ETV Bharat / state

ಇವರನ್ನೇ ಸಿಎಂ ಮಾಡಿ ಎನ್ನುವುದು ಮಠಾಧೀಶರ ಕೆಲಸವಲ್ಲ: ಜಯಮೃತ್ಯುಂಜಯ ಸ್ವಾಮೀಜಿ - CM Change Issue

ಮಠಾಧೀಶರು ಸರ್ಕಾರಕ್ಕೆ ಸಲಹೆ ಕೊಡಬೇಕೇ ಹೊರತು, ಇವರನ್ನೇ ಸಿಎಂ ಮಾಡಿ ಎಂದು ಹೇಳಬಾರದು.- ಜಯಮೃತ್ಯುಂಯ ಸ್ವಾಮೀಜಿ

JAYA MRUTHYUNJAYA SWAMIJI REACTS
ಜಯಮೃತ್ಯುಂಜಯ ಸ್ವಾಮೀಜಿ (ETV Bharat)
author img

By ETV Bharat Karnataka Team

Published : Jul 4, 2024, 8:20 PM IST

ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ (ETV Bharat)

ಹುಬ್ಬಳ್ಳಿ: ಯಾವುದೇ ಸರ್ಕಾರದಲ್ಲಿ ಇವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಹೇಳುವುದು ಮಠಾಧೀಶರ ಕೆಲಸವಲ್ಲ. ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಆಡಳಿತ ಪಕ್ಷದ ಶಾಸಕರ ಕೆಲಸ.
ಸರ್ಕಾರ ಸಲಹೆ ಕೇಳಿದರೆ ಸಮಾಜದ ಗುರುಗಳಾಗಿ ಕೊಡಬಹುದು ಎಂದು ಕೂಡಲಸಂಗಮ ಪಂಚಮಸಾಲಿ‌ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಾದಯಾತ್ರೆಯ ನಂತರ ಇವರನ್ನೇ ಮಂತ್ರಿ ಮಾಡಿ ಅಂತಾ ಹೇಳುವುದನ್ನು ಬಿಟ್ಟಿದ್ದೇವೆ. ನಮ್ಮ ಗುರಿ ಏನಿದ್ದರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವುದು ಎಂದರು.

ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿ ಪಡೆದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸಿ 2A ಮೀಸಲಾತಿ ಸಿಗುವವರೆಗೆ ಹೋರಾಟ ಮಾಡುತ್ತೇವೆ. ಮಳೆಗಾಲದ ಅಧಿವೇಶನದಲ್ಲಿ ಸರ್ಕಾರ ಮೀಸಲಾತಿ ಘೋಷಿಸಬೇಕು. ಅಧಿವೇಶನದಲ್ಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಸಮಾಜದ ಶಾಸಕರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಜುಲೈ 6ರಂದು ಹುಬ್ಬಳ್ಳಿಯಲ್ಲಿ ಪತ್ರ ಚಳುವಳಿ ನಡೆಯಲಿದೆ. ಅಂದು ಶಾಸಕ ಎಂ.ಆರ್.ಪಾಟೀಲ್, ಅರವಿಂದ ಬೆಲ್ಲದ್ ಮನೆಗೆ ಹೋಗಿ ಆಗ್ರಹ ಪತ್ರ ನೀಡಲಾಗುವುದು. ನಮ್ಮ ಶಾಸಕರು ಅಧಿವೇಶನದಲ್ಲಿ ಮೀಸಲಾತಿಗೆ ಆಗ್ರಹಿಸದೇ ಇರುವುದು ಸಮಾಜಕ್ಕೆ ನಿರಾಸೆ ಮೂಡಿಸಿದೆ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸತ್ಸಂಗದಲ್ಲಿ ಸಾವು-ನೋವು: ಖೇದ ವ್ಯಕ್ತಪಡಿಸಿದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ - Srishaila Swamji

ETV Bharat Logo

Copyright © 2024 Ushodaya Enterprises Pvt. Ltd., All Rights Reserved.