ETV Bharat / state

ಏಪ್ರಿಲ್​ 18 ಅಂತಾರಾಷ್ಟ್ರೀಯ ಪರಂಪರೆಯ ದಿನ: ಇದರ ಹುಟ್ಟು, ಉದ್ದೇಶ, ಈ ವರ್ಷದ ಥೀಮ್​ ಏನು? - International Heritage Day

ಏಪ್ರಿಲ್ 18 ಅಂತಾರಾಷ್ಟ್ರೀಯ ಪರಂಪರೆಯ ದಿನವಾಗಿದೆ. ಈ ವರ್ಷ "ಡಿಸ್ಕವರ್​ ಅಂಡ್​​​ ಎಕ್ಸ್​ಪಿರಿಯನ್ಸ್​ ಡೈವರ್ಸಿಟಿ" ಎಂಬ ಥೀಮ್​ ಇಟ್ಟುಕೊಂಡು ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯ ಉದ್ದೇಶ, ಪ್ರಪಂಚದಲ್ಲಿ ಎಷ್ಟು ಅಂತಾರಾಷ್ಟ್ರೀಯ ಪಾರಂಪರಿಕ ಕಟ್ಟಡಗಳಿವೆ ಎಂಬುದರ ಕುರಿತ ಸಂದರ್ಶನ ಇಲ್ಲಿದೆ.

ಅಂತರಾಷ್ಟ್ರೀಯ ಪರಂಪರೆಯ ದಿನ
ಅಂತರಾಷ್ಟ್ರೀಯ ಪರಂಪರೆಯ ದಿನ
author img

By ETV Bharat Karnataka Team

Published : Apr 18, 2024, 1:22 PM IST

Updated : Apr 18, 2024, 4:28 PM IST

ಏಪ್ರಿಲ್​ 18 ಅಂತಾರಾಷ್ಟ್ರೀಯ ಪರಂಪರೆಯ ದಿನ: ಇದರ ಹುಟ್ಟು, ಉದ್ದೇಶ, ಈ ವರ್ಷದ ಥೀಮ್​ ಏನು?

ಮೈಸೂರು: ಏಪ್ರಿಲ್ 18, ಅಂತಾರಾಷ್ಟ್ರೀಯ ಪರಂಪರೆಯ ದಿನ. ಈ ದಿನ ವಿಶೇಷತೆ ಏನು? 2024ರ ವಿಶ್ವ ಅಂತಾರಾಷ್ಟ್ರೀಯ ಪರಂಪರೆಯ ಥೀಮ್​ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರಂಪರಿಕ ತಾಣಗಳು ಯಾವುವು ಎಂಬ ವಿಷಯಗಳ ಬಗ್ಗೆ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದ ಮತ್ತು ಪರಂಪರೆ ಇಲಾಖೆ ಆಯುಕ್ತರಾದ ದೇವರಾಜ್ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.

ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ್ ನೀಡಿದ ಮಾಹಿತಿ ಹೀಗಿದೆ:

ಅಂತಾರಾಷ್ಟ್ರೀಯ ಪಾರಂಪರಿಕ ದಿನದ ವಿಶೇಷತೆ ಮತ್ತು ಹಿನ್ನೆಲೆ: ಏಪ್ರಿಲ್​ 18ನ್ನು ಅಂತಾರಾಷ್ಟ್ರೀಯ ಪರಂಪರೆ ದಿನವಾಗಿ ಆಚರಿಸುತ್ತೇವೆ. 1982 ಏಪ್ರಿಲ್​ 18ರಂದು ಇಂಟರ್​​ ನ್ಯಾಷನಲ್​ ಕೌನ್ಸಿಲ್​ ಪಾರ್ಲಿಮೆಂಟ್ ಎಂಬ ಸಂಸ್ಥೆಯ ಸ್ಥಾಪನೆಯಾಗುತ್ತದೆ. ಇದರ ಉದ್ದೇಶ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪರಂಪರೆಯುಳ್ಳ ಸ್ಮಾರಕಗಳನ್ನು, ತಾಣಗಳನ್ನು ಉಳಿಸಬೇಕು ಹಾಗೂ ರಕ್ಷಣೆ ಮಾಡಬೇಕು ಎಂಬುದಾಗಿದೆ. ಆಗಿನಿಂದ ಈ ದಿನವನ್ನು ಅಂತಾರಾಷ್ಟ್ರೀಯ ಪರಂಪರೆ ದಿನ ಎಂದು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಯುನೆಸ್ಕೋ ಸಂಸ್ಥೆ ಪ್ರತಿ ವರ್ಷ ಒಂದೊಂದು ಥೀಮ್​ ಬಿಡುಗಡೆ ಮಾಡುತ್ತಾ ಬಂದಿದೆ. ಡಿಸ್ಕವರ್ ಅಂಡ್ ಎಕ್ಸ್​​ಪಿರಿಯನ್ಸ್ ಡೈವರ್ಸಿಟಿ 2024ರ ಥೀಮ್​ ಆಗಿದೆ.

