ETV Bharat / state

ಒಂದೇ ದಿನದಲ್ಲಿ 3 ಅಪರಾಧ ಕೃತ್ಯ: ಐವರು ದರೋಡೆಕೋರರ ಬಂಧನ - Robbers arrested

ಒಂದೇ ದಿನದಲ್ಲಿ ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಒಂದೇ ದಿನದಲ್ಲಿ ಮೂರು ಅಪರಾಧ ಕೃತ್ಯ ಎಸಗಿದ ಐವರು ದರೋಡೆಕೋರರ ಬಂಧನ

author img

By ETV Bharat Karnataka Team

Published : Mar 20, 2024, 10:02 AM IST

ಬೆಂಗಳೂರು: ಕದ್ದ ಬೈಕ್‌ನಲ್ಲಿ ಮಹಿಳೆಯ ಸರ ಕಸಿದುಕೊಂಡ ನಂತರ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ ಮಾಡಿದ್ದ ಐವರು ದರೋಡೆಕೋರರನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ದುಶ್ಚಟ ತೀರಿಸಿಕೊಳ್ಳಲು ಮಾರ್ಚ್ 7ರಂದು ರಾತ್ರಿ ವರ್ತೂರಿನಲ್ಲಿ ಬೈಕ್ ಕದ್ದು, ಹೆಬ್ಬಗೂಡಿಯಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ ಮಾಡಿ, ಬಳಿಕ ಮಾರನೇ ದಿನ ಮುಂಜಾನೆ ಕೆಲಸಕ್ಕಾಗಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಎರಡು ಸ್ಮಾರ್ಟ್ ಪೋನ್, ಎರಡು ಎಟಿಎಂ ಕಾರ್ಡ್ ಕಸಿದು ಪರಾರಿಯಾಗಿದ್ದ ಪವನ್ ಕುಮಾರ್, ದರ್ಶನ್, ವಿಜಯ್, ಸಂತೋಷ್ ಕುಮಾರ್ ಹಾಗೂ ಸತೀಶ್ ಕುಮಾರ್ ಎಂಬವರನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದು, 19ರಿಂದ 24 ವರ್ಷದ ಯುವಕರಾಗಿದ್ದಾರೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ದುಶ್ಚಟಕ್ಕೆ ಅಂಟಿಕೊಂಡಿದ್ದರು. ಖರ್ಚಿಗಾಗಿ ಹಣ ಸರಿದೂಗಿಸಲು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವರ್ತೂರು ಹಾಗೂ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಎರಡು ಬೈಕ್ ಕಳ್ಳತನ ಮಾಡಿದ್ದರು. ಮಾರನೇ ದಿನ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಸ್ಮಾರ್ಟ್ ಪೋನ್ ಕಸಿದು ಪರಾರಿಯಾಗಿದ್ದರು.

ಈ ಬಗ್ಗೆ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರಿಂದ ಮೂರು ಬೈಕ್ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.