ETV Bharat / state

ಜನತೆಗೆ ಸಿಹಿ ಸುದ್ದಿ; ಕೈಗೆಟುಕುವ ದರದಲ್ಲೇ ಕೇಂದ್ರದಿಂದ ಅಗತ್ಯ ಧಾನ್ಯಗಳ ವಿತರಣೆ

ಅಗ್ಗದ ದರದಲ್ಲಿ ಉತ್ತಮ ದರ್ಜೆಯ ಆಹಾರ ಪದಾರ್ಥಗಳನ್ನು ಮರು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

RELAUNCH OF BHARAT PRODUCTS
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಕೇಂದ್ರ ಗ್ರಾಹಕ ವ್ಯವಹಾರಗಳು, ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಜನರಿಗೆ ಕೈಗೆಟುಕುವ ದರದಲ್ಲೇ ನಾನಾ ಅಗತ್ಯ ಧಾನ್ಯಗಳ ವಿತರಣೆ ಪುನಾರಂಭಿಸಲು ನಿರ್ಧರಿಸಿದೆ.

ಬುಧವಾರದಿಂದ ಉತ್ಪನ್ನಗಳು ಲಭ್ಯವಾಗಲಿವೆ. ಈ ಯೋಜನೆ ಅಡಿಯಲ್ಲಿ ಅಕ್ಕಿ ಕೆ.ಜಿಗೆ 34 ರೂಪಾಯಿ, ಗೋಧಿ ಹಿಟ್ಟು 30 ರೂಪಾಯಿ, ಕಡಲೆ ಬೆಳೆ 70 ರೂಪಾಯಿ, ಹೆಸರು ಬೇಳೆ 107 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ, ಬೆಂಗಳೂರಿಗರಿಗೆ ಅಗ್ಗದ ದರದಲ್ಲಿ ಉತ್ತಮ ದರ್ಜೆಯ ಆಹಾರ ಪದಾರ್ಥಗಳು ದೊರೆಯಲಿವೆ. ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರಿಗೆ ರಕ್ಷಣೆ ಸಿಗಲಿದೆ.

Relaunch of Bharat Products in Bangalore
ಪ್ರಕಟಣೆ (ETV Bharat)

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ನಾಗರಿಕ ಪೂರೈಕೆ ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸಚಿವೆ ನಿಮುಬೆನ್ ಜಯಂತಿ ಬಾಯಿ ಬಾಂಬಾನೀಯ ಹಾಗೂ ರಾಜ್ಯ ಖಾತೆ ಸಚಿವ ಬಿ.ಎಲ್. ವರ್ಮಾ ಅವರ ಆದೇಶದಂತೆ ಬೆಂಗಳೂರಿನಲ್ಲಿ ವಿತರಣೆ ಆರಂಭವಾಗುತ್ತಿದೆ ಎಂದು ರಾಷ್ಟ್ರೀಯ ಸಹಕಾರಿ ಗ್ರಾಹಕರ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ಶಿವಲಿಂಗಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಂ ಗರೀಬ್​​ ಕಲ್ಯಾಣ್​​ ಯೋಜನೆಯಡಿ 2028ರವರೆಗೆ ಉಚಿತ ಅಕ್ಕಿ ವಿತರಣೆಗೆ ಕೇಂದ್ರ ಒಪ್ಪಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.