ETV Bharat / state

ಮರಿಶಾಂತವೀರ ಶ್ರೀಗಳು ಗುಡಿಸಲಲ್ಲಿರುವ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿದರು: ಗವಿಸಿದ್ದೇಶ್ವರ ಶ್ರೀ - Gavisiddeswara Swamiji

author img

By ETV Bharat Karnataka Team

Published : Jul 1, 2024, 8:29 PM IST

Updated : Jul 1, 2024, 8:44 PM IST

ಗವಿಸಿದ್ದೇಶ್ವರ ಶ್ರೀಗಳು ಇಂದು ಗವಿಮಠದ ಆವರಣದಲ್ಲಿ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ, ಶ್ರೀ ಮರಿಶಾಂತವೀರ ಸ್ವಾಮೀಜಿ ಗುಡಿಸಲಲ್ಲಿರುವ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತುವ ಆಶಯ ಹೊಂದಿದ್ದರು. ಅದೇ ಆಶಯದಿಂದ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

ಗವಿಸಿದ್ದೇಶ್ವರ ಶ್ರೀ
ಗವಿಸಿದ್ದೇಶ್ವರ ಶ್ರೀ (ETV Bharat)

ಅಭಿನವ ಗವಿಸಿದ್ದೇಶ್ವರ ಶ್ರೀ (ETV Bharat)

ಕೊಪ್ಪಳ: ತ್ರಿವಿಧ ದಾಸೋಹಕ್ಕೆ ಹೆಸರಾಗಿರುವ ಗವಿಸಿದ್ದೇಶ್ವರ ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಶ್ರೀ ಮರಿಶಾಂತವೀರ ಸ್ವಾಮೀಜಿ ಗುಡಿಸಲಲ್ಲಿರುವ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತುವ ಆಶಯ ಹೊಂದಿದ್ದರು. ಅದೇ ಆಶಯದಿಂದ ನಾವು ಮುನ್ನಡೆಯುತ್ತಿದ್ದೇವೆ ಎಂದು ಅಭಿನವ ಗವಿಸಿದ್ದೇಶ್ವರ ಶ್ರೀ ಹೇಳಿದರು. ಗವಿಮಠದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಬೃಹತ್​ ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಕಾರಣ, ಜೀವನದಲ್ಲಿ ಸಫಲತೆ ಹೊಂದಬೇಕು. ಸಫಲತೆ ಪಡೆಯಲು ಹುಟ್ಟುವಾಗ ಯಾರ ಹಣೆಯ ಮೇಲೆ ಲೇಬಲ್ ಇರೋದಿಲ್ಲ. ಗೊತ್ತಿಲ್ಲದೇ ಜಗತ್ತಿಗೆ ಬಂದು ಹಲವು ವೈರುಧ್ಯಗಳ ಮಧ್ಯೆ ಸಫಲತೆ ಸಾಧಿಸಬೇಕು. ಡಸ್ಟ್ ಬಿನ್ ಸಹ ನನ್ನ ಉಪಯೋಗಿಸಿ ಎನ್ನುತ್ತೆ. ಮನುಷ್ಯನಾಗಿ ನಾವೂ ನನ್ನ ಉಪಯೋಗಿಸಿ ಎನ್ನಬೇಕು. ಮನುಷ್ಯ ಸಫಲತೆ ಯಾವಾಗ ಎಂದರೆ ಇನ್ನೊಬ್ಬರ ದುಃಖದ ಕಣ್ಣೀರು ಒರೆಸಿದಾಗ ಎಂದರು.

ಕರುಣೆಯೇ ನಿಜವಾದ ಧರ್ಮ: ಮನುಕುಲಕ್ಕೆ ಒಳ್ಳೆಯದು ಮಾಡೋದು ನಿಜವಾದ ಧರ್ಮ. ನಿಸರ್ಗ ಪ್ರತಿದಿನ ತನ್ನ ಧರ್ಮ ಪಾಲಿಸುತ್ತದೆ. ಮನುಷ್ಯನಾದವನು ತನ್ನ ಧರ್ಮ ಪಾಲಿಸುವಲ್ಲಿ ಎಡವಿದ್ದಾನೆ. ಇತರರ ವೇದನೆಗಳನ್ನು ಅರಿತುಕೊಳ್ಳೋದು ಧರ್ಮ. ಕರುಣೆಯೇ ನಿಜವಾದ ಧರ್ಮ. ಮುಂದಿನ ವರ್ಷ ಶ್ರೀಗಳ ಪುಣ್ಯರಾಧನೆಯಂದು 1,200 ವಿದ್ಯಾರ್ಥಿನಿಯರಿಗೆ ವಸತಿ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಇದು ಕಲಿಕೆಗಾಗಿ..! ಒಂದೇ ಊರಿನಿಂದ 185 ದೇಹ ದಾನಕ್ಕೆ ಒಪ್ಪಿಗೆ: ದೇಶಕ್ಕೆ ಮಾದರಿಯಾದ ಶೇಗುಣಸಿ ಗ್ರಾಮ - AGREED TO DONATE BODIES

Last Updated : Jul 1, 2024, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.