ETV Bharat / state

ಹಾಸನ: ಮೈಮೇಲೆ ಬೆಂಕಿ ಎರಚಿಕೊಂಡು ಆಂಜನೇಯನ ಹರಕೆ ತೀರಿಸುವ ಭಕ್ತರು - BENKI ANJANEYA FESTIVAL

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ಭಕ್ತರು ಬೆಂಕಿ ಹಾಯ್ದು, ಮೈಮೇಲೆ ಎರಚಿಕೊಳ್ಳುವ ಮೂಲಕ ತಮ್ಮ ಹರಕೆ ತೀರಿಸುತ್ತಾರೆ.

Devotees
ಬೆಂಕಿ ಉಂಡೆಗಳನ್ನು ಎರಚಾಡಿ ಹರಕೆ ತೀರಿಸುವ ಭಕ್ತರು (ETV Bharat)
author img

By ETV Bharat Karnataka Team

Published : 3 hours ago

ಹಾಸನ: ತ್ರೇತಾಯುಗ ಕಳೆದು ಶತಮಾನಗಳಾದ್ರೂ ಕಲಿಯುಗದಲ್ಲಿ ಇನ್ನೂ ರಾಮದೂತನ ಪವಾಡಗಳು ಜೀವಂತವಾಗಿವೆ ಎಂಬುದಕ್ಕೆ ಹಾಸನ ಜಿಲ್ಲೆಯಲ್ಲಿರುವ ಆಂಜನೇಯನ ದೇವಾಲಯವೇ ಸಾಕ್ಷಿ.

ಜಾನುವಾರುಗಳನ್ನು ಬೆಂಕಿಯಲ್ಲಿ ಹಾಯಿಸುವುದನ್ನು ನೋಡಿದ್ದೇವೆ. ಆದ್ರೆ ಮನುಷ್ಯರೇ ಜಾನುವಾರುಗಳ ರೀತಿ ಬೆಂಕಿ ಹಾಯ್ದು, ಬೆಂಕಿ ಉಂಡೆಗಳನ್ನು ಎರಚಿ ಹರಕೆ ತೀರಿಸುವ ಪದ್ಧತಿಯನ್ನು ಬಹುತೇಕರು ನೋಡಿರಲ್ಲ. ಅಂಥದ್ದೊಂದು ಆಚರಣೆಯನ್ನು ಇಲ್ಲಿ ನೋಡಬಹುದು.

ಬೆಂಕಿ ಉಂಡೆಗಳನ್ನು ಎರಚಾಡಿ ಹರಕೆ ತೀರಿಸುವ ಪದ್ಧತಿ (ETV Bharat)

ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ನಡೆಯುವ ಇಂಥದ್ದೊಂದು ಜಾತ್ರಾ ಮಹೋತ್ಸವ ಬಹಳ ವಿಭಿನ್ನ. 48 ದಿನಗಳ ಕಾಲ ನಡೆಯುವ ಜಾತ್ರೆಯ ಕೊನೆಯ ಐದು ದಿನಗಳು ಸಾವಿರಾರು ಭಕ್ತರ ಗಮನ ಸೆಳೆಯುತ್ತದೆ.

ಹರಕೆ ಹೊತ್ತ ಭಕ್ತರು ಜೀವದ ಹಂಗು ತೊರೆದು ಬೆಂಕಿ ಹಾಯುತ್ತಾರೆ. ಬಳಿಕ ಬೆಂಕಿ ಉಂಡೆಗಳನ್ನು ಲಂಕಾ ದಹನದ ಸ್ಥಳದಿಂದ ದೇವಾಲಯದ ಮೇಲ್ಭಾಗ ಮತ್ತು ದೇವಾಲಯದ ಮೇಲಿಂದ ಲಂಕಾದಹನದ ಸ್ಥಳಕ್ಕೆ ಎರಚಾಡುತ್ತಾರೆ. ಈ ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ಆಂಜನೇಯ ಸನ್ನಿಧಿಯಲ್ಲಿ ಹೂವಿನ ಪ್ರಸಾದವಾಗುತ್ತದೆ. ಇದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತದೆ.

ವಿವಾಹ, ಸಂತಾನ ಭಾಗ್ಯ, ಚರ್ಮರೋಗ ಸಮಸ್ಯೆ, ಜಮೀನು ವ್ಯಾಜ್ಯ, ವ್ಯಾಪಾರಾಭಿವೃದ್ದಿ ಸೇರಿದಂತೆ ಹಲವು ರೀತಿಯ ಹರಕೆಗಳನ್ನು ಹೊತ್ತ ಭಕ್ತರು ಇಲ್ಲಿ ಬಂದು ಹರಕೆ ತೀರಸುತ್ತಾರೆ.

