ETV Bharat / state

ಬೆಂಗಳೂರು: ಮದ್ಯದ ಅಮಲಿನಲ್ಲಿ ನಿಂದಿಸಿದ ಸ್ನೇಹಿತನ ಹತ್ಯೆ, ಐವರ ಬಂಧನ - Murder Case - MURDER CASE

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಹತ್ಯೆಗೈದ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮದ್ಯದ ಅಮಲಿನಲ್ಲಿ ನಿಂದಿಸಿದ ಸ್ನೇಹಿತನನ್ನು ಹತ್ಯೆಗೈದ ಐವರ ಬಂಧನ

author img

By ETV Bharat Karnataka Team

Published : Apr 21, 2024, 11:54 AM IST

ಬೆಂಗಳೂರು: ಮದ್ಯದ ಅಮಲಿನಲ್ಲಿ ನಿಂದಿಸಿದ ಸ್ನೇಹಿತನ ತಲೆ ಮೇಲೆ ಕಾಂಕ್ರಿಟ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದ ಐವರು ಆರೋಪಿಗಳನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಎಂ.ಪವನ್ ಕುಮಾರ್, ಸಂತೋಷ್.ಎಸ್, ರಂಜಿತ್ ಕುಮಾರ್.ಆರ್, ರಂಗನಾಥ್ ಹಾಗೂ ವಿನೋದ್ ಮ್ಯಾಥ್ಯೂ ಬಂಧಿತರು. ಏಪ್ರಿಲ್ 18ರಂದು ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಸಮೀಪದ ಬಿಡಿಎ ಪಾರ್ಕ್ ಬಳಿ ಸತೀಶ್ ಕುಮಾರ್ (32) ಎಂಬಾತನನ್ನು ಕೊಲೆ ಮಾಡಿದ್ದರು.

ಆರೋಪಿಗಳು ಹಾಗೂ ಸತೀಶ್ ಕುಮಾರ್ ಸ್ನೇಹಿತರು. ಪಾರ್ಟಿ ಮಾಡುವಾಗ ಮದ್ಯದ ಅಮಲಿನಲ್ಲಿ ಜೊತೆಗಿದ್ದವರನ್ನೇ ಸತೀಶ್ ಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದನಂತೆ. ಏಪ್ರಿಲ್ 18ರಂದು ದೊಮ್ಮಲೂರಿನ ಪಲ್ಲಕ್ಕಿ ಉತ್ಸವ ನೋಡಲು ಶಿವಾಜಿನಗರದಿಂದ ಬಂದಿದ್ದ ಸತೀಶ್ ಕುಮಾರ್, ಸ್ನೇಹಿತರ ಜೊತೆಗೂಡಿ ಪಾರ್ಕ್​ನಲ್ಲಿ ಪಾರ್ಟಿ ಮಾಡಿದ್ದಾನೆ. ಈ ವೇಳೆ ಸಂತೋಷ್ ಮತ್ತು ಪವನ್​ನನ್ನು ತಳ್ಳಾಡಿದ್ದ ಸತೀಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಸತೀಶ್ ಕುಮಾರ್​ನ ತಲೆಗೆ ಸಿಮೆಂಟ್ ಕಲ್ಲಿನಿಂದ ಹೊಡೆದು ಹತ್ಯೆಗೈದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಹಲಸೂರು ಠಾಣಾ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿದ್ದಾಗ ಭೇಟಿಯಾಗದ್ದಕ್ಕೆ ಕೋಪಗೊಂಡಿದ್ದ ಸ್ನೇಹಿತನ ಹತ್ಯೆ: ನಾಲ್ವರ ಬಂಧನ - Murder case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.