ETV Bharat / state

ಬೆಂಗಳೂರು: ಜನರ ಮೊಬೈಲ್ ಕಸಿದುಕೊಂಡು ಪರಾರಿ ಆಗುತ್ತಿದ್ದ ಇಬ್ಬರ ಕಳ್ಳರ ಬಂಧನ - thieves Arrested

ಸಾರ್ವಜನಿಕರ ಮೊಬೈಲ್ ಕಸಿದುಕೊಂಡು ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಬಾಣಸವಾಡಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

thieves Arrested
ಕಳ್ಳರ ಬಂಧನ (ETV Bharat)
author img

By ETV Bharat Karnataka Team

Published : May 26, 2024, 3:30 PM IST

ಬೆಂಗಳೂರು: ಸಾರ್ವಜನಿಕರ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಿಯಾಜ್ ಖಾನ್ (36) ಹಾಗೂ ವಸೀಂ ಫಿರೋಜ್ (21) ಬಂಧಿತ ಆರೋಪಿಗಳು.

ಕಳೆದ ಡಿಸೆಂಬರ್‌ 23ರ ರಾತ್ರಿ ಸಿಎಂಆರ್ ರಸ್ತೆಯ ಹೆಚ್ ಡಿ ಎಫ್ ಸಿ ಬ್ಯಾಂಕ್‌ ಬಳಿ ನಿಂತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಸಿಸಿಟಿವಿ ಕ್ಯಾಮರಾ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದ ಬಾಣಸವಾಡಿ ಠಾಣೆಯ ಪೊಲೀಸರು, ಸಾರಾಯಿಪಾಳ್ಯದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರ ಪೈಕಿ ರಿಯಾಜ್ ಖಾನ್ ವಿರುದ್ಧ ಈ ಹಿಂದೆ ಸಿಟಿ ಮಾರ್ಕೆಟ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು. ಸದ್ಯ ಬಂಧಿತರಿಂದ ಒಂದು ಮೊಬೈಲ್, ಎರಡು ದ್ವಿಚಕ್ರ ವಾಹನಗಳು ಮತ್ತು ಒಂದು ಬೈಸಿಕಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂಓದಿ:ಬೆಂಗಳೂರು: ರಸ್ತೆ ಬದಿ ಮಲಗಿದ್ದವರನ್ನು ಬರ್ಬರವಾಗಿ ಕೊಲ್ಲುತ್ತಿದ್ದ ಆರೋಪಿ ಬಂಧನ - Murder Accused Arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.