ETV Bharat / state

ದೊಡ್ಡಬಳ್ಳಾಪುರ ಪೊಲೀಸರಿಂದ ಅಟ್ಟಿಕಾ ಬಾಬು ಬಂಧನ - ATTICA BABU ARRESTED

author img

By ETV Bharat Karnataka Team

Published : Jun 29, 2024, 3:07 PM IST

ಎರಡು ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜಾಮೀನಿನಲ್ಲಿ ಹೊರಬರುತ್ತಿದ್ದಂತೆ ಅಟ್ಟಿಕಾ ಬಾಬು ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Atika Babu arrested by Doddaballapur Rural Police
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಆಟಿಕಾ ಬಾಬು ಬಂಧನ (ETV Bharat)

ದೊಡ್ಡಬಳ್ಳಾಪುರ: ಚಿನ್ನ ಕಳವು ಮಾಡಿದವರಿಂದ ಚಿನ್ನದ ಸರ‌ ಪಡೆದಿದ್ದ ಆರೋಪ ಪ್ರಕರಣದಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ‌ ಬೊಮ್ಮನಹಳ್ಳಿ ಬಾಬು ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ಚಿನ್ನ ಕಳ್ಳತನ ಪ್ರಕರಣ ನಡೆದಿತ್ತು. ಇದರ ತನಿಖೆ ನಡೆಸಿದ ಪೊಲೀಸರಿಗೆ ಅಟ್ಟಿಕಾ ಬಾಬು ಕಳ್ಳರಿಂದ ಚಿನ್ನದ ಸರ ಪಡೆದಿದ್ದ‌ರು ಎಂಬ ಮಾಹಿತಿ ತಿಳಿದಿತ್ತು. ತುಮಕೂರಿನಲ್ಲಿ ಕಳೆದ‌ ಎರಡು ದಿನಗಳ ಹಿಂದಷ್ಟೇ ತುರುವೇಕೆರೆ ಪೊಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಬಾಬು ಅವರನ್ನು ಬಂಧಿಸಿದ್ದರು. ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಿದ್ದಂತೆ ದೊಡ್ಡಬಳ್ಳಾಪುರ ಪೊಲೀಸರು ಆರೋಪಿ ಅಟ್ಟಿಕಾ ಬಾಬು ಅವರನ್ನು ಬಂಧಿಸಿ ಕರೆತಂದಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಾಬು ಅವರನ್ನು ವಿಚಾರಣೆ‌ ನಡೆಸಲಾಗುತ್ತಿದೆ. ಪೊಲೀಸರು ವಿಚಾರಣೆಗಾಗಿ ಕರೆದೊಯ್ಯುವ ಸಮಯದಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಅಟ್ಟಿಕಾ ಬಾಬು, ಹೈಕೋರ್ಟ್ ಆದೇಶ ಇದ್ದರೂ, ವಿನಾಕಾರಣ ನನ್ನನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: 18 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ಬಂಧನ - Chain Snatching Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.