ಮಂಡ್ಯ: ಸರ್ಕಾರಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಯುವಕರ ತಂಡ ಬಸ್ಗೆ ಕಲ್ಲು ಹೊಡೆದ ಪರಿಣಾಮ ಬಸ್ನ ಗಾಜು ಪುಡಿ ಪುಡಿಯಾಗಿ, ಮಹಿಳೆ ಗಾಯಗೊಂಡಿರುವ ಘಟನೆ ಮದ್ದೂರು ಪಟ್ಟಣದ ಕೊಪ್ಪ ಸರ್ಕಲ್ ಬಳಿ ನಡೆದಿದೆ.
ಮಹೇಶ್, ಗಿರೀಶ್, ಮಧುಕುಮಾರ್, ಯಶವಂತ್ ಮತ್ತು ದೀಪು ಎಂಬ 5 ಮಂದಿ ಯುವಕರು ಬೆಂಗಳೂರಿಗೆ ತೆರಳುತ್ತಿದ್ದ (KA -42-F-2146) ಬಸ್ ಹತ್ತಲು ಮುಂದಾಗಿದ್ದಾರೆ. ಯುವಕರು ಬಸ್ ಹತ್ತಲು ತಡ ಮಾಡಿದ ಪರಿಣಾಮ ನಿರ್ವಾಹಕ ಇವರನ್ನು ಬಿಟ್ಟು ತೆರಳಲು ಚಾಲಕನಿಗೆ ಸೂಚನೆ ನೀಡಿದ್ದಾನೆ.
ಇದರಿಂದ ಆಕ್ರೋಶಗೊಂಡ ಯುವಕರ ಗುಂಪು ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ಹಿಂಬದಿ ಗಾಜಿಗೆ ಕಲ್ಲಿನಿಂದ ತೂರಿದ್ದಾರೆ. ಈ ವೇಳೆ ಕಲ್ಲು ಬಸ್ನ ಹಿಂಬದಿ ಗಾಜಿಗೆ ತಗುಲಿದ ಪರಿಣಾಮ ಗಾಜು ಪುಡಿ ಪುಡಿಯಾಗಿ ಬಸ್ನಲ್ಲಿದ್ದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಏನಾಯಿತೆಂದು ವಿಚಾರಿಸಿದಾಗ ಯುವಕರು ಕಲ್ಲು ತೂರಿರುವುದು ಬೆಳಕಿಗೆ ಬಂದಿದೆ.
ನಾಲ್ವರು ಯುವಕರು ಪರಾರಿ : ಯುವಕರು ಮದ್ಯಪಾನ ಮಾಡಿದ್ದರು ಎಂದು ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ಬಸ್ ನಿರ್ವಾಹಕ ಬಸ್ ಅನ್ನು ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ಅಲ್ಲಿಯೇ ಇದ್ದ ಒಬ್ಬ ಯುವಕನನ್ನು ಹಿಡಿದುಕೊಳ್ಳುತ್ತಿದ್ದಂತೆ, ನಾಲ್ವರು ಯುವಕರು ಪರಾರಿಯಾಗಿದ್ದಾರೆ.
ಯುವಕರು ಯಾವ ಊರು ಹಾಗೂ ಮಹಿಳೆ ಯಾರು, ಯಾವ ಊರು ಎಂಬ ಮಾಹಿತಿ ತಿಳಿದು ಬಂದಿಲ್ಲ. ಬಳಿಕ ಪೊಲೀಸರಿಗೆ ಒಬ್ಬನನ್ನು ಒಪ್ಪಿಸಿ ನಂತರ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ನಲ್ಲಿ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ನಂತರ ಪೊಲೀಸರು ಬಸ್ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಬಸ್ಗಳ ಮೇಲೆ ಕಲ್ಲೆಸೆತ: ಇಬ್ಬರು ಕಿಡಿಗೇಡಿಗಳ ಬಂಧನ, ಪ್ರಯಾಣಿಕನಿಗೆ ಗಾಯ