ETV Bharat / state

ನೀತಿಸಂಹಿತೆ ಉಲ್ಲಂಘಿಸಿ ಸಭೆ ಆರೋಪ: ಪುಲಕೇಶಿ ನಗರ ಶಾಸಕ, ಬೆಂಬಲಿಗರ ವಿರುದ್ಧ ಎಫ್ಐಆರ್ - ELECTION CODE OF CONDUCT

ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಪುಲಿಕೇಶಿ ನಗರ ವಿಧಾನಸಭೆ ಕ್ಷೇತ್ರದ ಶಾಸಕ ಎ ಸಿ ಶ್ರೀನಿವಾಸ್ ಅವರ ಕಚೇರಿಯಲ್ಲಿ ಸಭೆ ಆಯೋಜಿಸಿರುವ ಹಿನ್ನೆಲೆ ನೋಡಲ್ ಅಧಿಕಾರಿಗಳು ಶಾಸಕ ಹಾಗೂ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Lok Sabha Election
ಲೋಕಸಭಾ ಚುನಾವಣೆ
author img

By ETV Bharat Karnataka Team

Published : Apr 3, 2024, 5:13 PM IST

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿ ವಿಡಿಯೋ ಸರ್ವೈಲೆನ್ಸ್ ತಂಡದ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದಡಿ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ ಸಿ ಶ್ರೀನಿವಾಸ್ ಹಾಗೂ ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ನಿಯಮದಡಿ ನೋಡಲ್ ಆಫೀಸರ್ ನೀಡಿರುವ ದೂರಿನನ್ವಯ ಪುಲಿಕೇಶಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಚುನಾವಣಾಧಿಕಾರಿಗಳ ಅನುಮತಿ ಪಡೆಯದೆ ಮಂಗಳವಾರ ಮಧ್ಯಾಹ್ನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎ ಸಿ ಶ್ರೀನಿವಾಸ್ ಅವರ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ನಡೆಸಿರುವ ಮಾಹಿತಿ ಪಡೆದ ನೋಡಲ್ ಆಫೀಸರ್ ಹಾಗೂ ವೀಡಿಯೋ ಸರ್ವೈಲೆನ್ಸ್ ತಂಡ ಸ್ಥಳಕ್ಕೆ ತೆರಳಿ ವಿಚಾರಣೆ ಮಾಡಿತು. ಈ ವೇಳೆ 'ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಲು ಸಭೆ ಸೇರಲಾಗಿದೆ' ಎಂದು ಶಾಸಕರ ಬೆಂಬಲಿಗರರು ಉತ್ತರ ನೀಡಿದ್ದರು.

ಅನುಮತಿ ಪಡೆಯದೆ ಸಭೆ ಸೇರಿರುವುದರಿಂದ ವಿಡಿಯೋ ಚಿತ್ರೀಕರಿಸಿಕೊಂಡಾಗ ಶಾಸಕರ ಬೆಂಬಲಿಗರು ವಿಡಿಯೋ ಗ್ರಾಫರ್ ಬಳಿ ಐಡಿ ಕಾರ್ಡ್ ಇರದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಲವಂತವಾಗಿ ಕ್ಯಾಮೆರಾ ಕಸಿದುಕೊಂಡು ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಈ ಹಿನ್ನೆಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ನೋಡಲ್ ಆಫೀಸರ್ ದೂರು ನೀಡಿದ್ದಾರೆ. ಈ ದೂರಿನ‌ ಅನ್ವಯ ಪುಲಕೇಶಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:ಇಬ್ಬರ ನಡುವೆ ಇದ್ದ ಮುನಿಸು ಅಂತ್ಯ; ಮೋದಿಗಾಗಿ ಒಂದಾದ ವಿಶ್ವನಾಥ್-ಸುಧಾಕರ್​ - Lok Sabha election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.