ETV Bharat / state

ಎರಡ್ಮೂರು ದಿ‌ನಗಳಲ್ಲಿ ನಟ ದರ್ಶನ್​​ ಬೇರೆ ಜೈಲಿಗೆ ಸ್ಥಳಾಂತರ: ಸಚಿವ ಜಿ. ಪರಮೇಶ್ವರ್ - Minister G Parameshwar

ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೌಲತ್ತು ಪಡೆದಿರುವ ಫೋಟೋ ವೈರಲ್​ ಆದ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ​ ಗೃಹ ಸಚಿವ ಜಿ.ಪರಮೇಶ್ವರ್​, ಕೋರ್ಟ್ ನಿರ್ದೇಶನದ ಮೇರೆಗೆ ಎರಡು ಮೂರು ದಿನಗಳಲ್ಲಿ ಬೇರೆ ಜೈಲಿಗೆ ಅವರನ್ನು ಸ್ಥಳಾಂತರ ಮಾಡುವುದಾಗಿ ಹೇಳಿದ್ದಾರೆ.

ಸಚಿವ ಜಿ. ಪರಮೇಶ್ವರ್
ಸಚಿವ ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : Aug 27, 2024, 1:55 PM IST

Updated : Aug 27, 2024, 3:07 PM IST

ಸಚಿವ ಜಿ. ಪರಮೇಶ್ವರ್ (ETV Bharat)

ಬೆಂಗಳೂರು: "ಬೇರೆ ಜೈಲಿಗೆ ದರ್ಶನ್​ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡುವುದಕ್ಕೆ ಆಗುವುದಿಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳಾಂತರ ಆಗಲಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಆಗಲಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಜೈಲು ಪ್ರಾಧಿಕಾರವು ಕೋರ್ಟ್​​ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಲಿದೆ. ವಿಚಾರಣಾ ಕೈದಿ ಆಗಿರುವ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳಡಿ ಎರಡ್ಮೂರು ದಿನಗಳಲ್ಲಿ ಆಗಲಿದೆ. ನಾನು ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದೆ. ಕೆಲವು ಲೋಪಗಳು ನಮಗೆ ಕಂಡು ಬಂದವು. ವಿಲ್ಸನ್ ಗಾರ್ಡನ್​ ನಾಗನಿಗೆ ಒಂದು ಬ್ಯಾರಕ್​ನಿಂದ ಮತ್ತೊಂದು ಬ್ಯಾರಕ್​ಗೆ ಹೋಗಲು ಅವಕಾಶ ಕೊಟ್ಟಿದ್ದಾರೆ ಅಂತ ಗೊತ್ತಾಗಿದೆ. ಅದು ಸಿಸಿಟಿವಿಯಲ್ಲೂ ದಾಖಲಾಗಿದೆ" ಎಂದರು.

"ಈ ಹಿನ್ನೆಲೆಯಲ್ಲಿ ನಾವು ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಈಗಾಗಲೇ 9 ಅಧಿಕಾರಿಗಳನ್ನು, ಚೀಫ್ ಸೂಪರಿಂಟೆಂಡೆಂಟ್ ಸೇರಿ ಇನ್ನೋರ್ವ ಅಧೀಕ್ಷಕರನ್ನೂ ಸಸ್ಪೆಂಡ್ ಮಾಡಿದ್ದೇವೆ.‌ ಇನ್ಯಾರ್ಯಾರು ದರ್ಶನ್ ಗೆ ಸಹಕಾರ ಕೊಟ್ಟಿದ್ದಾರೋ ಅವರನ್ನೂ ಸಸ್ಪೆಂಡ್ ಮಾಡಲಾಗಿದೆ. ತನಿಖೆ ಇನ್ನೂ ಮುಂದುವರೆದಿದೆ. ಮುಂದಿನ ತನಿಖೆಗಾಗಿ ಇಂದು ಒಬ್ಬರು ಐಪಿಎಸ್ ಅಧಿಕಾರಿ ನೇಮಕ ಮಾಡುತ್ತೇವೆ. ಇವರು ಕೊಡುವ ವರದಿ ಆಧರಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳುತ್ತೇವೆ" ಎಂದರು.

ಪರಪ್ಪನ ಅಗ್ರಹಾರ ಜೈಲು ಮೂರು ವಿಭಾಗ ಮಾಡುವ ಪ್ರಸ್ತಾಪ ವಿಚಾರವಾಗಿ ಮಾತನಾಡಿ, "ಭದ್ರತೆ ದೃಷ್ಟಿಯಿಂದ ಆಂತರಿಕ ಆಡಳಿತದ ಸೆಟಪ್ ಮಾಡಬಹುದು. ಆದರೆ ಮೂರು ಭಾಗ ಮಾಡಲು ಆಗಲ್ಲ. ಬ್ಲಾಕ್​ವಾರು, ಬ್ಯಾರಕ್​ವಾರು ವಿಭಾಗಗಳಾಗಿ ಮಾಡಬಹುದು. ಅದು ಜೈಲು ಆಡಳಿತದವರಿಗೆ ಸಂಬಂಧಿಸಿದ ವಿಚಾರ" ಎಂದು ತಿಳಿಸಿದರು.

