ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ: ಅಶ್ವತ್ಥನಾರಾಯಣ - ಡಾ ಸಿ ಎನ್ ಅಶ್ವತ್ಥನಾರಾಯಣ

3ನೇ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪೂರಕವಾಗಿದೆ. ಸಾಕಷ್ಟು ಸಮಾಲೋಚಿಸಿ ಈ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Dr. C. N. Ashwath Narayan spoke to the media.
ಮಾಜಿ ಸಚಿವ ಡಾ ಸಿ ಎನ್.ಅಶ್ವತ್ಥನಾರಾಯಣ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Feb 5, 2024, 8:30 PM IST

Updated : Feb 5, 2024, 9:16 PM IST

ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ವಿದ್ಯಾರ್ಥಿ ಹಿತಕ್ಕೆ ಧಕ್ಕೆ ತರುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಶಿಕ್ಷಣ ಗುಣಮಟ್ಟ ಹೆಚ್ಚಳ, ಅದರಲ್ಲಿರುವ ನ್ಯೂನತೆ ಹೋಗಲಾಡಿಸಲು ಪೂರಕವಾಗಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿ, 6 ವರ್ಷಕ್ಕಿಂತ ಹೆಚ್ಚು ಸಮಯ ಸಮಾಲೋಚನೆ ಮಾಡಿ ಬಳಿಕ ಜಾರಿಗೊಳಿಸಲಾಗಿದೆ. ಅದರ ಅನುಷ್ಠಾನವಾಗಿ ಮೂರು ವರ್ಷಗಳಾಗಿದೆ. 2020ರಲ್ಲಿ ಕ್ರಿಯಾ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರ ಆಧಾರದಲ್ಲೇ ಅನುಷ್ಠಾನ ಕಾರ್ಯ ನಡೆದಿದೆ ಎಂದರು.

ವಿನಾಕಾರಣ ಗೊಂದಲ: ಶಿಕ್ಷಣದ ವಿಚಾರದಲ್ಲಿ ವಿನಾಕಾರಣ ಗೊಂದಲ ನಿರ್ಮಿಸಲಾಗುತ್ತಿದೆ. ರಾಜ್ಯ ಶಿಕ್ಷಣ ನೀತಿ ಸಂಬಂಧ ತಾತ್ಕಾಲಿಕ ವರದಿ ನೀಡಿದ್ದು, 4 ವರ್ಷದ ಪದವಿ ಕೋರ್ಸ್ ಬೇಕಿಲ್ಲ, 3 ವರ್ಷದ ಡಿಗ್ರಿಯೇ ಇರಲಿ ಎಂಬ ಸಲಹೆ, ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ರದ್ದು ಮಾಡುವಂತೆ ಸೂಚಿಸಿರುವ ಮಾಹಿತಿ ಇದೆ ಎಂದು ಹೇಳಿದರು.

4 ವರ್ಷದ ಪದವಿ ಕೋರ್ಸ್ ವಿದ್ಯಾರ್ಥಿ ಆಯ್ಕೆ ಆಧಾರಿತವಾಗಿ ಇರುತ್ತದೆ. ವಿಶ್ವಮಟ್ಟದಲ್ಲಿ 4 ವರ್ಷದ ಪದವಿ ಕೋರ್ಸ್ ಇದೆ. ಬೇರೆ ದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ತೆರಳುವವರಿಗೆ 4 ವರ್ಷದ ಪದವಿ ಓದಿರಬೇಕಾಗುತ್ತದೆ. ಡಾಕ್ಟರೇಟ್ ಪ್ರೋಗ್ರಾಂಗೆ ತೆರಳಲು ಇದರ ಅವಶ್ಯಕತೆ ಇದೆ. ಇಲ್ಲಿಯೇ ಮಾಸ್ಟರ್ಸ್ ಮಾಡುವುದಾದರೆ ಒಂದು ವರ್ಷ ಮಾತ್ರ ಸಾಕು ಎಂದು ತಿಳಿಸಿದರು.

