ಬೆಳಗಾವಿ: ತಂದೆ ದುಡಿಮೆ ಹಣ ಕೇಳಿದ್ದಕ್ಕೆ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಕೇಳಿ ಬಂದಿದೆ. ತಂದೆ ಕೆಲಸ ಮಾಡ್ತಿದ್ದ ಮಾಲೀಕರಿಂದ 17ವರ್ಷದ ಮಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಪ್ರಕರಣ?: ಬ್ಯಾಂಡ್ ಕಂಪನಿಯೊಂದರಲ್ಲಿ ವ್ಯಕ್ತಿಯೊಬ್ಬರು ಕೆಲಸ ಮಾಡ್ತಿದ್ದರು. ಯುಗಾದಿ ಹಬ್ಬ ಹಿನ್ನೆಲೆ ಮೂರು ದಿನದ ದುಡಿಮೆ ಹಣ ನೀಡುವಂತೆ ತಂದೆ ಮತ್ತು ಮಗಳು ಕೇಳಿದ್ದಾರೆ. ಈ ವೇಳೆ, ಬ್ಯಾಂಡ್ ಕಂಪನಿ ಮಾಲೀಕ ಅವರಿಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಇದೆ.
ಮಾಲೀಕರಾದ ಅಶೋಕ ಭಜಂತ್ರಿ, ಕರೆಪ್ಪ ಭಜಂತ್ರಿ ಎಂಬುವವರು ತಂದೆ ಮತ್ತು ಮಗಳ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಖಾಸಗಿ ಆಸ್ಪತ್ರೆ ಐಸಿಯುವಿನಲ್ಲಿ 17 ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳದ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಕುಟುಂಬಸ್ಥರು ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಇವರೇ ನೋಡಿ ಟಾಪರ್ಸ್; ಹೀಗಿದೆ ಡಿಟೇಲ್ಸ್ - 2nd PUC toppers