ಬೆಂಗಳೂರು: ಅಪಘಾತದ ರಭಸಕ್ಕೆ ರಾಜಕಾಲುವೆಗೆ ಹಾರಿ ಬಿದ್ದು ಕೊಚ್ಚಿಕೊಂಡು ಹೋಗಿರುವ ದ್ವಿಚಕ್ರ ವಾಹನ ಸವಾರನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆ ಮುಂದುವರೆದಿದೆ. ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ್ ಕುಮಾರ್ ಎಂಬಾತ ಅಪಘಾತದ ರಭಸಕ್ಕೆ ಆಯತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಬಿದ್ದಿದ್ದಾನೆ.
ಬ್ಯಾಟರಾಯನಪುರದ ನಿವಾಸಿಯಾಗಿದ್ದ ಹೇಮಂತ್ ಕುಮಾರ್ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಸುಮಾರಿಗೆ ಕೆಲಸ ಮುಗಿಸಿ ವಾಪಾಸಾಗುತ್ತಿದ್ದಾಗ ಮೈಸೂರು ರಸ್ತೆಯ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಹೇಮಂತ್ ದ್ವಿಚಕ್ರ ವಾಹನ ರಸ್ತೆ ಪಕ್ಕದ ವಿಭಜಕಕ್ಕೆ ಡಿಕ್ಕಿಹೊಡೆದಿತ್ತು. ಅಪಘಾತದ ರಭಸದಿಂದಾಗಿ ಹೇಮಂತ್ ಕುಮಾರ್ ಆಯತಪ್ಪಿ ರಸ್ತೆ ಪಕ್ಕದಲ್ಲಿದ್ದ ರಾಜಕಾಲುವೆಯೊಳಗೆ ಬಿದ್ದಿದ್ದಾನೆ.
ರಾತ್ರಿ ಸುರಿದಿದ್ದ ಮಳೆಯಿಂದಾಗಿ ನೀರಿನ ಹರಿವು ಇದ್ದಿದ್ದರಿಂದ ಹೇಮಂತ್ ಕುಮಾರ್ ಕೊಚ್ಚಿ ಹೋಗಿದ್ದಾನೆ. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿದ್ದರಾದರೂ ಹೇಮಂತ್ ಕುಮಾರ್ ಪತ್ತೆಯಾಗಿಲ್ಲ. ರಾತ್ರಿ ಸ್ಥಗಿತಗೊಂಡಿದ್ದ ಶೋಧಕಾರ್ಯ ಇಂದು ಮತ್ತೆ ಪುನರಾರಂಭಗೊಂಡಿದ್ದು, ಇನ್ನೂ ಸಹ ಹೇಮಂತ್ ಕುಮಾರ್ ಪತ್ತೆಯಾಗಿಲ್ಲ.
ಇದನ್ನೂ ಓದಿ: ಬೆಂಗಳೂರು: ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವು - Electrocution while charging mobile