ETV Bharat / state

ನಾಗಮಂಗಲಕ್ಕೆ ನಾಳೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ: ಡಾ. ಅಶ್ವತ್ಥನಾರಾಯಣ್ - BJP Fact Finding Committee - BJP FACT FINDING COMMITTEE

ನಾಗಮಂಗಲಕ್ಕೆ ನಾಳೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಲಿದೆ ನಾಗಮಂಗಲದಲ್ಲಿ ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ರಾಜ್ಯ ಬಿಜೆಪಿ ನಾಯಕರು ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ.

BJP FACT FINDING COMMITTEE
ಸಿ.ಎನ್. ಅಶ್ವತ್ಥನಾರಾಯಣ್ (ETV Bharat)
author img

By ETV Bharat Karnataka Team

Published : Sep 15, 2024, 5:51 PM IST

ಬೆಂಗಳೂರು: ಬಿಜೆಪಿ ಸತ್ಯಶೋಧನಾ ಸಮಿತಿಯು ನಾಳೆ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಭೇಟಿ ನೀಡಲಿದೆ. ಅಲ್ಲಿನ ಮಾಹಿತಿಯನ್ನು ಪಡೆಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ್ ತಿಳಿಸಿದರು.

ಮಲ್ಲೇಶ್ವರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನನ್ನ ನೇತೃತ್ವದಲ್ಲಿ ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಮಾಜಿ ಸಚಿವರು ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ್, ಮಾಜಿ ಸಚಿವ ಕೆ. ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಸಮಿತಿ ಒಳಗೊಂಡಿದೆ ಎಂದರು.

''ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಶಾಂತಿ ಕಾಪಾಡುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಾರಂಭದಲ್ಲಿ ಅದೇನೂ ಇಲ್ಲ ಎಂಬಂತೆ ಹೇಳಿಕೆ ಕೊಟ್ಟರು. ನಂತರ ಇಂಟೆಲಿಜೆನ್ಸ್ ಮುಖ್ಯಸ್ಥರನ್ನು ವರ್ಗಾಯಿಸಿದರು. ಇನ್‍ಸ್ಪೆಕ್ಟರ್ ಅನ್ನು ಅಮಾನತು ಮಾಡಿದ್ದು, ಕಾನೂನು- ಸುವ್ಯವಸ್ಥೆ ನಿರ್ವಹಿಸುವಲ್ಲಿನ ವೈಫಲ್ಯವು ನಾಗಮಂಗಲ ಘಟನೆ ಮೂಲಕ ವ್ಯಕ್ತವಾಗಿದೆ ಎಂದು ತಿಳಿಸಿದರು. ಕೇರಳದವರು ಇದರ ಹಿಂದಿದ್ದು, ಎಸ್‍ಡಿಪಿಐನವರು ಎಂಬ ಅನುಮಾನಗಳಿವೆ'' ಎಂದರು.

'ಗಣೇಶ ಮೂರ್ತಿ ಇಡಲು ಬಿಟ್ಟಿಲ್ಲ': ''ನಾಗಮಂಗಲದಲ್ಲಿ ಒಂದು ಗುಂಪಿನವರು ಪ್ರಚೋದನೆ ಮಾಡಿದ್ದಾರೆ. ನಮ್ಮ ಸಂಸ್ಕೃತಿ ಎನಿಸಿದ ವಿನಾಯಕನ ಚತುರ್ಥಿ ಕಾರ್ಯಕ್ರಮವು ದೇಶದ ಸದೃಢತೆಗೆ ಶಕ್ತಿ ತುಂಬುತ್ತದೆ. ಅಂಥ ಸಂದರ್ಭದಲ್ಲಿ ಅಡಚಣೆ, ಅನವಶ್ಯಕವಾಗಿ ತೊಂದರೆ ಕೊಡುತ್ತಿದ್ದು, ಇದಕ್ಕೆ ಗೃಹ ಇಲಾಖೆ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು. ಈ ಸರ್ಕಾರ ಒಂದು ವರ್ಗ, ಒಂದು ಧರ್ಮಕ್ಕೆ ಸೀಮಿತವಾಗಿ ವರ್ತಿಸುತ್ತಿದೆ. ಎಷ್ಟೋ ಕಡೆ ಗಣೇಶ ಮೂರ್ತಿ ಇಡಲು ಬಿಟ್ಟಿಲ್ಲ. ಮೆರವಣಿಗೆಗೆ ಕಡಿವಾಣ ಹಾಕಿದ್ದಾರೆ. ಫ್ರೀಡಂ ಪಾರ್ಕ್​ನಲ್ಲಿ ಗಣೇಶ ಮೂರ್ತಿಯನ್ನೇ ಅರೆಸ್ಟ್ ಮಾಡಿದ್ದಾರೆ'' ಎಂದು ಆಕ್ಷೇಪಿಸಿದರು.

''ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲವಾಗಿದೆ. ನೂರಾರು ಘಟನೆಗಳು ನಮ್ಮ ಕಣ್ಣೆದುರು ಇವೆ. ತುಷ್ಟೀಕರಣದ ಪರಿಣಾಮ, ಆಡಳಿತದ ಮೇಲೆ ಹಿಡಿತ, ಸ್ಪಷ್ಟತೆ ಇಲ್ಲದ ಕಾರಣ ಸಮಾಜದಲ್ಲಿ ತುಂಬ ಗೊಂದಲ, ಭಯ ಹಾಗೂ ಅತೃಪ್ತಿಯ ವಾತಾವರಣ ನಿರ್ಮಾಣ ಮಾಡಿದ್ದಾರೆ'' ಎಂದು ಅಶ್ವತ್ಥನಾರಾಯಣ್ ಆರೋಪಿಸಿದರು.

ಇದನ್ನೂ ಓದಿ: ನಾಗಮಂಗಲ ಗಲಭೆಯಲ್ಲಿ ಭಾಗಿಯಾಗಿದ್ದ ಕೇರಳ ಮೂಲದ ಇಬ್ಬರ ಬಂಧನವಾಗಿದೆ: ಸಚಿವ ಚಲುವರಾಯಸ್ವಾಮಿ - NAGAMANGALA RIOTS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.