ETV Bharat / state

ಅಪರಿಚಿತ APK ಫೈಲ್ ಕಳಿಸಿ ಮಂಗಳೂರಿಗನಿಗೆ ಹ್ಯಾಕ್, ವಂಚನೆ: ದೆಹಲಿಯಲ್ಲಿ ಆರೋಪಿ ಬಂಧನ - APK FILE CHEATING

ಅಪರಿಚಿತ ಎಪಿಕೆ ಫೈಲ್ ಕಳುಹಿಸಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ಸಿಇಎನ್​ ಕ್ರೈಂ ಠಾಣೆ ಬಂಧನ ಮಾಡಿದ್ದಾರೆ.

accused
ಆರೋಪಿ (ETV Bharat)
author img

By ETV Bharat Karnataka Team

Published : Dec 7, 2024, 6:59 AM IST

ಮಂಗಳೂರು: ಅಪರಿಚಿತ ಎಪಿಕೆ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.31 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಸಿಇಎನ್​ ಕ್ರೈಂ ಠಾಣೆ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ದೆಹಲಿಯ ಮಾಳ್ವವಿಯಾ ನಗರದ ಪಂಚಶೀಲ ವಿಹಾರದ ಗೌರವ್ ಮಕ್ವಾನ್ (25) ಬಂಧಿತ ಆರೋಪಿ.

ಆರೋಪಿಯು ಯದುನಂದನ್ ಎಂಬವರ ವಾಟ್ಸ್​ಆ್ಯಪ್​ಗೆ VAHAN PARIVAHAN.apk ಫೈಲ್ ಕಳುಹಿಸಿದ್ದ. ಆದರೆ, ಫೈಲ್ ಡೌನ್​ಲೋಡ್ ಮಾಡುತ್ತಿದ್ದಂತೆ ಯದುನಂದನ್‌ ಅವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಬಳಿಕ, ಸೈಬರ್ ವಂಚಕರು ಪ್ಲಿಪ್ ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​​ಗಳಿಂದ 1,31,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್, 1 ಏರ್​ಪಾಡ್ ಹಾಗೂ ಗಿಫ್ಟ್ ವೋಚರ್​ಗಳನ್ನು ಖರೀದಿ ಮಾಡಿದ್ದರು. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು, ಪ್ಲಿಪ್ ಕಾರ್ಟ್ ಕಂಪನಿಯಿಂದ ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಸಿಇಎನ್​​ ಕ್ರೈಂ ಪೊಲೀಸ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾರೆಡ್ಡಿ ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: ಹುಷಾರ್​​​​​​​​​​​​​.. ಈ ಸಂಖ್ಯೆಗಳಿಂದ ನಿಮಗೆ ಕರೆಗಳು ಬರುತ್ತಿವೆಯಾ?: ಹಾಗಾದರೆ ಈ ಕರೆಗಳನ್ನು ಎತ್ತಲೇಬೇಡಿ! ಏಕೆ ಅಂತೀರಾ?

ಆರೋಪಿಯಿಂದ ಪ್ರಕರಣಕ್ಕೆ ಸಂಬಂ‍ಧಿಸಿದ ಎರಡು ಅಂಡ್ರಾಯ್ಡ್ ಫೋನ್ ಸೇರಿದಂತೆ ಐದು ಐಪೋನ್-15, ಎರಡು ಏರ್​​ಪ್ಯಾಡ್ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 2 ಗಂಟೆಗಳ ಕಾಲ ಡಿಜಿಟಲ್​ ಅರೆಸ್ಟ್​ ಆದ ಮಾಜಿ ಫೆಮಿನಾ ಮಿಸ್​ ಇಂಡಿಯಾ: 99,000 ರೂ. ಸೈಬರ್​ ವಂಚನೆ

ಇದನ್ನೂ ಓದಿ: ನಿವೃತ್ತ ನೌಕಾಧಿಕಾರಿ 22 ದಿನ ಡಿಜಿಟಲ್​ ಅರೆಸ್ಟ್​; ಬರೋಬ್ಬರಿ 98 ಲಕ್ಷ ರೂ. ಪೀಕಿದ ಸೈಬರ್​ ವಂಚಕರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.