ETV Bharat / state

ವಿಲಾಸಿ ಜೀವನ ನಡೆಸುತ್ತಿದ್ದ ಯುವಕನ ಅಪಹರಣ, ಆರೋಪಿಗಳ ಬಂಧನ - Kidnap Case

author img

By ETV Bharat Karnataka Team

Published : Jun 30, 2024, 1:17 PM IST

ಯುವಕನನ್ನು ಅಪಹರಿಸಿ ನೆರೆ ರಾಜ್ಯ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಅಜ್ಮೀರಾ ರಾಜು
ಅಪಹರಣಗೊಂಡ ಅಜ್ಮೀರಾ ರಾಜು (ETV Bharat)

ಬೆಂಗಳೂರು: ಸಿನಿಮೀಯ ಮಾದರಿಯಲ್ಲಿ ಯುವಕನನ್ನು ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜೂನ್ 16ರಂದು ಅಜ್ಮೀರಾ ರಾಜು ಎಂಬಾತನನ್ನು ಕಾರಿನಲ್ಲಿ ತೆಲಂಗಾಣಕ್ಕೆ ಕರೆದೊಯ್ದು ಹಲ್ಲೆಗೈದ ಆರೋಪದಡಿ ಇಬ್ಬರನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕೆಲಸ ಮಾಡಿಕೊಂಡಿದ್ದ ಅಜ್ಮೀರಾ ರಾಜು ಎಂಬಾತ, ಐಷಾರಾಮಿ ಕಾರು, ವಿದೇಶ ಪ್ರವಾಸ, ಕ್ರಿಕೆಟರ್ಸ್ ಜೊತೆ ಫೋಟೋಸ್ ಎಂದೆಲ್ಲಾ ವಿಲಾಸಿ ಜೀವನ ಶೈಲಿ ಹೊಂದಿದ್ದ. ಕಳೆದ 6-7 ತಿಂಗಳುಗಳಿಂದ ಬೆಂಗಳೂರಿನ ಎಂ.ಜಿ.ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ರಾಜು ಜೀವನ ಶೈಲಿ ಗಮನಿಸಿದ್ದ ಆರೋಪಿಗಳು ಅಪಹರಿಸಲು ಸಂಚು ರೂಪಿಸಿದ್ದರು.

ಜೂನ್ 16ರಂದು ರಾತ್ರಿ ಸ್ನೇಹಿತನೊಂದಿಗೆ ಊಟಕ್ಕೆಂದು ತೆರಳಿದ್ದ ರಾಜುನನ್ನು ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿದ್ದರು. ಇದನ್ನು ಗಮನಿಸಿದ್ದ ರಾಜು, ದ್ವಿಚಕ್ರ ವಾಹನ ನಿಲ್ಲಿಸಿ ಆರೋಪಿಗಳ ಕಾರಿನ ಬಳಿ ಹೋದಾಗ ಆತನನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿಕೊಂಡು ತೆರಳಿದ್ದರು. ತೆಲಂಗಾಣಕ್ಕೆ ಕರೆದೊಯ್ದು ಫಾರ್ಮ್ ಹೌಸ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿ, 5 ಕೋಟಿ ರೂ ಹಣ, ಬಿಟ್ ಕಾಯಿನ್ ನೀಡುವಂತೆ ಬೆದರಿಸಿದ್ದರು.

ಇತ್ತ ರಾಜು ಅಪಹರಣದ ಕುರಿತು ಆತನ ಸ್ನೇಹಿತ ಹಲಸೂರು ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತ್ವರಿತವಾಗಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರನ್ನು ಬಳಸಿಕೊಂಡು ವ್ಯಕ್ತಿಯ ಅಪಹರಣ: ಮತ್ತೊಂದು ಪ್ರಕರಣದಲ್ಲಿ, ಮಹಿಳೆಯರನ್ನು ಬಳಸಿಕೊಂಡು ವ್ಯಕ್ತಿಯನ್ನು ಅಪಹರಿಸಿದ ಆರೋಪದಡಿ ಕನ್ನಡಪರ ಸಂಘಟನೆಯೊಂದರ ಅಧ್ಯಕ್ಷ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಜುನಾಥ್ ಎಂಬಾತನನ್ನು ಅಪಹರಿಸಿದ್ದ ಆರೋಪದಡಿ ಕನ್ನಡ ಪರ ಸಂಘಟನೆಯ ಅಧ್ಯಕ್ಷ ಪ್ರಕಾಶ್, ಮಂಜುಳಾ ಎಂಬಾಕೆ ಸೇರಿದಂತೆ ಆರು ಜನರ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ್, ಆರೋಪಿ ಮಂಜುಳಾ ಬಳಿ 8 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡಲಾಗದಿದ್ದಾಗ ಮಂಜುನಾಥ್ ವಿರುದ್ಧ ಮಂಜುಳಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಏಪ್ರಿಲ್ 4ರಂದು ಕೊರಿಯರ್ ಬಂದಿರುವುದಾಗಿ ಮಂಜುನಾಥ್‌ಗೆ ಕರೆ ಮಾಡಿದ್ದ ಆರೋಪಿಗಳು, ಶಂಕರಮಠ ರಸ್ತೆಯ ಬಳಿ ಕರೆಸಿಕೊಂಡಿದ್ದಾರೆ.

ಈ ವೇಳೆ ಮಂಜುಳಾ ಸೇರಿದಂತೆ ಕೆಲ ಮಹಿಳೆಯರು ಕಾರಿನಲ್ಲಿ ಬಂದು ಮಂಜುನಾಥ್ ಅವರನ್ನು ಅಪಹರಿಸಿದ್ದಾರೆ. ಕಾರಿನಲ್ಲಿದ್ದ ಪ್ರಕಾಶ್​ ಮತ್ತು ಆತನ ಚಾಲಕ ವೆಂಕಟಾಚಲಪತಿ, ಮಹಿಳೆಯರೊಂದಿಗೆ ಸೇರಿ ತನ್ನ ಕಚೇರಿಗೆ ಕರೆದೊಯ್ದು ಥಳಿಸಿದ್ದಾರೆ. ಬಳಿಕ ಹಣ, ಮನೆ ದಾಖಲೆಗಳನ್ನು ಕಸಿದುಕೊಂಡಿದ್ದಾರೆ. ನಂತರವೂ ಸಹ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ತನಗೆ ಜೀವಭಯವಿದೆ ಎಂದು ಮಂಜುನಾಥ್ ದೂರಿದ್ದಾರೆ.

ಮಂಜುನಾಥ್ ನೀಡಿದ್ದ ದೂರಿನನ್ವಯ ಸದ್ಯ ಮಂಜುಳಾ, ಪ್ರಕಾಶ್, ವೆಂಕಟಾಚಲಪತಿ, ಮೂವರು ಅಪರಿಚಿತ ಮಹಿಳೆಯರ ವಿರುದ್ಧ ಶಂಕರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸುಳ್ಯ: ಕುಸಿದ ಮಣ್ಣಿನಡಿ ಸಿಲುಕಿದ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರು - Laborer Rescued

ETV Bharat Logo

Copyright © 2024 Ushodaya Enterprises Pvt. Ltd., All Rights Reserved.