ETV Bharat / state

ನನಗೆ ಆಶೀರ್ವದಿಸಿದ ಕ್ಷೇತ್ರದ ಜನರಿಗೆ ಶಿರಬಾಗಿ ನಮಿಸುತ್ತೇನೆ: ತೇಜಸ್ವಿ ಸೂರ್ಯ - Tejaswi Surya

ಎರಡನೇ ಬಾರಿಗೆ ಮತದಾರರು ನನಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸತ್​ನಲ್ಲಿ ಪ್ರತಿನಿಧಿಸುವ ಅವಕಾಶ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ (ETV Bharat)
author img

By ETV Bharat Karnataka Team

Published : Jun 4, 2024, 5:12 PM IST

Updated : Jun 4, 2024, 7:04 PM IST

ತೇಜಸ್ವಿ ಸೂರ್ಯ (ETV Bharat)

ಬೆಂಗಳೂರು: ಮತದಾರರು ಎರಡನೇ ಬಾರಿಗೆ ನನಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸತ್​ನಲ್ಲಿ ಪ್ರತಿನಿಧಿಸುವ ಅವಕಾಶ ನೀಡಿದ್ದಾರೆ. 2.44 ಲಕ್ಷದ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಪ್ರಧಾನಿ ಮೋದಿಯವರು ಮತ್ತೆ ಆಡಳಿತ ನಡೆಸಬೇಕೆಂಬುದು ಇಲ್ಲಿನ ಜನರ ಬಯಕೆಯಾಗಿದೆ. ತೇಜಸ್ವಿಸೂರ್ಯ ಮತ್ತೆ ಸಂಸದರಾಗಬೇಕು ಎಂದು ಜನರು ಆಶೀರ್ವಾದ ಮಾಡಿದ್ದಾರೆ. ಇದಕ್ಕೆ ನನ್ನ ಕ್ಷೇತ್ರದ ಜನರಿಗೆ ಶಿರಬಾಗಿ ನಮಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ಮೋದಿಯವರ ನೇತೃತ್ವ ನಮಗೆ ಮತ್ತಷ್ಟು ಶಕ್ತಿ ಕೊಟ್ಟಿದೆ. ಅವರ ನಾಯಕತ್ವ ನನಗೆ ಹೆಮ್ಮೆ ಇದೆ. ಆರ್.ಅಶೋಕ್, ಯಡಿಯೂರಪ್ಪ, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಮಣ್ಯ, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ ಸೇರಿದಂತೆ ಎಲ್ಲ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ. ಬಿಟಿಎಂ ಕ್ಷೇತ್ರ ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದೆ. ಅಲ್ಲೂ ಲೀಡ್ ಪಡೆದಿರುವುದು ಸಂತಸ ತಂದಿದೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾಗಬೇಕು, ದೇಶ ಮತ್ತಷ್ಟು ಅಭಿವೃದ್ಧಿಯಾಗಬೇಕು ಎಂದು ಹರಿಸಿದ್ದಾರೆ. ಈ ಚುನಾವಣೆ ಬಹಳ ಟೈಟ್ ಆಗಿತ್ತು, ಕಾಂಗ್ರೆಸ್ ಅಚ್ಚರಿಯ ಗೆಲುವು ಸಾಧಿಸಬಹುದು ಎನ್ನಲಾಗುತ್ತಿತ್ತು. ಆದರೆ ಬಿಜೆಪಿ ಮಾಡಿದ ಕೆಲಸ ಇಂದು ಗೆಲುವು ಗೆಲುವು ತಂದುಕೊಟ್ಟಿದೆ. ನಾವು ಇಟ್ಟಿದ್ದ ನಿರೀಕ್ಷೆಗೆ ಕೆಲ ಸೀಟ್ ಕಡಿಮೆಯಾಗಿರುವುದು ಸತ್ಯ. ಆದರೆ ಕಳೆದ 10 ವರ್ಷದ ಎಲ್ಲಾ ಕೆಲಸ ಜನರನ್ನು ಮುಟ್ಟಿದೆ. ಪ್ರಧಾನಿ ಮೋದಿಯವರ ಬಲ ಎಲ್ಲೂ ಕುಗ್ಗಿಲ್ಲ, ಎನ್​ಡಿಎ ವೋಟ್ ಶೇರ್ ಕಳೆದ ಬಾರಿಗಿಂತ ಹೆಚ್ಚೇ ಇದೆ ಎಂದು ಹೇಳಿದರು.

