ETV Bharat / state

ಕೆಆರ್​​​​​ಪುರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯಕಲ್ಪಿಸಲು ಕೋರಿ ಅರ್ಜಿ: ಬಿಬಿಎಂಪಿಗೆ ಹೈಕೋರ್ಟ್​ ನೋಟಿಸ್ - HIGH COURT NOTICE TO BBMP

ಬೆಂಗಳೂರಿನ ಕೆ.ಆರ್.ಪುರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಬಿಬಿಎಂಪಿಗೆ ನೋಟಿಸ್ ನೀಡಿದೆ.

BASIC FACILITIES  KR PURA MARKET GROUND  KARNATAKA HIGH COURT  BENGALURU
ಬಿಬಿಎಂಪಿಗೆ ಹೈಕೋರ್ಟ್​ ನೋಟಿಸ್ (ETV Bharat)
author img

By ETV Bharat Karnataka Team

Published : Oct 30, 2024, 7:14 AM IST

ಬೆಂಗಳೂರು: ನಗರದ ಕೆ.ಆರ್.ಪುರದ ಸಂತೆ ಮೈದಾನ ಮಾರುಕಟ್ಟೆಯಲ್ಲಿ ಮಳಿಗೆಗಳಿಂದ ಸೆಸ್ಸ್/ತರಿಗೆ ಸಂಗ್ರಹಿಸಲು ಅಂಜನಾ ಮೂರ್ತಿ ಎಂಬುವರಿಗೆ ಇ-ಟೆಂಡರ್ ನೀಡಿರುವ ಕ್ರಮ ಪ್ರಶ್ನಿಸಿ ಮತ್ತು ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಅಖಿಲ ಕರ್ನಾಟಕ ರೈತ ಮತ್ತು ವ್ಯಾಪಾರಿಗಳ ಒಕ್ಕೂಟ ಹಾಗೂ ಇತರ ಸ್ಥಳೀಯ ವ್ಯಾಪಾರಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ಈ ಆದೇಶ ಮಾಡಿದೆ. ಸಂತೆಮೈದಾನ ಮಾರುಕಟ್ಟೆಯ ಮಳಿಗೆಗಳಿಂದ ಒಂದು ವರ್ಷದ ಅವಧಿಗೆ ದಿನವಹಿ ಹಾಗೂ ವಾರದ ಸೆಸ್/ತೆರಿಗೆ ಸಂಗ್ರಹಿಸಲು ಟೆಂಡರ್ ಆಹ್ವಾನಿಸಿ ಬಿಬಿಎಂಪಿ 2024ರ ಸೆ.4ರಂದು ಇ-ಹಾರಾಜು ನೋಟಿಸ್ ನೀಡಿತ್ತು. ಸೆ.18ರಂದು ಇ-ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿ ಅಂಜನಾಮೂರ್ತಿ ಎಂಬುವವರನ್ನು ಯಶಸ್ವಿ ಬಿಡ್ಡುದಾರರಾಗಿ ಪರಿಗಣಿಸಲಾಯಿತು.

ಅಂಜನಾಮೂರ್ತಿ ಸಂಗ್ರಹಿಸಲು ಅರ್ಹವಾಗಿರುವ ಸಂತೆ ಮೈದಾನ ಮಾರುಕಟ್ಟೆಯ ಇರುವ 1 ಎಕರೆ 14 ಗುಂಟೆ ವಿಸ್ತೀರ್ಣದ ಜಾಗದ ಗಡಿರೇಖೆಯನ್ನು ಬಿಬಿಎಂಪಿ ಅಧಿಕಾರಿಗಳು ನಿಗದಿಪಡಿಸಿಲ್ಲ. ಸೆಸ್ ಸಂಗ್ರಹಿಸಲು ಗುತ್ತಿಗೆ ಪಡೆದಿರುವ ಯಶಸ್ವಿ ಬಿಡ್ದುದಾರರೇ ತಮ್ಮ ಮಳಿಗೆಯ ಬಾಡಿಗೆಯ ಬಾಕಿ ಪಾವತಿಸುವಲ್ಲಿ ವಿಫಲರಾಗಿ, ಸುಸ್ಥಿದಾರರಾಗಿದ್ದಾರೆ. ನಿಯಮದ ಪ್ರಕಾರ ಅಂತವರಿಗೆ ಬಿಡ್ಡಿಂಗ್​ನಲ್ಲಿ ಭಾಗವಹಿಸಲು ಅವಕಾಶವೇ ಇಲ್ಲ. ಆದ್ದರಿಂದ ಅವರಿಗೆ ಸೆಸ್/ತೆರಿಗೆ ಸಂಗ್ರಹಿಸಲು ಅನುಮತಿಸಿರುವುದೇ ಅಕ್ರಮ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅಲ್ಲದೇ, ಸಂತೆ ಮೈದಾನ ಮಾರುಕಟ್ಟೆಯಲ್ಲಿ ರೈತರಿಗೆ ಮೂಲ ಸೌಕರ್ಯಗಳೇ ಕಲ್ಪಿಸಿಲ್ಲ. ಹಾಗಾಗಿ, ರೈತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಸೆಸ್ ಸಂಗ್ರಹಿಸಲು ಹೊರಡಿಸಿರುವ ಇ - ಹರಾಜು ನೋಟಿಸ್ ರದ್ದುಪಡಿಸಬೇಕು. ಸೂಕ್ತ ರೀತಿಯಲ್ಲಿ ಸೆಸ್ ಸಂಗ್ರಹಿಸಲು ಅನುಕೂಲವಾಗುವಂತೆ ಸಂತೆ ಮೈದಾನ ಗಡಿರೇಖೆ ಗುರುತಿಸುವಂತೆ ಸರ್ಕಾರ ಹಾಗೂ ಬಿಬಿಎಂಪಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಓದಿ: ಶಿವಮೊಗ್ಗ: ಭಾರಿ ಮಳೆಗೆ ಜಿಲ್ಲೆಯಾದ್ಯಂತ 353 ಹೆಕ್ಟೇರ್​ ಭತ್ತದ ಬೆಳೆ ಹಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.