ETV Bharat / state

ಧಾರವಾಡ: ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್​​​ ಸ್ಫೋಟ; ಮಹಿಳೆ ಸಾವು, ಮೂವರಿಗೆ ಗಾಯ

ಧಾರವಾಡದಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಸಿಲಿಂಡರ್​​​ ಸ್ಫೋಟ
ಸಿಲಿಂಡರ್​​​ ಸ್ಫೋಟ
author img

By ETV Bharat Karnataka Team

Published : Mar 20, 2024, 12:55 PM IST

Updated : Mar 20, 2024, 1:31 PM IST

ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್​​​ ಸ್ಫೋಟ

ಧಾರವಾಡ: ಅಡುಗೆ ಅನಿಲ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ನಡೆದಿದೆ.

ಮಹಾದೇವಿ ಒಗೆನ್ನವರ(28)ಮೃತ ಮಹಿಳೆಯಾಗಿದ್ದು, ಸುರೇಶ ಒಗೆನ್ನವರ, ಶ್ರೀಧರ ಒಗೆನ್ನವರ, ಚಿನ್ನಪ್ಪ ಒಗೆನ್ನವರ ಹಾಗೂ ಗಂಗವ್ವ ಒಗೆನ್ನವರ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ‌.

ಇಂದು ಬೆಳಗಿನ ಜಾವ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಸಿಲಿಂಡರ್​ ಸೋರಿಕೆಯಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಮನೆ ತುಂಬ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ.

ಅಡುಗೆ ಮನೆಯಲ್ಲೇ ಇದ್ದ ಮಹಿಳೆ ಮಹಾದೇವಿ ಹೊರಗಡೆ ಬರಲಾಗದೇ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾರೆ. ಇದರಿಂದ ಮಹಾದೇವಿ ದೇಹ ಸಂಪೂರ್ಣ ಬೆಂದು ಹೋಗಿದೆ. ಉಳಿದವರು, ಹಾಗೋ ಹೀಗೋ ಮಾಡಿ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ. ಅಕ್ಕಪಕ್ಕವೇ 2-3 ಸಿಲಿಂಡರ್​ಗಳಿದ್ದವು. ಆದರೆ ಅವುಗಳಿಗೆ ಬೆಂಕಿ ತಗುಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಹಾಗೂ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

Last Updated : Mar 20, 2024, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.