ಸುದೀರ್ಘ ಅಧ್ಯಯನಕ್ಕೂ ಅವಕಾಶ ಇದೆ. ಪ್ರತಿಭಾ ಹೆಚ್ಚಳಕ್ಕೂ ಇದು ಪೂರಕ. ತಂತ್ರಜ್ಞಾನ, ಕೌಶಲ್ಯತೆ, ಗುಣಮಟ್ಟದ ಜ್ಞಾನ ಒಳಗೊಂಡ ಪರಿಪೂರ್ಣ ಶಿಕ್ಷಣ ಒದಗಿಸಲು ನಾವು ಮುಂದಾಗಿದ್ದೆವು. ವಿಶ್ವಮಟ್ಟದಲ್ಲಿ ಸ್ಪರ್ಧೆಗೆ ಪೂರಕ ಶಿಕ್ಷಣ ನೀಡಲು ಮುಂದಾಗಿದ್ದೇವು ಎಂದು ಅವರು ಸ್ಪಷ್ಟಪಡಿಸಿದರು.

ನಾಲ್ಕು ವರ್ಷದ ಪದವಿ ಶಿಕ್ಷಣ ಅತ್ಯಂತ ಅವಶ್ಯಕ:ಈ ಕಾಲಘಟ್ಟದಲ್ಲಿ 4 ವರ್ಷದ ಪದವಿ ಶಿಕ್ಷಣ ಅತ್ಯಂತ ಅವಶ್ಯಕ. ಕೆಲವೊಂದು ಸಂಸ್ಥೆಗಳು ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಹೊಂದಿವೆ. ಸಂಶೋಧನೆ ಸಹಿತ ಹಾಗೂ ಸಂಶೋಧನೆ ರಹಿತ ಹಾನರ್ಸ್ ಮಾಡಲು ಅವಕಾಶವಿದೆ ಎಂದ ಅವರು, ಅರ್ಧದಲ್ಲೇ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳು ಅವರ ನೆರವಿಗೆ ಬರುವ ಕಾರ್ಯವನ್ನು ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ವ್ಯವಸ್ಥೆ ಮಾಡಲಿದೆ. ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಮ್‍ವರ್ಕ್ (ಎನ್‍ಎಸ್‍ಕ್ಯುಎಫ್) ಮೂಲಕ ಅರ್ಧದಲ್ಲೇ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಅಳೆಯಲು ಅವಕಾಶವಿದೆ ಎಂದು ತಿಳಿಸಿದರು.

ಬದುಕು ಕಟ್ಟಿಕೊಳ್ಳಲು ಪೂರಕ ಮತ್ತು ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕಲಿಕೆಯಲ್ಲಿ ಅವುಗಳಿಗೆ ಅವಕಾಶ ಕೊಡಲಾಗಿತ್ತು . ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಕೈಬಿಡುವ ಮೂಲಕ ಸರಕಾರ ಮನ ಬಂದಂತೆ ನಡೆದುಕೊಳ್ಳುತ್ತಿದೆ. ಇವರ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ, ವಿದೇಶಗಳಲ್ಲಿ ಓದುತ್ತಾರೆ. ಆದರೆ ಬದಲಾದ ಶಿಕ್ಷಣ ವ್ಯವಸ್ಥೆಯಿಂದ ಪಬ್ಲಿಕ್ ವಿವಿ ಮತ್ತು ಸರಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ ಎಂದು ಹೇಳಿದರು.

ಇದನ್ನೂಓದಿ: ಕರ್ನಾಟಕದಲ್ಲಿ ಗ್ರೀನ್ ಹೈಡ್ರೋಜನ್​ ವಿದ್ಯುತ್ ಉತ್ಪಾದನೆಗೆ ಹೊಸ ನೀತಿ ಜಾರಿ: ಇಂಧನ ಸಚಿವ ಕೆ.ಜೆ.ಜಾರ್ಜ್

Last Updated : Feb 5, 2024, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.