ಜೈಲಿನ ಸುಧಾರಣೆಗೆ ಹೆಚ್​.ಕೆ. ಪಾಟೀಲ್ ವರದಿ ಜಾರಿ ಮಾಡುವುದಕ್ಕೆ ಪ್ರತಿಕ್ರಿಯಿಸಿ, "ನಮ್ಮ ಹೆಚ್.ಕೆ. ಪಾಟೀಲರು ಒಂದು ವರದಿ ಕೊಟ್ಟಿರೋದಾಗಿ ಹೇಳಿದ್ದಾರೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಈಗ ಆ ವರದಿ ತರಿಸಿಕೊಂಡು ನೋಡುತ್ತೇನೆ. 10-12 ವರ್ಷಗಳ ಹಿಂದೆ ರಾಷ್ಟ್ರ ಮಟ್ಟದಲ್ಲಿ ಪೊಲೀಸ್​​ ಸುಧಾರಣೆ, ಜೈಲು ಸುಧಾರಣೆ ಸಂಬಂಧ ಒಂದು ಸಮಿತಿ ವರದಿ ಕೊಟ್ಟಿದ್ದರು. ಆ ವರದಿಯನ್ನೂ ತರಿಸಿಕೊಳ್ಳುತ್ತೇವೆ. ಒಟ್ಟಾರೆ ಈಗಿನ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಅಗತ್ಯ ಇದೆ, ಅದನ್ನು ಮಾಡ್ತೇವೆ" ಎಂದರು.

ಸಾಕ್ಷಿಗಳನು ಹೆದರಿಸಲು ದರ್ಶನ್​ ರಾಯಲ್ ಟ್ರೀಟ್ಮೆಂಟ್ ಫೋಟೋ ವೈರಲ್ ಎಂಬ ಜೋಷಿ ಆರೋಪ ನಿರಾಕರಿಸಿದ ಪರಮೇಶ್ವರ್, "ನಾವು ಯಾಕೆ ಈ ಫೋಟೋ ವೈರಲ್ ಮಾಡುತ್ತೇವೆ?. ಅದರ ಅಗತ್ಯ ನಮಗೆ ಇಲ್ಲ. ಯಾರಿಗೆ ಶಿಕ್ಷೆ ಆಗಬೇಕು, ಯಾರಿಗೆ ನ್ಯಾಯ ಸಿಗಬೇಕೋ ಅದನ್ನು ಮಾಡುತ್ತೇವೆ. ಈ ಘಟನೆಯ ರಾಜಕೀಯ ಲಾಭ ತೆಗೆದುಕೊಳ್ಳುವ ಕೆಲಸ ಮಾಡಲ್ಲ ನಾವು" ಎಂದರು.

ಮುಂದುವರೆದ ಗೃಹ ಸಚಿವರು, "ಬೇರೆ ವಿಐಪಿ ಕೈದಿಗಳಿಗೂ ಇದೇ ವ್ಯವಸ್ಥೆ ಇದೆ ಎಂಬ ಅನುಮಾನಕ್ಕೆ, ದರ್ಶನ್​ ವಿಚಾರ ಒಂದೇ ಅಲ್ಲ. ಬೇರೆ ಎಲ್ಲ ವ್ಯವಸ್ಥೆ ಪರಿಶೀಲಿಸುತ್ತೇವೆ. ಬೇರೆ ಬೇರೆ ಜೈಲುಗಳ ಲೋಪಗಳ ಬಗ್ಗೆಯೂ ವರದಿ ತರಿಸಿಕೊಳ್ಳುತ್ತೇವೆ. ಶಿವಮೊಗ್ಗ, ಬಳ್ಳಾರಿ, ಮಂಗಳೂರು ವ್ಯವಸ್ಥೆ ಗಳನ್ನು ಪರಿಶೀಲನೆ ಮಾಡುತ್ತೇವೆ" ಎಂಬ ಭರವಸೆ ನೀಡಿದರು.

ಇದನ್ನೂ ಓದಿ:ಕಾರಾಗೃಹದಲ್ಲಿ ಕೊಲೆ ಆರೋಪಿ ದರ್ಶನ್ ಬಿಂದಾಸ್​ ಲೈಫ್​ ವಿಚಾರ: 'ನೋ ಕಮೆಂಟ್ಸ್'​ ಎಂದ ಸಚಿವ ಲಾಡ್ - minister santosh lad

Last Updated : Aug 27, 2024, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.