಾಯಕ್‌ವಾಡ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೂ ಭಾರತೀಯ ಜನತಾ ಪಕ್ಷ ಮರಾಠರಿಗೆ ಯಾವುದೇ ಮಂತ್ರಿ ಸ್ಥಾನ, ಲೋಕಸಭೆ, ವಿಧಾನಸಭೆ ಹೀಗೆ ಯಾವುದರಲ್ಲಿಯೂ ಕೂಡ ಅವಕಾಶ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು. ಜೊತೆಗೆ, ನಾಲ್ಕೈದು ಲೋಕಸಭಾ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ. ಹೀಗಿದ್ದರೂ ಬಿಜೆಪಿಯಿಂದ ಮರಾಠರನ್ನು ಕಡೆಗಣಿಸಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಭ್ಯರ್ಥಿಗಳ ಪಟ್ಟಿ:
- ಉತ್ತರಕನ್ನಡ ಲೋಕಸಭಾ ಕ್ಷೇತ್ರ - ಶಾಮಸುಂದರ್ ಗಾಯಕ್‌ವಾಡ್.
- ಧಾರವಾಡ ಲೋಕಸಭಾ ಕ್ಷೇತ್ರ - ಜಿ.ಡಿ.ಘೋರ್ಪಡೆ.
- ಹಾವೇರಿ ಲೋಕಸಭಾ ಕ್ಷೇತ್ರ - ನಾರಾಯಣರಾವ್ ಗಾಯಕ್‌ವಾಡ್.
- ಬೆಳಗಾವಿ ಲೋಕಸಭಾ ಕ್ಷೇತ್ರ - ಈಶ್ವರ್ ರುದ್ರಪ್ಪ ಗಾಡಿ.
- ಚಿಕ್ಕೋಡಿ ಲೋಕಸಭಾ ಕ್ಷೇತ್ರ - ವಿನೋದ್ ಸಾಳುಂಕೆ.
- ಬೀದರ್ ಲೋಕಸಭಾ ಕ್ಷೇತ್ರ - ವಿಜಯ್ ಕುಮಾರ್ ಪಟೇಲ್.
- ಬಾಗಲಕೋಟೆ ಲೋಕಸಭಾ ಕ್ಷೇತ್ರ - ಶ್ರೀಕಾಂತ್ ಮುಧೋಳ್.
- ಶಿವಮೊಗ್ಗ ಲೋಕಸಭಾ ಕ್ಷೇತ್ರ - ದೇವರಾಜ್ ಶಿಂಧೆ ಎಂ.ಡಿ.
- ಬಿಜಾಪುರ ಮತ್ತು ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಎಸ್.ಸಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಫಿನಾಡಿನಲ್ಲಿ ಹುಲಿ, ಕಾಡಾನೆ ಹಾವಳಿ: 5 ಜಾನುವಾರು ಸಾವು, ಬೆಳೆ ನಾಶ - Wild Elephants Menace