ETV Bharat / state

ರ‍್ಯಾಪಿಡೋ ಕ್ಯಾಪ್ಟನ್​ಗೆ ಬೆದರಿಸಿ ಹಣ ಸುಲಿಗೆ: ಬೆಂಗಳೂರಲ್ಲಿ ಇಬ್ಬರ ಬಂಧನ - Assault On Rapido Rider - ASSAULT ON RAPIDO RIDER

ಬೆಂಗಳೂರಿನಲ್ಲಿ ರ‍್ಯಾಪಿಡೋ ಸವಾರನ ಮೇಲೆ ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರ‍್ಯಾಪಿಡೋ ಕ್ಯಾಪ್ಟನನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಇಬ್ಬರ ಬಂಧನ

author img

By ETV Bharat Karnataka Team

Published : Apr 9, 2024, 2:00 PM IST

ಬೆಂಗಳೂರು: ನಗರದಲ್ಲಿ ರ‍್ಯಾಪಿಡೋ ಕ್ಯಾಪ್ಟನ್‌ಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಭಾತ್ ಮತ್ತು ಪುನೀತ್ ಕುಮಾರ್ ಬಂಧಿತ ಆರೋಪಿಗಳು. ಮಾರ್ಚ್ 19ರಂದು ರೈಡ್ ನೆಪದಲ್ಲಿ ದೀನಬಂಧು ನಾಯಕ್ ಎಂಬ ಉತ್ತರ ಭಾರತ ಮೂಲದ ರ‍್ಯಾಪಿಡೋ ಕ್ಯಾಪ್ಟನ್‌ನ್ನ ಬೆದರಿಸಿದ್ದ ಆರೋಪಿಗಳು ಹಣ ಹಾಗೂ ಆತನ ದ್ವಿಚಕ್ರ ವಾಹನ ಕಿತ್ತುಕೊಂಡು ನೆಲಮಂಗಲ ಸಮೀಪದ ಸೊಂಡೆಕೊಪ್ಪ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು.

ನಗರದಲ್ಲಿ ಆರು ತಿಂಗಳಿನಿಂದ ವಾಸವಿದ್ದ ದೀನಬಂಧು ನಾಯಕ್ ರ‍್ಯಾಪಿಡೋ ಕ್ಯಾಪ್ಟನ್, ಫುಡ್ ಡಿಲೆವರಿ ಬಾಯ್ ಕೆಲಸ ಮಾಡಿಕೊಂಡಿದ್ದ. ಮಾರ್ಚ್ 18ರಂದು ಕೊಟ್ಟಿಗೆಪಾಳ್ಯದಿಂದ ಜೀವನ್ ಭೀಮಾನಗರಕ್ಕೆ ಆರೋಪಿ ಪ್ರಭಾತ್​​ನನ್ನ ಡ್ರಾಪ್ ಮಾಡಿದ್ದ. ಮರುದಿನ ನೇರವಾಗಿ ದೀನಬಂಧು ನಾಯಕ್ ನಂಬರ್​​ಗೆ ಕರೆ ಮಾಡಿದ್ದ ಪ್ರಭಾತ್, ಈಸ್ಟ್ ವೆಸ್ಟ್ ಕಾಲೇಜು ಸಮೀಪದಿಂದ ನೆಲಮಂಗಲಕ್ಕೆ ಡ್ರಾಪ್ ಕೊಡುವಂತೆ ಕೇಳಿದ್ದ. ರ‍್ಯಾಪಿಡೋಗೆ ಕೊಡಬೇಕಾದ ಕಮಿಷನ್ ಉಳಿಯುತ್ತದೆ ಎಂಬ ಆಸೆಯಿಂದ ದೀನಬಂಧು ಆಫ್‌ಲೈನ್ ರೈಡ್​ಗೆ ಒಪ್ಪಿಕೊಂಡು, ಅದರಂತೆ ರಾತ್ರಿ 11ಗಂಟೆ ಸುಮಾರಿಗೆ ನೆಲಮಂಗಲ ಬಳಿ ಆರೋಪಿಯನ್ನ ಡ್ರಾಪ್ ಮಾಡಿದ್ದ.

ಆದರೆ, ಮಾರ್ಗ ಮಧ್ಯೆಯೇ ನೆಲಮಂಗಲ ಬಳಿ ತನ್ನ ಸ್ನೇಹಿತನನ್ನ ಕರೆಯಿಸಿಕೊಂಡಿದ್ದ ಆರೋಪಿ, ದೀನಬಂಧು ಮೇಲೆ ಹಲ್ಲೆ ಮಾಡಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಬಳಿಕ ಆತನನ್ನ ಆಟೋವೊಂದರಲ್ಲಿ ಕೂರಿಸಿಕೊಂಡಿದ್ದ ಆರೋಪಿಗಳು ತುಮಕೂರು ಕಡೆ ಕರೆದುಕೊಂಡು ಹೋಗಿ ಹಂತಹಂತವಾಗಿ ಸುಮಾರು 8 ಸಾವಿರಕ್ಕೂ ಆಧಿಕ ಹಣ ವಸೂಲಿ ಮಾಡಿದ್ದರು. ಬಳಿಕ 'ಊರಿಗೆ ಹೋಗಿ ವಿಡಿಯೋ ಕಾಲ್ ಮಾಡು, ಆಮೇಲೆ ನಿನ್ನ ದ್ವಿಚಕ್ರ ವಾಹನವನ್ನ ರೈಲಿನಲ್ಲಿ ಕಳಿಸುತ್ತೇವೆ' ಎಂದು ಆತನನ್ನ ಸೊಂಡೆಕೊಪ್ಪ ಬಳಿ ಬಿಟ್ಟು ಪರಾರಿಯಾಗಿದ್ದರು.

ಸ್ನೇಹಿತರ ನೆರವಿನಿಂದ ವಾಪಾಸ್ ಬಂದ ದೀನಬಂಧು ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನೆಲಮಂಗಲ ಮೂಲದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿತರಿಂದ ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿದ್ದ ಆಟೋ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ - Bus Driver Attacked

ETV Bharat Logo

Copyright © 2025 Ushodaya Enterprises Pvt. Ltd., All Rights Reserved.