ಮಾಂಸಹಾರ ಸೇವನೆ ನಿಷಿದ್ಧ: ಹರಕೆ ಹೊತ್ತವರು ಮೂರು ದಿನಗಳ ಕಾಲ ಉಪವಾಸವಿರಬೇಕು. ಮಾಂಸಹಾರ ಸೇವನೆ ನಿಷಿದ್ಧ. ಕೊನೆಯ ದಿನ ಮುಂಜಾನೆ ನಾಲ್ಕು ಗಂಟೆಗೆ ಶುಚಿರ್ಭೂತರಾಗಿ, ದೇವಾಲಯಕ್ಕೆ ಆಗಮಿಸಿ ಹರಕೆ ತೀರಿಸಬೇಕಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ದೇವಾಲಯದ ಮುಂಭಾಗದಲ್ಲಿ ಲಂಕಾದಹನವಾಗುವ ವೇಳೆ ಆತನ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದು ನಂಬಿಕೆ.

ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಸ್ವಾಮಿ ಮಾತನಾಡಿ, ''ದೇವರಿಗೆ ವಂಶಪಾರಂಪರ್ಯವಾಗಿ ನಾವು ಪೂಜೆ ಮಾಡಿಕೊಂಡು ಬಂದಿದ್ದೇವೆ. ದೀಪಾವಳಿ ಹಬ್ಬದಂದು ದೇವರಿಗೆ ಕಂಕಣ ಕಟ್ಟುತ್ತೇವೆ. 48 ದಿನದ ನಂತರ ಈ ಹಬ್ಬ ಬರುತ್ತೆ. ಗ್ರಾಮಸ್ಥರು ವ್ರತದಲ್ಲಿರುತ್ತಾರೆ. ಯಾರೇ ಇಲ್ಲಿಗೆ ಬಂದು ಸಂಕಲ್ಪ ಮಾಡಿ ಹರಕೆ ಹೇಳಿಕೊಂಡರೂ ಇಷ್ಟಾರ್ಥ ನೆರವೇರುತ್ತದೆ'' ಎಂದರು.

ಭಕ್ತರಾದ ಮಂಜುನಾಥ್ ಮಾತನಾಡಿ, ''ಇಲ್ಲಿ ನಾನು ಏನು ಬೇಕಾದ್ರೂ ಬೇಡಿಕೊಳ್ಳಬಹುದು. ಭಗವಂತ ಎಲ್ಲವನ್ನೂ ಕರುಣಿಸುತ್ತಾನೆ. ದೇವಾಲಯಕ್ಕೆ ಬಂದು ನಿಷ್ಠೆಯಿಂದ ಹರಕೆ ತೀರಿಸಿದರೆ ಇಷ್ಟಾರ್ಥ ನೆರವೇರುತ್ತದೆ'' ಎಂದು ಹೇಳಿದರು.

ಮತ್ತೋರ್ವ ಭಕ್ತರಾದ ಕುಮಾರ್ ಮಾತನಾಡಿ, ''ಇಲ್ಲಿನ ದೇವರನ್ನು ನಂಬಿದ ಮೇಲೆ ನಮ್ಮ ಎಲ್ಲ ಇಷ್ಟಾರ್ಥಗಳೂ ನೆರವೇರಿವೆ. ನಾವೆನಾದ್ರೂ ತಪ್ಪು ಮಾಡಿಕೊಂಡು ಇಲ್ಲಿಗೆ ಬಂದರೆ ಕೆಂಡದಿಂದ ಮೈ ಸುಟ್ಟು ಹೋಗುತ್ತೆ, ಇಲ್ಲ ಅಂದ್ರೆ ಏನೂ ಆಗಲ್ಲ'' ಎಂದು ಹೇಳಿದರು.

ಇದನ್ನೂ ಓದಿ: ಒಂಟಿಗಣ್ಣಿನ ಆಂಜನೇಯನ ಕಂಡರೆ ಎಲ್ಲಾ ಸಂಕಟಗಳು ಮಾಯ; ಹೀಗಿದೆ ಈ ಸ್ಥಳದ ಪೌರಾಣಿಕ ಹಿನ್ನೆಲೆ - Famous Anjaneya Swamy Temple - FAMOUS ANJANEYA SWAMY TEMPLE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.