ETV Bharat / state

ಹೆಗಲ ಮೇಲೆ ಮಹಿಳಾ ರೋಗಿ ಹೊತ್ತೊಯ್ದ ಗ್ರಾಮಸ್ಥರು: ಖಾನಾಪುರ ಕಾಡಂಚಿನ ಅಮಗಾಂವ್​ನಲ್ಲಿ ದಯನೀಯ ಸ್ಥಿತಿ - villagers carried the patient

author img

By ETV Bharat Karnataka Team

Published : Jul 20, 2024, 1:08 PM IST

Updated : Jul 20, 2024, 2:42 PM IST

ಬೆಳಗಾವಿಯ ಕಾಡಂಚಿನಲ್ಲಿರುವ ಅಮಗಾಂವ್​ನಲ್ಲಿ ಸರಿಯಾದ ರಸ್ತೆ ಮಾರ್ಗ ಇಲ್ಲದ ಕಾರಣ ಮಹಿಳಾ ರೋಗಿಯನ್ನು ಗ್ರಾಮಸ್ಥರು ಹೆಗಲ ಮೇಲೆ ಹೊತ್ತು 5 ಕಿ.ಮೀ ವರೆಗೆ ಸಾಗಿದ್ದಾರೆ.

ಹೆಗಲ ಮೇಲೆ ಮಹಿಳಾ ರೋಗಿ ಹೊತ್ತೊಯ್ದ ಗ್ರಾಮಸ್ಥರು
ಹೆಗಲ ಮೇಲೆ ಮಹಿಳಾ ರೋಗಿ ಹೊತ್ತೊಯ್ದ ಗ್ರಾಮಸ್ಥರು (ETV Bharat)

ಬೆಳಗಾವಿ: ಧಾರಾಕಾರ ಮಳೆಯಲ್ಲಿ ಐದು ಕಿ.ಮೀ ಹೆಗಲ ಮೇಲೆ ಮಹಿಳಾ ರೋಗಿಯನ್ನು ಹೊತ್ತುಕೊಂಡು ಹೋಗಿ ಗ್ರಾಮಸ್ಥರು‌ ಜೀವ ಉಳಿಸಿರುವ ಘಟನೆ ಖಾನಾಪುರ ತಾಲ್ಲೂಕಿನ ಕಾಡಂಚಿನ ಅಮಗಾಂವ್​ ಗ್ರಾಮದಲ್ಲಿ ನಡೆದಿದೆ.

36 ವರ್ಷದ ಹರ್ಷದಾ ಘಾಡಿ ಅವರ ಪ್ರಾಣ ಉಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಹರ್ಷದಾ ಮೂರ್ಛೆ ಹೋಗಿದ್ದರು. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಿತ್ತು. ದಟ್ಟ ಅಭಯಾರಣ್ಯದಲ್ಲಿರುವ ಅಮಗಾಂವ್​ ಗ್ರಾಮಕ್ಕೆ ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲಾ, ಮೊಬೈಲ್ ನೆಟ್ವರ್ಕ್ ಸಹ ಬರೋದಿಲ್ಲಾ.

ಹರ್ಷದಾ ಅವರ ಪ್ರಾಣ ಉಳಿಸಲು ಕಟ್ಟಿಗೆಯನ್ನೇ ಸ್ಟ್ರೆಚರ್​ ರೀತಿ ಮಾಡಿಕೊಂಡು ರಕ್ಕಸ ಮಳೆಯಲ್ಲಿ ಐದು ಕಿಲೋ ಮೀಟರ್ ಹೊತ್ತುಕೊಂಡು ಹೋಗಿದ್ದಾರೆ. ಆಂಬ್ಯುಲೆನ್ಸ್ ಬರಲು ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆವರೆಗೂ ಆ ಮಹಿಳೆಯನ್ನು ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದಾರೆ. ಅಲ್ಲಿಂದ ಮತ್ತೆ 1 ಕಿಲೋಮೀಟರ್ ದೂರ ಹೋಗಿ ಮೊಬೈಲ್ ನೆಟ್ವರ್ಕ್ ಬರುವ ಸ್ಥಳದಿಂದ 108ಗೆ ಕರೆ ಮಾಡಿದ್ದಾರೆ.

ತಕ್ಷಣವೇ ಜಾಂಬೋಟಿಯಿಂದ ರೋಗಿ ಇದ್ದಲ್ಲಿಗೆ ಆಂಬ್ಯುಲೆನ್ಸ್​ ಬಂದಿದೆ. ಮೊದಲು ಆಂಬ್ಯುಲೆನ್ಸ್​ ಸಿಬ್ಬಂದಿ ಮೂರ್ಚೆ ಹೋಗಿದ್ದ ಹರ್ಷದಾಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹರ್ಷದಾ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಾಗಿಸಲಾಗಿದೆ. ಆಂಬ್ಯುಲೆನ್ಸ್​ ಬರಲು ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಕಟ್ಟಿಗೆ ಸ್ಟ್ರೆಚರ್ ನಲ್ಲಿ ಮಹಿಳಾ ರೋಗಿಯೊಬ್ಬರನ್ನು ಗ್ರಾಮಸ್ಥರು ಹೊತ್ತೊಯ್ದಿರುವ ದಯನೀಯ ಘಟನೆಗೆ ಖಾನಾಪುರ ತಾಲೂಕು ಸಾಕ್ಷಿಯಾಗಿದೆ.

ಅತಿ ಹೆಚ್ಚು ಮಳೆ ಬೀಳುವ ಅಮಗಾಂವ್​: ಖಾನಾಪುರ ತಾಲೂಕಿನ ದಟ್ಟ ಕಾಡಿನಲ್ಲಿರುವ ಅಮಗಾಂವ್​ ಎರಡು ಬಾರಿ 10 ಸಾವಿರ ಮಿ.ಮೀ. ಮಳೆ ದಾಖಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಆಗುಂಬೆ ಜೊತೆಗೆ ಅಮಗಾಂವ್​ ರೇಸ್ ನಲ್ಲಿದೆ. ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಮಳೆ ಆಗುತ್ತದೆ. ತುರ್ತು ಆರೋಗ್ಯ ಸಮಸ್ಯೆ ಉಂಟಾದರೆ ಇಲ್ಲಿನ ಜನ ಆಸ್ಪತ್ರೆಗೆ ಬರಬೇಕು ಎಂದರೆ ಈ ರೀತಿ ಅವರನ್ನು ಹೊತ್ತುಕೊಂಡೇ ಬರುವ ಸ್ಥಿತಿಯಿದೆ. ಹೀಗೆ ಹೋಗುವಾಗ ಚಿಕಿತ್ಸೆ ಸಿಗದೆ ಅದೆಷ್ಟೊ ಜನರು ಜೀವವನ್ನೆ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ತಾಲೂಕು ಆಡಳಿತ ಏನಾದರು ಪರ್ಯಾಯ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಬೀದಿಗೆ ಬಿದ್ದ ನೂರಾರು ಕುಟುಂಬಗಳು - 190 houses were damaged due to rain

Last Updated : Jul 20, 2024, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.