ETV Bharat / state

ಬೆಂಗಳೂರು ಟೆಕ್ ಸಮ್ಮಿಟ್ 2024: ಇನ್ಫೋಸಿಸ್‌ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ

ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ರಾಜ್ಯದ ವಿವಿಧ ಐಟಿ ಕಂಪನಿಗಳಿಗೆ ಭಾರತೀಯ ಸಾಫ್ಟ್​​ವೇರ್​​ ಪಾರ್ಕ್​ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರ ನೀಡಲಾಯಿತು.

ಇನ್ಫೋಸಿಸ್ ಸಂಸ್ಥೆಗೆ 'ಕರ್ನಾಟಕದ ಐಟಿ ರತ್ನ' ಪುರಸ್ಕಾರ
ಇನ್ಫೋಸಿಸ್‌ಗೆ 'ಕರ್ನಾಟಕದ ಐಟಿ ರತ್ನ' ಪ್ರಶಸ್ತಿ (ETV Bharat)
author img

By ETV Bharat Karnataka Team

Published : 8 hours ago

Updated : 4 hours ago

ಬೆಂಗಳೂರು: ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ(ಮಾಹಿತಿ ತಂತ್ರಜ್ಞಾನ) ಕಂಪನಿಗಳಿಗೆ ಭಾರತೀಯ ಸಾಫ್ಟ್​​ವೇರ್​​ ಪಾರ್ಕ್​ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರವನ್ನು ಬುಧವಾರ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಸಾಧನೆ ಮಾಡಿರುವ ಇನ್ಫೋಸಿಸ್​​ ಕಂಪನಿಗೆ 'ಕರ್ನಾಟಕದ ಐಟಿ ರತ್ನ', ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​, ರಾಬರ್ಟ್​ ಬಾಷ್, ಇಂಟೆಲ್​ ಮುಂತಾದ ಕಂಪನಿಗಳಿಗೆ ಎಸ್​.ಟಿ.ಪಿ.ಐ-ಐಟಿ ಪ್ರಶಸ್ತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರದಾನ ಮಾಡಿದರು.

ಬೆಂಗಳೂರು ಟೆಕ್ ಸಮ್ಮಿಟ್ 2024
ಬೆಂಗಳೂರು ಟೆಕ್ ಸಮ್ಮಿಟ್ 2024 (ETV Bharat)

ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ.ಪಿ.ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ ಆ್ಯಡ್ ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್​ ಎಲೆಕ್ಟ್ರಿಕ್​, ಅಲ್ಟ್ರಾನ್​ ಟೆಕ್​​ ಇಂಡಿಯಾ, ಸ್ಯಾಪ್​ ಲ್ಯಾಬ್ಸ್​​, ವಿಎಂವೇರ್​ ಸಾಫ್ಟ್ವೇರ್ಸ್​​,ಆಕ್ಸೆಂಚರ್ ಸೊಲ್ಯೂಷನ್ಸ್ ಪರವಾಗಿ ಸಂಸ್ಥೆಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​, "ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ. ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ. ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ" ಎಂದು ಅಭಿಪ್ರಾಯಪಟ್ಟರು.

"ಎಸ್.ಟಿ.ಪಿ.ಐ. ಏಳು ವರ್ಷಗಳ ಹಿಂದೆಯೇ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸ್ಮಾರ್ಟ್​(ಸೆಮಿಕಂಡಕ್ಟರ್ ಮೆಷರ್ಮೆಂಟ್ ಅನಾಲಿಸಿಸ್ ಆ್ಯಡ್ ರಿಲಾಯಬಿಲಿಟಿ ಟೆಸ್ಟ್) ತೆರೆದಿದೆ. ಇದರಿಂದ ದೇಶದ ಸೆಮಿಕಂಡಕ್ಟರ್ ಮತ್ತು ಇಎಸ್​ಡಿ‌ಎಂ ವಲಯಗಳ ಕಾರ್ಯ ಪರಿಸರ ಸುಧಾರಿಸಿದೆ. ಜೊತೆಗೆ ನವೋದ್ಯಮಗಳು ಮತ್ತು ಸೆಮಿಕಂಡಕ್ಟರ್ ಕಂಪನಿಗಳು ವಿನ್ಯಾಸವನ್ನು ರೂಪಿಸಲು ತೆಗೆದುಕೊಳ್ಳುತ್ತಿದ್ದ ದೀರ್ಘ ಸಮಯಕ್ಕೆ ತೆರೆ ಬಿದ್ದಿದೆ" ಎಂದು ವಿವರಿಸಿದರು.

ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್
ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಭಾಷಣ (ETV Bharat)

"ಎಸ್.ಟಿ.ಪಿ.ಐ. ರಾಜ್ಯ ರಾಜಧಾನಿಯಲ್ಲಿ ಸಿಒಇ- ಐಒಟಿ ಓಪನ್-ಲ್ಯಾಬ್ ಕೂಡ ಆರಂಭಿಸಿದೆ. ಇದರಡಿಯಲ್ಲಿ 130 ನವೋದ್ಯಮಗಳು ಆಯ್ಕೆಯಾಗಿದ್ದು, ಈಗಾಗಲೇ 67 ಉದ್ಯಮಗಳ ಕಾರ್ಯ ಚಟುವಟಿಕೆ ಆರಂಭಿಸಿವೆ. ಇದು ದೇಶದ ಐಒಟಿ ವಲಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಐಟಿ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಎಸ್​ಟಿಪಿಐ ಅಧ್ಯಕ್ಷ ಸಂಜಯ್ ತ್ಯಾಗಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: BTS-2024ಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ; ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಘೋಷಣೆ

Last Updated : 4 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.