ETV Bharat / state

ಮಲ್ಪೆ ಬೀಚ್​ನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ: ಪ್ರವಾಸಿಗರ ಗಮನ ಸೆಳೆದ ಮರಳು ಕಲಾಕೃತಿ

ಸ್ಯಾಂಡ್ ಆರ್ಟ್ ಟೀಮ್ ಮಲ್ಪೆ ಬೀಚ್​ನಲ್ಲಿ ಚತುರ್ಭುಜ ಭುವನೇಶ್ವರಿ ತಾಯಿ ಶಿಲ್ಪವನ್ನು ರಚಿಸಿದ್ದು, ಪ್ರವಾಸಿಗರ ಗಮನ ಸೆಳೆದಿದೆ.

ಮರಳಿನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ
ಮರಳಿನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ (ETV Bharat)
author img

By ETV Bharat Karnataka Team

Published : 3 hours ago

ಉಡುಪಿ: ಈ ಬಾರಿ ಬೆಳಕಿನ ಹಬ್ಬದ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಬಂದಿರುವುದು ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಮ್​ ಎರಡೂ ಆಚರಣೆಗೆ ಮರಳು ಶಿಲ್ಪದ ಮೂಲಕ ಶುಭಹಾರೈಸಿದೆ.

ಉಡುಪಿ ಜಿಲ್ಲೆ ಮಲ್ಪೆ ಕಡಲ ತೀರದಲ್ಲಿ ಮರಳನ್ನು ರಾಶಿ ಹಾಕಿಕೊಂಡು ಸುಂದರವಾದ ಕಲಾ ರಚನೆ ಮಾಡಿರುವ ಕಲಾವಿದರ ಹೆಸರು ಹರೀಶ್ ಸಾಗ. ಇವರಿಗೆ ಸಂತೋಷ ಹಾಲಾಡಿ ಉಜ್ವಲ್​ ನಿಟ್ಟೆ ಸಹಾಯ ಮಾಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಉಡುಪಿಯಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರು ವಿಶೇಷ ದಿನಗಳನ್ನು, ಹಬ್ಬಗಳನ್ನು ಮರಳುಶಿಲ್ಪದ ಮೂಲಕ ಆಚರಿಸುತ್ತಾರೆ. ಈ ಬಾರಿ ಕೂಡಾ ದೀಪಾವಳಿ, ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಮರಳು ಶಿಲ್ಪದ ಮೂಲಕ ಪ್ರವಾಸಿಗರಿಗೆ ಕೋರಿದ್ದು, ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಮರಳಿನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ (ETV Bharat)

ಮರಳಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ತಾಯಿ: ಈ ಬಾರಿ ಚತುರ್ಭುಜ ಭುವನೇಶ್ವರಿ ತಾಯಿಯನ್ನು ಮರಳಿನಲ್ಲಿ ರಚನೆ ಮಾಡಿದ್ದಾರೆ. ತಾಯಿ ಕೈಯಲ್ಲಿ ಇರುವ ಕರ್ನಾಟಕದ ಬಾವುಟಕ್ಕೆ ಕೆಂಪು, ಹಳದಿ ಬಣ್ಣವನ್ನು ನೀಡಿದ್ದು ವಿಶೇಷವಾಗಿತ್ತು. ಮರಳು ಶಿಲ್ಪದಲ್ಲೇ ದೀಪಾವಳಿಯ ದೀಪ, ಮತ್ತು ರಾಕೆಟ್​ ಪಟಾಕಿಯನ್ನು ಮರಳಿನಲ್ಲಿಯೇ ರಚಿಸಿದ್ದಾರೆ. ಹಣತೆಯಿಂದ ಉರಿಯುವ ದೀಪವನ್ನು ಸಹ ರಚನೆ ಮಾಡಿದ್ದು, ಅದಕ್ಕೂ ಸಹ ಬಣ್ಣ ನೀಡಿರುವುದು ಕಲಾವಿದರ ಚಾಕಚಕ್ಯತೆಯನ್ನು ಪ್ರದರ್ಶಿಸುವಂತಿತ್ತು.

ಸ್ಯಾಂಡ್ ಆರ್ಟ್ ಟೀಮ್​
ಸ್ಯಾಂಡ್ ಆರ್ಟ್ ಟೀಮ್​ (ETV Bharat)

ರಚನೆಗೆ ಮೂರು ಗಂಟೆ: ಬೆಳಗ್ಗೆ ಆರಂಭವಾದ ಮರಳುಶಿಲ್ಪ ರಚನಾ ಕಾರ್ಯ ಮಧ್ಯಾಹ್ನ ಮೂರು ಗಂಟೆಯವರೆಗೂ ಸಾಗಿತ್ತು. ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಮರಳು ಕಲೆ ಮಲ್ಪೆ ಕಡಲ ತೀರಕ್ಕೆ ಬಂದ ಪ್ರವಾಸಿಗರನ್ನು ಸೆಳೆದಿದೆ. ಈ ಬಗ್ಗೆ ಉಡುಪಿಯ ಸ್ಯಾಂಡ್​ ಆರ್ಟ್​ ಟೀಮ್​ ಕಲಾವಿದರಾದ ಹರೀಶ್​ ಸಾಗ ಈ ಟಿವಿ ಭಾರತ ವರದಿಗಾರರೊಂದಿಗೆ ಮಾತನಾಡಿ, "ಈ ಮರಳು ಶಿಲ್ಪ ಕಲಾಕೃತಿಯನ್ನು ಕನ್ನಡಾಂಬೆಗೆ ಹಾಗೂ ದೀಪಾವಳಿಯ ಶುಭಾಶಯವನ್ನು ನಾಡಿನ ಸಮಸ್ತ ಜನತೆಗೆ ಸಲ್ಲಿಸುತ್ತಿದ್ದೇವೆ. ಈ ಮರಳು ಶಿಲ್ಪ ಕಲಾಕೃತಿ ರಚನೆಗೆ ಐದು ಗಂಟೆ ತೆಗೆದುಕೊಂಡಿದ್ದು, ನನ್ನೊಂದಿಗೆ ಸಂತೋಷ ಹಾಲಾಡಿ ಉಜ್ವಲ್ ನಿಟ್ಟೆಯವರ ಸಹಕಾರವಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕನ್ನಡ ಅಸ್ಮಿತೆಯ ಬೀಜ ಬಿತ್ತಿದ್ದ ಕದಂಬ ದೊರೆ ಮಯೂರ ವರ್ಮ: ತಾಳಗುಂದದಲ್ಲಿದೆ ಹಲ್ಮಿಡಿಗಿಂತಲೂ ಹಳೆಯ ಶಾಸನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.