ETV Bharat / state

ಬಾಹ್ಯಾಕಾಶ ಸಾಧನೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚೊತ್ತಿದರೆ ಆಚರಣೆ ಸಾರ್ಥಕ: ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ - National Space Day

ಚಂದ್ರಯಾನ-3 ರ ಯಶಸ್ಸಿನ ಸ್ಮರಣಾರ್ಥವಾಗಿ ಆಗಸ್ಟ್ 23ರಂದು ಬಾಹ್ಯಾಕಾಶ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್
ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ (ETV bharat)
author img

By ETV Bharat Karnataka Team

Published : Aug 22, 2024, 8:26 PM IST

ಬೆಂಗಳೂರು: ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಮ್ಮ ಬಾಹ್ಯಾಕಾಶ ಸಾಧನೆಗಳು ಅಚ್ಚೊತ್ತಿದರೆ ಬಾಹ್ಯಾಕಾಶ ದಿನದ ಆಚರಣೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಇನ್ನಷ್ಟು ಬಾಹ್ಯಾಕಾಶದ ಕುರಿತು ಸಾಹಸಗಳನ್ನು, ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲು ಪ್ರೇರೇಪಣೆ ಸಿಗುತ್ತದೆ. ಅಂತರಿಕ್ಷ ಕ್ಷೇತ್ರದಲ್ಲಿ ನಮ್ಮ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಲು ಈ ದಿನ ಸಹಕಾರಿಯಾಗಿದೆ ಎಂದು ಎಂದು ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಆಶಯ ವ್ಯಕ್ತಪಡಿಸಿದರು.

ನಾಡಿನ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನದ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಅಂತರಿಕ್ಷ ದಿನವನ್ನು ಆಚರಿಸಲು ಸಜ್ಜಾಗಿದ್ದೇವೆ. ಕಳೆದ ವರ್ಷ ಇದೇ ದಿನದಂದು ಚಂದ್ರಯಾನ 3ರ ವಿಕ್ರಂ ಲ್ಯಾಂಡರ್ 6 ಗಂಟೆ 3 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯಿತು. ಇದುವರೆಗೆ ಕೂಡ ಜಗತ್ತಿನ ಯಾವ ದೇಶವೂ ತನ್ನ ಬಾಹ್ಯಾಕಾಶ ನೌಕೆಯನ್ನು ದಕ್ಷಿಣ ಧ್ರುವಕ್ಕೆ ಕಳಿಸಿ ತನ್ನ ಲ್ಯಾಂಡರ್ ಅನ್ನು ಇಳಿಸಿಲ್ಲ. ಹೀಗಾಗಿ ಈ ಮಹತ್ತರ ದಿನವನ್ನು ಆಚರಿಸುವ ಮತ್ತು ವಿದ್ಯಾರ್ಥಿ ಸಮೂಹವನ್ನು ಪ್ರೇರೇಪಿಸುವ ಸಲುವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಈ ದಿನವನ್ನು ಹಬ್ಬದ ಮಾದರಿಯಲ್ಲಿ ಆಚರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ ಎಂದು ತಿಳಿಸಿದರು.

ಇಸ್ರೋನಂತಹ ಜಗತ್ತಿನ ಉತ್ಕೃಷ್ಟ ಬಾಹ್ಯಾಕಾಶ ಸಂಸ್ಥೆಯಲ್ಲಿ 37 ವರ್ಷ ಕಾರ್ಯನಿರ್ವಹಿಸಿರುವುದಕ್ಕೆ ಹೆಮ್ಮೆಯಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಇಸ್ರೋದ ಮಾದರಿಯಲ್ಲಿಯೇ ಜವಾಹರಲಾಲ್ ನೆಹರು ತಾರಾಲಯದಿಂದ ಸಹ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ನಾಳೆ ಚಂದ್ರಯಾನ 3 ರ ರಾಕೆಟ್, ರೋವರ್, ಲ್ಯಾಂಡರ್ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ. ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಬಿತ್ತರಿಸುವ ಬಿತ್ತಿ ಚಿತ್ರಗಳು, 4 ರಿಂದ 6ನೇ ತರಗತಿಯ ವಿದ್ಯಾರ್ಥಿಗಳಿಗೆ ಪಜಲ್ ಜೋಡಿಸುವ ಆಟವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 20 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಶುಕ್ರವಾರ ಜವಾಹರಲಾಲ್​ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ; ಮಕ್ಕಳಿಗೆ ಉಚಿತ ಸ್ಪರ್ಧೆ - National Space Day

ತಾರಾಲಯದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ. 30 ಜನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಚಂದ್ರನ ಕುರಿತು ಚಿತ್ರ ಬಿಡಿಸಲಿದ್ದಾರೆ. ಇನ್ನಷ್ಟು ಜನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಅವಕಾಶವನ್ನು ಸಹ ನೀಡಲಾಗಿದೆ. ಎಲ್ಲಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಮತ್ತು ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. 12 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ. ತಜ್ಞರಿಂದ ಉಪನ್ಯಾಸ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಗುರುಪ್ರಸಾದ್ ಹೇಳಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್​ ಎಲ್ಲ ಕಚೇರಿಗಳಲ್ಲಿ ಆಚರಣೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಬೆಂಗಳೂರಿನ ಮುಖ್ಯ ಕಚೇರಿ ಸೇರಿದಂತೆ ಭಾರತದಾದ್ಯಂತ ಇರುವ ತನ್ನ ಕೇಂದ್ರಗಳಲ್ಲಿ ಆಗಸ್ಟ್ 23 ರಂದು ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲು ಸಜ್ಜಾಗಿದೆ.

ಕೋರಮಂಗಲದಲ್ಲಿರುವ ಮುಖ್ಯ ಕ್ಯಾಂಪಸ್‌ನಲ್ಲಿ ಎರಡು ಸಾರ್ವಜನಿಕ ಭಾಷಣಗಳನ್ನು ಆಯೋಜಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್​ನ ಡಾ. ರೇಖೇಶ್ ಮೋಹನ್ ಅವರು ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ ಮತ್ತು ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶದಲ್ಲಿ ದೂರದರ್ಶಕಗಳನ್ನು ಏಕೆ ಇರಿಸಬೇಕು ಎನ್ನುವುದರ ಕುರಿತು ಮಾತನಾಡಲಿದ್ದಾರೆ. ನಂತರ ಇಮೇಜಿಂಗ್ ಟೆಲಿಸ್ಕೋಪ್‌ನ ಆನ್‌ಲೈನ್ ಇಮೇಜ್ ಗ್ಯಾಲರಿ ಬಿಡುಗಡೆಯಾಗಲಿದೆ.

ಇಸ್ರೋದಲ್ಲಿನ ಬಾಹ್ಯಾಕಾಶ ವಿಜ್ಞಾನ ಕಾರ್ಯಕ್ರಮದ ಮಾಜಿ ನಿರ್ದೇಶಕಿ ಡಾ. ಎಸ್. ಸೀತಾ ಅವರು ಭಾರತದ ಬಾಹ್ಯಾಕಾಶ ಮಿಷನ್‌ಗಳು, ಖಗೋಳಶಾಸ್ತ್ರದ ಕುರಿತು ಭಾಷಣವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಉಚಿತ ಪ್ರವೇಶವಿದೆ. ಇದನ್ನು ಇನ್‌ಸ್ಟಿಟ್ಯೂಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ಕೂಡಾ ನೋಡಬಹುದು ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಡೈಕೆನಾಲ್ ಸೌರ ವೀಕ್ಷಣಾಲಯದಲ್ಲಿ ಇಸ್ರೋ ವಿಜ್ಞಾನಿ ವಿ.ರಾಜಶೇಖರ್ ಅವರು ಉಪನ್ಯಾಸ ನೀಡಲಿದ್ದಾರೆ. ಸಾಕ್ಷ್ಯಚಿತ್ರ ಪ್ರದರ್ಶನಗಳು ಮತ್ತು ವಸ್ತುಸಂಗ್ರಹಾಲಯದ ಪ್ರವಾಸವನ್ನು ಒಳಗೊಂಡ ಒಂದು ದಿನದ ಸಾರ್ವಜನಿಕ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಕವಲೂರಿನ ವೈನು ಬಪ್ಪು ವೀಕ್ಷಣಾಲಯವು ನೆರೆಹೊರೆಯ ಆಹ್ವಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಷಯದ ಸ್ಪರ್ಧೆಗಳು ಮತ್ತು ಮಾತುಕತೆಗಳನ್ನು ಆಯೋಜಿಸುತ್ತಿದೆ.

ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕಾಸ್ಮೋಸ್ ಯೋಜನೆಯ ಅಡಿಯಲ್ಲಿ ಮೈಸೂರಿನ ವಿಜ್ಞಾನ ಭವನದಲ್ಲಿ ಇಸ್ರೋದ ಎಲ್. ಜಯಸಿಂಹ ಅವರಿಂದ ಕನ್ನಡದಲ್ಲಿ ಸಾರ್ವಜನಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಸಾಧನೆಗಳ ಸ್ಮರಣೆ, ಭವಿಷ್ಯದ ಅನ್ವೇಷಣೆಗಳ ಮಹತ್ವ ತಿಳಿಸಲು ಮುಖ್ಯ- ಗಿರೀಶ್ ಲಿಂಗಣ್ಣ - National Space Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.