ಬೆಂಗಳೂರು: ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದ್ದಂತೆಯೇ ಪ್ರಯಾಣಿಕರ ಸಂಖ್ಯೆೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆೆಲೆಯಲ್ಲಿ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ನಡುವೆ ನಡೆದ ಒಪ್ಪಂದದಂತೆ ಫೀಡರ್ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗುತ್ತಿದೆ. ಈಗ ಸಂಚಾರ ನಡೆಸುತ್ತಿರುವ ಎರಡು ಮೆಟ್ರೋ ಫೀಡರ್ ಬಸ್‌ಗಳ ಜೊತೆಗೆ ಹೆಚ್ಚುವರಿ ಎರಡು ಮೆಟ್ರೋ ಫೀಡರ್ ಬಸ್‌ಗಳು ಸೋಮವಾರದಿಂದ ನಗರದ ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿವೆ.
ನಗರದ ಭಟ್ಟರಹಳ್ಳಿ, ಸೀಗೇಹಳ್ಳಿ ಸರ್ಕಲ್, ಕುದುರೆಸೊನ್ನೆೆನಹಳ್ಳಿ ಮತ್ತು ಬೆಲ್ತೂರು ಮೂಲಕ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಟಿನ್ ಫ್ಯಾಕ್ಟರಿಯವರೆಗೆ ಒಂದು ಮೆಟ್ರೋ ಫೀಡರ್ ಬಸ್ ಪ್ರತಿದಿನ ಮೂರು ಟ್ರಿಪ್‌ಗಳನ್ನು ಏಕಮುಖವಾಗಿ ಸಂಚಾರ ಮಾಡಲಿದೆ. ಬಳಿಕ ಮತ್ತೆ ಈ ಬಸ್ ಟಿನ್ ಫ್ಯಾಕ್ಟರಿಯಿಂದ ಬೆಳಿಗ್ಗೆೆ 7.10, 9.30 ಮತ್ತು ಸಂಜೆ 6.40ಕ್ಕೆೆ ಹಾಗೂ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆೆ 8.30, ಸಂಜೆ 5.20 ಮತ್ತು ರಾತ್ರಿ 8 ಗಂಟೆಗೆ ಹೊರಡಲಿದೆ.
ಮೆಟ್ರೋ ಫೀಡರ್ ಬಸ್ (ಎಂಎಫ್- 46) ನಗರದ ಕೆಂಗೇರಿ ಟಿಟಿಎಂಸಿ ನಿಲ್ದಾಣದಿಂದ ಕೆಂಗೇರಿ ಆರ್‌ಡಬ್ಲ್ಯೂಎಸ್ ಗೇಟ್, ದೊಡ್ಡಬೆಲೆ, ಪ್ರಾವಿಡೆಂಟ್ ಸನ್ವರ್ತ್ ಅಪಾರ್ಟ್‌ಮೆಂಟ್, ಸೇಂಟ್ ಬೆನಡಿಕ್ಟ್ ಚರ್ಚ್, ಅಂಚೆಪಾಳ್ಯ ಮತ್ತು ಕೆಂಗೇರಿ ಮೂಲಕ ಕೆಂಗೇರಿ ಟಿಟಿಎಂಸಿಗೆ ಸೇವೆ ನೀಡಲಿದೆ. ಈ ಮಾರ್ಗದಲ್ಲಿ ದಿನಕ್ಕೆೆ ಎರಡು ಬಸ್‌ಗಳು 21 ಟ್ರಿಪ್‌ಗಳನ್ನು ಪೂರೈಸಲಿದೆ. ಮೊದಲ ಬಸ್ ಬೆಳಿಗ್ಗೆೆ 8.10ಕ್ಕೆೆ ಮತ್ತು ಕೊನೆಯ ಬಸ್ ಸಂಜೆ 7.45ಕ್ಕೆೆ ಹೊರಡಲಿದೆ.
ಎಂಎಫ್ ಬಸ್ ಸೇವೆ ಶಾಲಾ, ಕಾಲೇಜುಗಳಿಗೂ ವಿಸ್ತರಣೆ: ನಮ್ಮ ಮೆಟ್ರೋ ವ್ಯಾಪ್ತಿಯ ನಿಲ್ದಾಣ ಹಾಗೂ ಪ್ರಯಾಣಿಕರ ಕೊನೆ ಮೈಲಿವರೆಗೆ ಮೆಟ್ರೊ ಫೀಡರ್ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದು, ಈ ಸಂಬಂಧ ಬಿಎಂಟಿಸಿ ನಿಗಮದೊಂದಿಗೆ ಒಪ್ಪಂದ ಏರ್ಪಟ್ಟಿದೆ. 121ಕ್ಕೂ ಹೆಚ್ಚು ಮೆಟ್ರೋ ಫೀಡರ್ ಬಸ್‌ಗಳು ಸೇವೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಒಟ್ಟು 300ರವರೆಗೆ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ 'ಯಜಮಾನ'ರಾಗಿ 14 ದಂಪತಿಗಳು ಭಾಗಿ, ಕನ್ನಡಿಗರಿಗೂ ಅವಕಾಶ