ಐತಿಹಾಸಿಕ ಗೆಲುವು ಕೊಟ್ಟ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಮುಂದೆ ಕೂಡ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಪಾರ್ಟಿ 1 ಲಕ್ಷ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಅಂತ ಆಮಿಷಕ್ಕೆ ಒಳಗಾಗದೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಕೋವಿಡ್ ವೇಳೆಯಲ್ಲಿ, ಬ್ಯಾಂಕ್​ಗಳ ಸಮಸ್ಯೆ ಆದಾಗ ಹೀಗೆ ಹಲವು ವಿಚಾರದ ವೇಳೆ ಜನರ ಜೊತೆಗೆ ಇದ್ದೆ. ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದೆ. ಇದೆಲ್ಲದರ ಕಾರಣ ಇಷ್ಟೊಂದು ಲೀಡ್ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಒಂದೇ ಒಂದು ವೋಟಿಗೂ ಹಣ ಕೊಡಬಾರದು ಎಂದು ನಾವು ನಿರ್ಧರಿಸಿದ್ದೆವು. ಭ್ರಷ್ಟಾಚಾರ ಕೊನೆಗಾಣಿಸಬೇಕು, ಲೀಡ್ ಕಡಿಮೆ ಆದರೂ ಪರವಾಗಿಲ್ಲ ಎನ್ನುವುದು ನಮ್ಮ ನಿಲುವಾಗಿತ್ತು. ಅದಕ್ಕೆ ವಿನಮ್ರತೆಯಿಂದ ನಡೆಯುವವರಿಗೆ ಜನ ಆಶೀರ್ವಾದ ಮಾಡಿದ್ದಾರೆ. ಐದು ವರ್ಷದಲ್ಲಿ ಮಾಡಿದ ಹತ್ತರಷ್ಟು ಪರಿಶ್ರಮ ಮುಂದಿನ ಐದು ವರ್ಷ ಮಾಡಲಿದ್ದೇವೆ. ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಇಂದಿನಿಂದಲೇ ಕೆಲಸ ಅರಭಿಸಲಿದ್ದೇವೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಬೆಂಗಳೂರಿಗೆ ಇನ್ನೊಂದು ಏರ್​ಪೋರ್ಟ್, ಸೆಮಿಕಂಡಕ್ಟರ್ ಹಬ್, ಮೆಟ್ರೋ ಕಾಮಗಾರಿಗೆ ವೇಗ ಹಾಗೂ ಬಡವರ ಸೇವೆ ಮಾಡುವುದು ನನ್ನ ಉದ್ದೇಶವಾಗಿದೆ. ದೇಶದಲ್ಲಿ ಇಟ್ಟಿದ್ದ ನಿರೀಕ್ಷೆಗಿಂತ ಕಡಿಮೆ ಸೀಟುಗಳು ಬಂದಿವೆ. ಮಾಡಿದ ಕೆಲಸವನ್ನು ಜನರಿಗೆ ತಲುಪಿಸಲು ಇನ್ನಷ್ಟು ಪರಿಣಾಮಕಾರಿಯ ನಡೆ ಅಗತ್ಯವಿತ್ತು ಎಂದರು.

ಇದನ್ನೂ ಓದಿ: ವಿಜಯಪುರ ಲೋಕಸಭಾ ಕ್ಷೇತ್ರ: ಪಂಚ ನದಿಗಳ ನಾಡಲ್ಲಿ ಮತ್ತೊಮ್ಮೆ ಗೆದ್ದು ಬೀಗಿದ ರಮೇಶ ಜಿಗಜಿಣಗಿ - Lok Sabha Election Result

Last Updated : Jun 4, 2024, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.