ಪ್ರಪಂಚದಲ್ಲಿ 1,199 ಪಾರಂಪರಿಕ ಕಟ್ಟಡಗಳಿವೆ: ಪ್ರಪಂಚದಲ್ಲಿ 1,199 ಅಂತಾರಾಷ್ಟ್ರೀಯ ಪಾರಂಪರಿಕ ತಾಣಗಳಿವೆ. ಭಾರತದಲ್ಲಿ ಸುಮಾರು 42 ಅಂತಾರಾಷ್ಟ್ರೀಯ ಪಾರಂಪರಿಕ ತಾಣಗಳಿವೆ. ಇವುಗಳಲ್ಲಿ 4 ತಾಣಗಳು ಕರ್ನಾಟಕದಲ್ಲಿ ಇದೆ. 4ರಲ್ಲಿ ಹಂಪಿ 1982ರಲ್ಲಿ ಅಂತಾರಾಷ್ಟ್ರೀಯ ಪಾರಂಪರಿಕ ತಾಣವಾಗಿದ್ದು, ಪಟ್ಟದಕಲ್ಲು 1987ನಲ್ಲಿ, ಪಶ್ಚಿಮ ಘಟ್ಟಗಳು 2012ನಲ್ಲಿ, ಇತ್ತೀಚೆಗೆ ಕಳೆದ ವರ್ಷ ಹೊಯ್ಸಳರ ಪವಿತ್ರ ತಾಣ ಎಂದು ಮೈಸೂರಿನ ಸಂಸ್ಥೆ ಘೋಷಣೆ ಮಾಡಿತ್ತು. ಮುಂದಿನ ದಿನಗಳಲ್ಲಿ ಸ್ಮಾರಕಗಳನ್ನು ಅಂತಾರಾಷ್ಟ್ರೀಯ ಪಾರಂಪರಿಕ ಪಟ್ಟಿಯಲ್ಲಿ ಘೋಷಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳುತ್ತದೆ.

ಈ ಸಾಲಿನ ಡಿಸ್ಕವರ್​ ಅಂಡ್ ​ಎಕ್ಸ್​ ಪೆರಿಯನ್ಸ್​ ಡೈವರ್ಸಿಟಿ ಥೀಮ್​ ಎಂದರೆ ನಮ್ಮ ಪಾರಂಪರಿಕ ತಾಣಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಕ್ರಿಯೇಟ್ ಮಾಡುವುದು. ಅವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 844 ಪಾರಂಪರಿಕ ರಕ್ಷಣಾ ಸ್ಮಾರಕಗಳು ಕರ್ನಾಟಕ ರಾಜ್ಯದಲ್ಲಿವೆ. ದೇಶದ ರಕ್ಷಿತ ಸ್ಮಾರಕಗಳು 2ನೇ ಅತಿ ದೊಡ್ಡ ಸ್ಮಾರಕಗಳು ಇವುಗಳಾಗಿವೆ. ಇವುಗಳ ಜವಾಬ್ದಾರಿ ನಮ್ಮ ಇಲಾಖೆಯ ಮೇಲಿದೆ.

ಸ್ಮಾರಕಗಳ ರಕ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ: ದೇಶದಲ್ಲಿ ಇರುವಂತಹ ಎಲ್ಲಾ ಸ್ಮಾರಕಗಳ ರಕ್ಷಣೆಯಲ್ಲಿ ಮೊದಲ ಸ್ಥಾನ ಕರ್ನಾಟಕಕ್ಕಿದೆ. ನಾವು ಕರ್ನಾಟಕದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಆ ಗ್ರಾಮದಲ್ಲಿ ಇರುವ ಸ್ಮಾರಕಗಳು ಗುರುತಿಸಿ ಅವುಗಳನ್ನು ಸಂಶೋಧನೆ ಮಾಡುವ ಪ್ರಯತ್ನ ಮಾಡುತ್ತೇವೆ. ಕಳೆದ 3 ವರ್ಷಗಳಿಂದ 38 ತಾಲೂಕುಗಳಲ್ಲಿ ಸರ್ವೆ ಮಾಡಿದ್ದೇವೆ. ಸುಮಾರು 19ಸಾವಿರ ಹೆಚ್ಚಿಗೂ ಸ್ಮಾರಕಗಳನ್ನ ಪತ್ತೆ ಹಚ್ಚಿದ್ದೇವೆ.

