ETV Bharat / state

ವಿಜಯಪುರ: ಸಾರಿಗೆ ಬಸ್​ಗಳ ಮಧ್ಯೆ ಅಪಘಾತ; 40 ಜನರಿಗೆ ಗಾಯ - ಬಸ್​ ಅಪಘಾತ

ಕೆಎಸ್​ಆರ್​ಟಿಸಿ ಬಸ್​ಗಳೆರಡರ ಮಧ್ಯೆ ಅಪಘಾತ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

Etv Bharವಿಜಯಪುರ: ಸಾರಿಗೆ ಬಸ್​ಗಳ ಮಧ್ಯೆ ಅಪಘಾತ; 40 ಜನರಿಗೆ ಗಾಯ
ವಿಜಯಪುರ: ಸಾರಿಗೆ ಬಸ್​ಗಳ ಮಧ್ಯೆ ಅಪಘಾತ; 40 ಜನರಿಗೆ ಗಾಯ
author img

By ETV Bharat Karnataka Team

Published : Feb 19, 2024, 4:44 PM IST

ವಿಜಯಪುರ: ಎರಡು ಕೆಎಸ್​ಆರ್​ಟಿಸಿ ಬಸ್‌ಗಳ ಮಧ್ಯೆ ಅಪಘಾತ ಸಂಭವಿಸಿ ನಲವತ್ತಕ್ಕೂ ಹೆಚ್ಚಿನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಲ್ಲಿಯ ಚಡಚಣ ಸಮೀಪ ಇಂದು ನಡೆದಿದೆ.

ಎದುರಿನಿಂದ ವೇಗವಾಗಿ ಬಂದ ಶಾಲಾ ವಾಹನಕ್ಕೆ ಡಿಕ್ಕಿ ತಪ್ಪಿಸಲು ಕೆಎಸ್​​ಆರ್​ಟಿಸಿ ಬಸ್​ ಚಾಲಕ ಸಡನ್​ ಬ್ರೇಕ್​ ಹಾಕಿದ್ದಾನೆ. ಇದರಿಂದ ಹಿಂಬದಿ ಬರುತ್ತಿದ್ದ ಇನ್ನೊಂದು ಸಾರಿಗೆ ಬಸ್‌ ನಿಯಂತ್ರಣಕ್ಕೆ ಬಾರದೆ ಮುಂದಿನ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ಬಸ್‌ಗಳಲ್ಲಿದ್ದ ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಾಳುಗಳಾಗಿವೆ. ಈ ಪೈಕಿ ಹತ್ತಕ್ಕೂ ಹೆಚ್ಚಿನ ಜನರಿಗೆ ಹಲ್ಲು, ಕೈ, ಕಾಲು ಮೂಳೆ ಮುರಿತದಂತಹ ಗಂಭೀರ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್​ ಮೂಲಕ ಹತ್ತಿರದ ಚಡಚಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಐಶ್ವರ್ಯ ಜತ್ತಿ ಎನ್ನುವ ವಿದ್ಯಾರ್ಥಿನಿ ತಲೆಗೆ ಗಂಭೀರ ಪೆಟ್ಟಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಡಚಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತಕ್ಕಿಡಾದ ಎರಡೂ ಬಸ್‌ಗಳು ಇಂಡಿ ಡಿಪೋಗೆ ಸೇರಿದ್ದಾಗಿದ್ದು, ಇಂಡಿ -ಭತಗುಣಕಿ - ಚಡಚಣ ಮತ್ತು ಹಿಂಗಣಿ - ಚಡಚಣಕ್ಕೆ ಈ ಬಸ್‌ಗಳು ಪ್ರಯಾಣ ಬೆಳೆಸಿದ್ದವು.

ನಿರ್ವಾಹಕನ ಕಾಲಿನ ಮೇಲೆ ಹರಿದ ಬಿಎಂಟಿಸಿ ಬಸ್

ಬೆಂಗಳೂರು: ಬಿಎಂಟಿಸಿ ನಿರ್ವಾಹಕ‌ನ ಪಾದದ ಮೇಲೆ ಬಸ್ ಹರಿದಿರುವ ಘಟನೆ ಜಯನಗರದ ಬಿಎಂಟಿಸಿ ಬಸ್​ ನಿಲ್ದಾಣ ಬಳಿ ನಡೆದಿದೆ. ಬಸ್ ಚಕ್ರಕ್ಕೆ ನಿರ್ವಾಹಕನ ಪಾದ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕರ್ತವ್ಯಕ್ಕೆ ಹಾಜರಾಗಲು ಬೆಳಿಗ್ಗೆ 11:45ಕ್ಕೆ ಬಸ್​ನಲ್ಲಿ ಬರುತ್ತಿದ್ದ ನಿರ್ವಾಹಕ ತಡವಾಗುತ್ತಿದೆ ಎಂದು ನಿಲ್ದಾಣ ಸಮೀಪಿಸುತ್ತಿದ್ದಂತೆ ಅವಸರದಲ್ಲಿ ಇಳಿಯಲು ಮುಂದಾಗಿದ್ದಾನೆ. ಇದೇ ಸಂದರ್ಭದಲ್ಲಿ ನಿಲ್ದಾಣದ ಬಳಿ ಇದ್ದ ರಸ್ತೆ ತಡೆಗೆ ಕಾಲು ತಾಗಿ ಕೆಳಕ್ಕೆ ಬಿದ್ದಿದ್ದ. ಈ ವೇಳೆ ಆತನ ಬಲ ಪಾದ ಬಸ್ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿದೆ. ಗಾಯಾಳುವನ್ನ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ರಾಯಚೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, ಮಹಿಳೆಯರಿಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.