ETV Bharat / state

ಒಂದೇ ಕ್ಷೇತ್ರದಿಂದ 8 ಬಾರಿ ಗೆಲುವು: ಲಿಮ್ಕಾ ದಾಖಲೆ ಬರೆದ ಬಸವರಾಜ ಹೊರಟ್ಟಿ

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಒಂದೇ ಕ್ಷೇತ್ರದಿಂದ 8 ಬಾರಿ ಆಯ್ಕೆಯಾದ ವಿಶೇಷ ಸಾಧನೆಗಾಗಿ ಪ್ರತಿಷ್ಠಿತ ಲಿಮ್ಕಾ ಬುಕ್​ ಆಫ್ ರೆಕಾರ್ಡ್ಸ್​ ಸೇರ್ಪಡೆಯಾಗಿದ್ದಾರೆ.

author img

By ETV Bharat Karnataka Team

Published : Jan 25, 2024, 10:16 AM IST

Updated : Jan 25, 2024, 11:55 AM IST

ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸತತವಾಗಿ ಒಂದೇ ಕ್ಷೇತ್ರದಿಂದ 8 ಬಾರಿ ಆಯ್ಕೆಯಾದ ಸಾಧನೆಗಾಗಿ ಲಿಮ್ಕಾ ಬುಕ್​ ಆಫ್ ರೆಕಾರ್ಡ್ಸ್​ ಸೇರ್ಪಡೆಯಾಗಿದ್ದಾರೆ. ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 8 ಬಾರಿ ವಿಧಾನ ಪರಿಷತ್​ಗೆ ಆಯ್ಕೆ ಆಗಿರುವ ಹೊರಟ್ಟಿ ಅವರು ದಾಖಲೆ ಬರೆದಿದ್ದಾರೆ.

ಹೊರಟ್ಟಿ ಸಾಧನೆ ಕುರಿತು..: ರಾಜಕೀಯದಲ್ಲಿ ಕಳೆದ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಅವಧಿ ಸಾರ್ವಜನಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಏಕೈಕ ಕನ್ನಡಿಗ ಎನ್ನುವ ಹಿರಿಮೆ ಬಸವರಾಜ ಹೊರಟ್ಟಿಯವರದ್ದು. ಪರಿಷತ್ತಿನ ಪಶ್ಚಿಮ ಶಿಕ್ಷಕರ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕಳೆದ 43 ವರ್ಷಗಳಿಂದ ಪರಿಷತ್‌ನಲ್ಲಿ ಶಿಕ್ಷಕರ ಹಿತಕ್ಕೆ ಹೊರಟ್ಟಿ ಶ್ರಮಿಸುತ್ತಿದ್ದಾರೆ.

ಏನಿದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್?: 1990ರಲ್ಲಿ ಆರಂಭಗೊಂಡ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಭಾರತೀಯರ ವಿಶ್ವ ದಾಖಲೆಗಳನ್ನು ದಾಖಲಿಸುವ ಸಂಸ್ಥೆ. ಭಾರತದಲ್ಲಿ ಪ್ರಕಟವಾದ 2024ನೇ ಸಾಲಿನ ವಾರ್ಷಿಕ ಪುಸ್ತಕದಲ್ಲಿ ಬಸವರಾಜ ಹೊರಟ್ಟಿ ಐತಿಹಾಸಿಕ ದಾಖಲೆಗಳನ್ನು ದಾಖಲಿಸಿ ಪ್ರಕಟಿಸಲಾಗಿದೆ.

ಈ ಬಾರಿಯ ವಾರ್ಷಿಕ ಪುಸ್ತಕದಲ್ಲಿ ಸಿಕ್ಕಿಂ ರಾಜ್ಯದ ಮಾಜಿ ಮುಖ್ಯಮಂತ್ರಿ ಪವನ್​ ಕುಮಾರ್ ಅವರು 24 ವರ್ಷ 165 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವಾವಧಿ ದಿನಗಳನ್ನು ದಾಖಲಿಸಲಾಗಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರ 23 ವರ್ಷ 137 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ದಾಖಲಿಸಲಾಗಿದೆ.

ಹೊರಟ್ಟಿ ಕುರಿತ ಕುತೂಹಲದ ಮಾಹಿತಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಇಲ್ಲಿಯವರೆಗೆ ಒಮ್ಮೆಯೂ ಸೋತಿಲ್ಲ. ಎಂಟು ಬಾರಿ ಸತತವಾದ ಗೆಲುವು ತಮ್ಮದಾಗಿಸಿಕೊಳ್ಳುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಪರಿಷತ್ ಪ್ರವೇಶಿಸಿ ಇಂದಿಗೆ 43 ವರ್ಷ 202 ದಿನಗಳಾಗಿವೆ. ಭಾರತ ಇತಿಹಾಸದಲ್ಲಿಯೇ ಇದು ಐತಿಹಾಸಿಕ ದಾಖಲೆ. ಇಷ್ಟೊಂದು ಸುದೀರ್ಘ ಚುನಾವಣಾ ಅವಧಿಯ ರಾಜಕಾರಣವನ್ನು ಮತ್ತೊಬ್ಬರು ದೇಶದ ಇತಿಹಾಸದಲ್ಲಿ ಮಾಡಿಲ್ಲ.

ಬಸವರಾಜ ಹೊರಟ್ಟಿ ಹೆಸರು ಹಲವಾರು ದಾಖಲೆಗಳಲ್ಲಿ ನಮೂದಾಗಿದ್ದು, ಪ್ರಮುಖವಾಗಿ ಲಂಡನ್ನಿನ ವರ್ಲ್ಡ್ ಬುಕ್ ಆಫ್​ ದಾಖಲೆ ಗರಿ 2022ರಲ್ಲಿ ದೊರಕಿದೆ. ಭಾರತದ ಚುನಾವಣಾ ಆಯೋಗದಲ್ಲಿ ಇವರ ಸುದೀರ್ಘ ಸೇವಾವಧಿಯ ದಾಖಲೆಗಳು ಅಂಕಿಸಂಖ್ಯಾ ಇಲಾಖೆಯಲ್ಲಿ ದಾಖಲೀಕರಣಗೊಂಡು ಗೆಜೆಟ್‍ನಲ್ಲಿ ಪ್ರಕಟವಾಗಿವೆ.

ಶಿಕ್ಷಕರೊಬ್ಬರು ಶಿಕ್ಷಕರ ಪ್ರತಿನಿಧಿಯಾಗಿ ಹಲವಾರು ಖಾತೆಗಳ ಸಚಿವರಾಗಿ ಮೂರನೇ ಬಾರಿ ಸಭಾಪತಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಇತಿಹಾಸ. ಬಸವರಾಜ ಹೊರಟ್ಟಿ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಪ್ರಕಟಿಸಿದ್ದು ಅವರ ಹಲವಾರು ಹಿತೈಷಿಗಳು, ಅಭಿಮಾನಿಗಳು ಹಾಗೂ ಶಿಕ್ಷಕರ ಸಮೂಹಕ್ಕೆ ಹರ್ಷ ತಂದಿದೆ.

ಇದನ್ನೂ ಓದಿ: ಅಯೋಧ್ಯೆಯ ರಾಮ ಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ತವರಿಗೆ: ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

Last Updated : Jan 25, 2024, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.