ETV Bharat / state

ದಕ್ಷಿಣ ಕನ್ನಡ: ಪುಡಾ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ ಕೋಡಿಂಬಾಳ ರಾಜೀನಾಮೆ - Bhaskar Kodimbala resignation

ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ.ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ ನೀಡಿದ್ದಾರೆ. ಯಾವುದೇ ಶಿಫಾರಸು ಇಲ್ಲದೇ ಶಾಸಕರು ನನ್ನನ್ನು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ನೀಡುವುದು ಸೂಕ್ತ ಅವರು ತಿಳಿಸಿದ್ದಾರೆ.

ಭಾಸ್ಕರ ಕೋಡಿಂಬಾಳ
ಭಾಸ್ಕರ ಕೋಡಿಂಬಾಳ (ETV Bharat)
author img

By ETV Bharat Karnataka Team

Published : Jul 13, 2024, 3:36 PM IST

Updated : Jul 13, 2024, 5:32 PM IST

ಭಾಸ್ಕರ ಕೋಡಿಂಬಾಳ (ETV Bharat)

ಪುತ್ತೂರು(ದಕ್ಷಿಣ ಕನ್ನಡ): ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಪುಡಾ (ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ) ಅಧ್ಯಕ್ಷ ಸ್ಥಾನಕ್ಕೆ ಕೆ.ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪುತ್ತೂರು ಕಾಂಗ್ರೆಸ್ಸಿನ ಹಿರಿಯ ನಾಯಕನ ಈ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಜೂ.11 ರಂದು ಬೆಂಗಳೂರಿನಿಂದ ಶಾಸಕರು ಕರೆ ಮಾಡಿ, ಪುಡಾ (ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ) ಸತ್ತಿದೆ. ನಿಮ್ಮ ಕಾರ್ಯವೈಖರಿ ಬಗ್ಗೆ ಜನ ಮಾತನಾಡಲು ಶುರು ಮಾಡುತ್ತಾರೆ ಎಂದರು. ನಾನು ಪುಡಾ ಅಧ್ಯಕ್ಷನಾಗಿ ಪದಗ್ರಹಣ ಮಾಡಿದಾಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಯಿತು. ಅದು ಜೂ.6 ರವರೆಗೆ ಇತ್ತು. ಬಳಿಕ ಸಿಕ್ಕ 22 ದಿನದಲ್ಲಿ ಕಟ್ ಕನ್ವರ್ಷನ್ ಹಾಗೂ ಶ್ರೀ ಮಹಾಲಿಂಗೇಶ್ವರ ದೇಗುಲದ ಬಿಲ್ ಮಂಜೂರು ಮಾಡುವ ಕಾರ್ಯವನ್ನು ಮಾಡಿದ್ದೇನೆ ಎಂದು ತಿಳಿಸಿದರು.

ನನ್ನನ್ನು ಯಾವುದೇ ಶಿಫಾರಸು ಇಲ್ಲದೇ ಶಾಸಕರು ಆಯ್ಕೆ ಮಾಡಿದ್ದು, ಅವರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದಿದ್ದಾಗ ರಾಜೀನಾಮೆ ನೀಡುವುದು ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಕದ್ದು ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರು: ತುರ್ತು ಕಾರ್ಯಾಚರಣೆ ನಡೆಸಿ ಹಿಡಿದ ಪೊಲೀಸ್ರು! - Robbery Case

Last Updated : Jul 13, 2024, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.