ಹೆರಿಟೇಜ್ ಅಂದರೇನು?: ಹೆರಿಟೇಜ್ ಅಂದರೆ ಪರಂಪರೆ. ನಮ್ಮ ರಾಜರಿಗೆ ಪೂರ್ವಿಕರು ಹೇಗಿದ್ದರು, ಆರ್ಥಿಕ ಪರಿಸ್ಥಿತಿ , ಸಮಾಜದ ಪರಿಸ್ಥಿತಿ ಹೇಗಿತ್ತು ಇವೆಲ್ಲವನ್ನು ಅರಿತುಕೊಳ್ಳುವುದೇ ಪರಂಪರೆ ಆಗಿದೆ. ನಮ್ಮ ಇತಿಹಾಸ ಹೇಗಿತ್ತು ಎಂದು ಅರಿತುಕೊಂಡಾಗ ನಮ್ಮ ಭವಿಷ್ಯ ಹೇಗೆ ಇರಬೇಕು ಎಂಬ ಪರಿಕಲ್ಪನೆ ನಮ್ಮಲ್ಲಿ ಮೂಡುತ್ತದೆ. ನಮ್ಮ ಪರಂಪರೆ ತಿಳಿದುಕೊಂಡಾಗ ನಮಗೆ ಒಂದು ಗೌರವ ಬರುತ್ತದೆ.

ಮೈಸೂರಿನಲ್ಲಿ 129ಕ್ಕೂ ಪಾರಂಪರಿಕ ಕಟ್ಟಡಗಳಿವೆ: ಮೈಸೂರಿನಲ್ಲಿ ಮೊದಲ ಬಾರಿ 129 ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಇಲ್ಲಿ ಪಾರಂಪರಿಕ ಕಟ್ಟಡಗಳು ಅಂದರೆ ಆ ಕಟ್ಟಡಗಳಿಗೆ ಮಹನೀಯರು ಭೇಟಿ ಮಾಡಿದ ಸಂದರ್ಭ ಇರಬಹುದು. ಆಯಾ ಕಟ್ಟಡವನ್ನು ಸ್ಮರಣೀಯಗೊಳಿಸಲು ನಿರ್ಮಾಣ ಮಾಡಿರಬಹುದು. ಉದಾಹರಣೆಗೆ ದೊಡ್ಡ ಗಡಿಯಾರ. ಮಹಾತ್ಮ ಗಾಂಧೀಜಿ ಅವರು ಭೇಟಿ ನೀಡಿದ ಸ್ಥಳ. ಸಿಲ್ವರ್​ ಜ್ಯುಬಿಲಿ ಬ್ಲಾಕ್ ಟವರ್. ವಾಸ್ತು ಶಿಲ್ಪಕ್ಕೆ ಇವುಗಳನ್ನೆಲ್ಲ ಬೇರೆ ಬೇರೆ ಒಂದು ಆಧಾರದ ಮೇಲೆ ಸಂರಕ್ಷಣೆ ಮಾಡುವುದಕ್ಕೆ ನಮ್ಮ ಇಲಾಖೆ ಕೂಡಾ ಇದೆ. ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡುವುದು ಇಲಾಖೆಯ ಕರ್ತವ್ಯವೂ ಆಗಿದೆ.

ಯುನೆಸ್ಕೋದ ಪಾತ್ರ: ಕೆಲವು ಪ್ರದೇಶಗಳು ಅಂತಾರಾಷ್ಟ್ರೀಯ ಪಾರಂಪರಿಕ ಅರ್ಹತೆ ಹೊಂದಿದ್ದರೇ ಆ ಸ್ಥಳವನ್ನು ಪಾರಂಪರಿಕ ಸ್ಥಳ ಎಂದು ಘೋಷಣೆ ಮಾಡುವುದು ಯುನೆಸ್ಕೋ ಸಂಸ್ಥೆಯ ಪಾತ್ರ. ಬೇಲೂರು, ಹಳೇಬೀಡು, ಸೋಮನಾಥಪುರ ಈ ಮೂರು ಸ್ಥಳಗಳನ್ನು ಪಾರಂಪರಿಕ ಸ್ಥಳ ಎಂದು ಕಳೆದ ಸಾಲಿನಲ್ಲಿ ಘೋಷಣೆ ಮಾಡಲಾಗಿದೆ ಎಂದು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಮಹದೇವಪುರ ವಲಯದ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿ ಸಿದ್ಧ - Cauvery water supply

Last Updated : Apr 18, 2024, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.