ETV Bharat / state

ಬೆಳಗಾವಿ ಗಣೇಶೋತ್ಸವಕ್ಕಿದೆ ಶತಮಾನದ ನಂಟು; ಮುಗಿಲು ಮುಟ್ಟಿದ ಸಂಭ್ರಮ - Ganesha Festival Celebration - GANESHA FESTIVAL CELEBRATION

ಬೆಳಗಾವಿಯ ಝೇಂಡಾ ಚೌಕ್​ನಲ್ಲಿನ ಸಾರ್ವಜನಿಕ ಗಣೇಶೋತ್ಸವ 120ನೇ ವರ್ಷಕ್ಕೆ ಕಾಲಿಟ್ಟಿದೆ. 1905ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಇಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ್ದು, 120 ವರ್ಷಗಳ ನಂತರವೂ ಮುಂದುವರೆದಿದೆ.

GANESHA FESTIVAL CELEBRATION
ಸಾರ್ವಜನಿಕ ಗಣೇಶೋತ್ಸವ (ETV Bharat)
author img

By ETV Bharat Karnataka Team

Published : Sep 7, 2024, 4:50 PM IST

ಬೆಳಗಾವಿ: ಇಡೀ ರಾಜ್ಯದಲ್ಲೇ ಸಾರ್ವಜನಿಕವಾಗಿ ಗಣೇಶೋತ್ಸವ ಆರಂಭ ಆಗಿರೋದು ಗಡಿನಾಡು ಬೆಳಗಾವಿಯಲ್ಲಿ. ಇದಕ್ಕೆ ಅದರದ್ದೇಯಾದ ಇತಿಹಾಸವೂ ಉಂಟು. ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು ಇಲ್ಲಿಗೆ ಬಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಶ್ರೇಯಸ್ಸು ಬೆಳಗಾವಿಗಿದೆ. ಅಂದು ಆರಂಭವಾದ ಈ ಉತ್ಸವ ಇಂದು ಹೆಮ್ಮರವಾಗಿ ಬೆಳೆದಿದ್ದು, ಕುಂದಾನಗರಿಯ ಗಲ್ಲಿ ಗಲ್ಲಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ಭಕ್ತರು ಸಂಭ್ರಮಿಸುತ್ತಿದ್ದಾರೆ.

ಹೌದು, ಕುಂದಾನಗರಿ ಬೆಳಗಾವಿಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಗಲ್ಲಿ ಗಲ್ಲಿಯಲ್ಲಿಯೂ ಗಣೇಶ ಮೂರ್ತಿಗಳ ದರ್ಬಾರ್ ಜೋರಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಚಿಕ್ಕ ಚಿಕ್ಕ ಮೂರ್ತಿ ಸೇರಿ ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶನ ಆರಾಧನೆ ಮಾಡುತ್ತಿದ್ದಾರೆ. ಬಾಜಾಭಜಂತ್ರಿ, ವಾದ್ಯ ಮೇಳಗಳನ್ನು ಬಾರಿಸುತ್ತಾ, ಪಟಾಕಿ ಸಿಡಿಸಿ ಗಣಪನನ್ನು ಭಕ್ತರು ಮನೆಗೆ ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು.

1905ರಲ್ಲಿ ಬೆಳಗಾವಿಯ ಝೇಂಡಾ ಚೌಕ್​ನಲ್ಲಿ ಬಾಲಗಂಗಾಧರ ತಿಲಕರಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಮತ್ತು ದೇಶದ ಎರಡನೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗುತ್ತದೆ. ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಗಣೇಶೋತ್ಸವಕ್ಕೆ ಅಂದು ಚಾಲನೆ ನೀಡಲಾಗಿತ್ತು. ಆ ಪರಂಪರೆ 120 ವರ್ಷಗಳ ನಂತರವೂ ಮುಂದುವರಿದಿದೆ. ಬೆಳಗಾವಿಯಲ್ಲಿ ಅಂದು 1 ಗಣೇಶ ಮಂಡಳಿ ಇದ್ದಿದ್ದು, ಇಂದು‌ 390ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲಾದ್ಯಂತ 1200ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಬೃಹದಾಕಾರದ, ಭವ್ಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ.

11 ದಿನಗಳ ಕಾಲ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. 11ನೇ ದಿನ‌ ಮೂರ್ತಿಗಳ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದ್ದು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಮೂರ್ತಿಗಳ ನಿಮಜ್ಜನಕ್ಕೆ ಕಪಿಲೇಶ್ವರದ ಎರಡು ಹೊಂಡ, ಜಕ್ಕೇರಿ ಹೊಂಡ ಸೇರಿದಂತೆ ನಗರದಲ್ಲಿನ 9 ಹೊಂಡಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಹಾನಗರ ಪಾಲಿಕೆ ಸಂಚಾರಿ ವಾಹನಗಳಲ್ಲೂ ಮೂರ್ತಿಗಳನ್ನು ನಿಮಜ್ಜನ ಮಾಡಬಹುದಾಗಿದೆ.

3 ಸಾವಿರ ಪೊಲೀಸರ ನಿಯೋಜನೆ: ಗಣೇಶೋತ್ಸವವನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತಾಲಯದಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 7 ಜನ ಎಸ್ಪಿ, 25 ಡಿವೈಎಸ್ ಪಿ, 65 ಇನ್ಸ್‌ಪೆಕ್ಟರ್, 100ಕ್ಕೂ ಅಧಿಕ ಪಿಎಸ್ಐ ಹಾಗೂ ಗೃಹರಕ್ಷಕ ದಳ ಮತ್ತು ಕೆಎಸ್‌ಆರ್​ಪಿ ತುಕಡಿ ಸೇರಿದಂತೆ ಒಟ್ಟು ಮೂರು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತೀವ್ರ ನಿಗಾ ವಹಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: 2.21 ಲಕ್ಷ ಹುಣಸೆ ಬೀಜಗಳಲ್ಲಿ ಅರಳಿದ ಪರಿಸರ ಸ್ನೇಹಿ ಗಣಪ; ಬೆಳಗಾವಿಯಲ್ಲೊಂದು ವಿನೂತನ ಗಜಮುಖ - Eco friendly Ganesha

ETV Bharat Logo

Copyright © 2025 Ushodaya Enterprises Pvt. Ltd., All Rights Reserved.